ದೇವರ ಕೆಲಸದಲ್ಲಿ ಮಹಿಳೆಗೆ ಅವಕಾಶ: ಜನಾರ್ದನ ಪೂಜಾರಿ ಆಶಯ

28
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಇಷ್ಟು ಸಣ್ಣ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ ಪಸರಿಸಲು ಯೋಗ್ಯವೆನಿಸಿರುವ ‘ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ’ ನಿರ್ಮಿಸಿದ್ದೀರಿ. ಇಲ್ಲಿಗೆ ದೇವರು ಬಂದಿಲ್ಲ, ಸರ್ಕಾರ ಬಂದಿಲ್ಲ. ಆದರೆ ನಿಮ್ಮೆಲ್ಲರ ಪ್ರಯತ್ನದ ಫಲವಾಗಿ ಈ ಸುಂದರ ಕಾರ್ಯಕ್ರಮ ನಡೆಯುತ್ತಿದೆ. ಸಮಾಜದಲ್ಲಿ ಮಹಿಳೆಯರಿಗೆ ದೇವರ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಸಾಧ್ಯವಾದ ಆ ಕೆಲಸ ಇತರೆಡೆಯೂ ಆಗಬೇಕು ಎಂದು ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.

ಗುರುಪುರದ ಗುರುನಗರದ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಭಾನುವಾರ ನೂತನ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ಪದ್ಮಶ್ರೀ ಪುರಸ್ಕೃತ ಶಿವಗಿರಿ ಮಠದ ಶ್ರೀ ವಿಶುದ್ಧಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕದ್ರೋಳಿ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ ಮತ್ತು ಕಿಶೋರ್ ಕುಮಾರ್, ಮಾಜಿ ಶಾಸಕ ಮೊದಿನ್ ಬಾವಾ, ಉದ್ಯಮಿ ಭುವನೇಶ್ ಪಚಿನಡ್ಕ ಶುಭಹಾರೈಸಿದರು. ಸಂಘ ಮತ್ತು ಸಮುದಾಯ ಭವನ ನಿರ್ಮಾಣದ ಹಿಂದೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ದಿವಂಗತ ಅಧ್ಯಕ್ಷರ ಪರವಾಗಿ ಅವರ ಕುಟುಂಬಿಕರನ್ನು ಸನ್ಮಾನಿಸಲಾಯಿತು.

ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಇಂಜಿನಿಯರ್ ಶ್ರೀ ಪುರುಷೋತ್ತಮ ವಾಮಂಜೂರು, ಶ್ರೀ ಕ್ಷೇತ್ರ ಸುಂಕದಕಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಧ್ರುವ ಎನ್.ಪೂಜಾರಿ, ಉದ್ಯಮಿಗಳಾದ ದೀಪಕ್ ಕೋಟ್ಯಾನ್, ಶೈಲೇಂದ್ರ ಸುವರ್ಣ, ರೋಶನ್ ಪುಂಚಮೆ, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಕೌಡೂರು, ವ್ಯವಸ್ಥಾಪನಾ ಸಮಿತಿ ಸದಸ್ಯ ಪುರಂದರ ಮಲ್ಲಿ, ಪಂಚಾಯಿತಿ ಸದಸ್ಯರಾದ ಸುನೀಲ್ ಪೂಜಾರಿ ಜಲ್ಲಿಗುಡ್ಡೆ, ಸಚಿನ್ ಅಡಪ, ಜಿ.ಎಂ.ಉದಯ ಭಟ್, ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಗುರು ಮಂದಿರದ ಪ್ರಧಾನ ಅರ್ಚಕ ಪ್ರಜ್ವಲ್ ಬರ್ಕೆ, ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ವಿನೋದಾ ಡಿ.ಅಂಚನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಎನ್.ಎಚ್.ಪೊನ್ನೆಲ ಸ್ವಾಗತಿಸಿದರು. ಪತ್ರಕರ್ತ ಧನಂಜಯ ಗುರುಪುರ ವರದಿ ವಾಚಿಸಿದರು. ವಿಜೆ.ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

ನಾನಿರಲಿ ಅಥವಾ ಮಾಜಿ ಶಾಸಕ ಮೊದಿನ್ ಬಾವಾ ಇರಲಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತಂದಿದ್ದರೆ ಅದು ನಿಮಿತ್ತ ಮಾತ್ರ. ಅದರ ಹಿಂದಿನ ಶಕ್ತಿಗಳಾದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಶ್ರಮ, ಬಿಲ್ಲವ ಸಮುದಾಯದ ಪರೋಕ್ಷ ಬೆಂಬಲ ಮರೆಯಲು ಸಾಧ್ಯವಿಲ್ಲ. ನಾರಾಯಣ ಗುರುಗಳ ಸಂದೇಶದಂತೆ ಭವಿಷ್ಯದಲ್ಲಿ ಭವನ ಶ್ರದ್ಧಾ ಕೇಂದ್ರವಾಗಿ ಬೆಳೆಯಲಿ. ಅಗತ್ಯವಿರುವ ಕೆಲಸಗಳಿಗೆ ಸರ್ಕಾರದ ಅನುದಾನಕ್ಕೆ ಪ್ರಯತ್ನಿಸುವೆ. ಒಂದು ಧರ್ಮಕ್ಕೆ ಅಪಾಯ ಎದುರಾದಾಗ ರಾಮ, ಕೃಷ್ಣರಂತಹ ದೇವರು, ಅವದೂತರು ಹುಟ್ಟಿಕೊಳ್ಳುತ್ತಾರೆ. ನಾರಾಯಣ ಗುರುಗಳು ಅಸ್ಪ್ರಶ್ಯತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಹುಟ್ಟಿದ ಒಬ್ಬ ಅವದೂತ. ಡಾ.ಭರತ್ ಶೆಟ್ಟಿ ಶಾಸಕ, ಮಂಗಳೂರು ಉತ್ತರ ಕ್ಷೇತ್ರ ಸರ್ವರೂ ಒಪ್ಪಿಕೊಳ್ಳುವ ತತ್ವ ಸಂದೇಶ ಸಾರಿರುವ ನಾರಾಯಣ ಗುರುಗಳು ಜಗತ್ತಿನ ಮಹಾನ್ ಪುರುಷ. ಹಿಂದುಳಿದವರಿಗೆ ದೇವಾಲಯಗಳ ಪ್ರವೇಶ ನಿಷಿದ್ಧವಾಗಿದ್ದ ಒಂದು ಕಾಲದಲ್ಲಿ ಗುರುಗಳು ಸಂಘರ್ಷರಹಿತ ಕ್ರಾಂತಿ ನಡೆಸಿ, ಸಮಾಜದಲ್ಲಿ ಮೇಲು-ಕೀಳು ಹೋಗಲಾಡಿಸಲು ಪ್ರಯತ್ನಿಸಿದ್ದರು. ಬಿಲ್ಲವ ಸಮುದಾಯದಿಂದ ಕಷ್ಟದಲ್ಲಿರುವವರಿಗೆ ನೆರವು, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಪದ್ಮರಾಜ್ ಆರ್.ಪೂಜಾರಿ ಶ್ರೀ ಕ್ಷೇತ್ರ ಕದ್ರೋಳಿ ಕೋಶಾಧಿಕಾರಿ https://www.vijayavani.net/the-work-of-the-first-phase-of-four-lane-road-is-complete https://www.vijayavani.net/urus-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net