ಬೈಕ್, ಚಿನ್ನಾಭರಣ ಕದಿಯುತ್ತಿದ್ದ ಆರು ಜನ ಕಳ್ಳರ ಬಂಧನ: 12 ಲಕ್ಷ ರೂ.ಮೌಲ್ಯದ ವಸ್ತುಗಳು ಜಪ್ತಿ

061120 Siraguppa Thief Arrest
ಸಿರಗುಪ್ಪ ಠಾಣೆ ಪೊಲೀಸರು ಗುರುವಾರ ಆರು ಜನ ಕಳ್ಳರನ್ನು ಬಂಧಿಸಿ, ಬೈಕ್, ಮೊಬೈಲ್, ಚಿನ್ನಾಭರಣ ವಶಕ್ಕೆ ಪಡೆದಿರುವುದು.
Published on

ಸಿರಗುಪ್ಪ: ನಗರದಲ್ಲಿ ಬೈಕ್, ಮೊಬೈಲ್ ಹಾಗೂ ಚಿನ್ನಾಭರಣ ಕದಿಯುತ್ತಿದ್ದ ಆರು ಜನರನ್ನು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿ, 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ವಿವಿಧ ವಿವಿಧ ಬಡಾವಣೆಗಳಲ್ಲಿ ಬೈಕ್, ಮೊಬೈಲ್, ಬೆಳ್ಳಿ ಬಂಗಾರ ಆಭರಣಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು. ಈ ಸಂಬಂಧ ಎಸ್ಪಿ ಸೈದುಲು ಅದಾವತ್ ಮಾರ್ಗದರ್ಶನದಲ್ಲಿ ಸಿರಗುಪ್ಪ ಸಿಪಿಐ ಟಿ.ಆರ್.ಪವಾರ್ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಎ.ನಾರಾಯಣ ಸ್ವಾಮಿ ಹಾಗೂ ಸಿಬ್ಬಂದಿ ಗುರುವಾರ ಕಳ್ಳರನ್ನು ಬಂಧಿಸಿದ್ದಾರೆ. ಅವರಿಂದ 16 ಬೈಕ್, ವಿವಿಧ ಕಂಪನಿಯ 9 ಮೊಬೈಲ್ ಹಾಗೂ ಚಿನ್ನಾಭರಣ ಸೇರಿ ಒಟ್ಟು 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದು, ಕಳ್ಳರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನು ಕೆಲವರು ಭಾಗಿಯಾಗಿರುವ ಅನುಮಾನವಿದ್ದು, ತನಿಖೆ ನಡೆದಿದೆ. ಹೀಗಾಗಿ ಬಂಧಿತರ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್‌ಐ ಗಂಗಪ್ಪಬುರ್ಲಿ, ಎಎಸ್‌ಐ ಪಂಪಾಪತಿ, ಪೇದೆಗಳಾದ ಘನಮೂರ್ತಿ, ಶ್ರೀಧರ ಕಾಶಿಮಠ, ಮುದುಕಯ್ಯ, ಬಾಲಚಂದ್ರ ರಾಥೋಡ್, ರಾಜಪ್ಪ, ಬಸವರಾಜ, ವೆಂಕಟೇಶ, ಅಂಬರೀಷ, ಮಹಾಂತೇಶ, ಮಾರೇಶ, ಮಲ್ಲನಗೌಡ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net