ಶಿಕ್ಷಕಿ ಕೌಮುದಿ ಸಂಸ್ಮರಣೆ : ಸ್ವಾತಂತ್ರ್ಯಹೋರಾಟಕ್ಕೆ ಕೊಡುಗೆ ನೀಡಿದ ಟೀಚರ್ :

koumudi
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಹರಿಜನ ಪುನರುತ್ಥಾನದ ಅಂಗವಾಗಿ ವಡಗರಕ್ಕೆ ಆಗಮಿಸಿದ್ದ ಸಂದರ್ಭ ಮಹಾತ್ಮಗಾಂಧಿ ಅವರನ್ನು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಆಭರಣ ಸಮರ್ಪಿಸಿದ್ದ ಶಿಕ್ಷಕಿ ಕೌಮುದಿ ಅವರ ಸಂಸ್ಮರಣಾ ಸಮಾರಂಭ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ವಿದ್ಯಾರ್ಥಿಗಳು ಹಿಂದಿಯಲ್ಲಿ ತಯಾರಿಸಿದ ಶಿಕ್ಷಕಿ ಕೌಮುದಿ ಅವರ ಜೀವನ ಚರಿತ್ರೆಯನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ಹಿಂದಿ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಸೆರೆನ್ ಮರ್ಯಮ್ ಸುಬಿಶ್, ಕೌಮುದಿ ಟೀಚರ್ ಅವರ ವೇಷ ಧರಿಸಿ ವಿದ್ಯಾರ್ಥಿಗಳಲ್ಲಿ ಕೌತುಕ ಮೂಡಿಸಿದರು. ಏಳನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಆಳ್ವ ಸಿದ್ಧಪಡಿಸಿದ ಕೌಮುದಿ ಶಿಕ್ಷಕಿಯ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಕವಿ ಎಂ.ಪಿ.ಜಿಲ್‌ಜಿಲ್ ಬಿಡುಗಡೆಗೊಳಿಸಿ ಸಮಾರಂಭ ಉದ್ಘಾಟಿಸಿದರು.

ಶಾಲಾರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಶೀದ್ ಪೂರಣಂ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಾಯಕಿ ಎ.ಪಿ.ಮೀನಾಕುಮಾರಿ, ಶಿಕ್ಷಕರಾದ ಸರ್ವಮಂಗಳ ರಾವ್, ಕೆ.ಎನ್.ಸುನೀಲ್ ಕುಮಾರ್, ಶಾಲಾ ಮುಖಂಡರಾದ ಸಚಿನ್ ಥಾಮಸ್, ಎ.ಕೆ.ಆರಾಧ್ಯ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಡಿ.ವಿಮಲಾಕುಮಾರಿ ಸ್ವಾಗತಿಸಿ, ಎಸ್‌ಆರ್‌ಜಿ ಸಂಚಾಲಕ ಬಿ.ರೋಶನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net