ಕಿಚ್ಚ ಸುದೀಪ್‌ 'ಬಿಗ್​​ ಬಾಸ್​ ಸೀಸನ್​ 12' ರ ನಿರೂಪಣೆ ಮಾಡಲು ಷರತ್ತು ಹಾಕಿದ್ರಾ, ಅವರ ಬದಲು ಯಾರು...?! | Biggboss Kannada

bfinal
Published on

ಸ್ವತ: ಕಿಚ್ಚ ಸುದೀಪ್​​​​​ ಬಿಗ್​​​ಬಾಸ್​​ಗೆ ಟ್ವೀಟ್​​ ಮೂಲಕ ವಿದಾಯ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ನಂತರದಲ್ಲಿ ಬಿಗ್​​​ಬಾಸನ್ನ ಯಾರು ನಿರೂಪಣೆ ಮಾಡುತ್ತಾರೆಂಬ ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ. 11 ಸೀಸನ್​ನ ಶೋ ಫಾರ್ಮ್ಯಾಟ್​​ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಕಿಚ್ಚ ಸುದೀಪ್​ ನಿರೂಪಕರಾಗಿ 11 ಸೀಸನ್​ನಲ್ಲೂ ಮಿಂಚಿದ್ರು ಅವರ ಸ್ಥಾನವಂತೂ ಬದಲಾಗಿರಲಿಲ್ಲ.

ಸದ್ಯ ನಿರೂಪಣೆ ಮಾಡೋದು ಯಾರು ಜತೆಗೆ ಈ ಬಾರಿಯ ಕಂಟೆಸ್ಟೆಂಟ್​​ ಲಿಸ್ಟ್​​ನಲ್ಲಿ ಕೆಲ ಹೆಸರುಗಳು ವೈರಲ್​​ ಆಗ ತೊಡಗಿದೆ. ಸದ್ಯ ಸುದೀಪ್​ ಬದಲಿಗೆ ಬೇರೊಬ್ಬರ ಹುಡುಕಾಟ ನಡೆಯುತ್ತಿದ್ದು, ಚಾನಲ್​ ಸಹಿತ ಚಲನಚಿತ್ರರಂಗದ ಪ್ರಮುಖರ ಜತೆಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಮತ್ತೊಂದೆಡು ಸುದೀಪ್​ ಕೆಲ ಷರತ್ತುಗಳನ್ನ ಚಾನಲ್​ ಮುಂದಿಟ್ಟಿದ್ದು, ಅದಕ್ಕೆ ಒಪ್ಪಿಗೆಯಾದಲ್ಲಿ ಅವರೇ ಮುಂದುವರೆಯುವ ನಿರ್ಧಾರ ತೆಗೆದುಕೊಳ್ಳುತ್ತಾರೆಂದೂ ಹೇಳಲಾಗುತ್ತಿದೆ.

ಸುದೀಪ್​​ 11 ವರ್ಷಗಳಿಂದ ಈ ಶೋನ ಪ್ರಮುಖ ಫೇಸ್​ ಆಗಿದ್ದು, ಪ್ರೇಕ್ಷಕರ ಮನ ಗೆಲ್ಲುವಿಕೆಯಲ್ಲಿ ಯಶಸ್ವಿಯಾಗಿದ್ದರು. ಕನ್ನಡದಲ್ಲಿ ಬಿಗ್​ಬಾಸ್​ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಲೂ ಸುದೀಪ್​ ಪ್ರಮುಖ ಕಾರಣ ಅಂದ್ರೆ ತಪ್ಪಾಗೋದಿಲ್ಲ.

ಸುದೀಪ್​​​ಅವರ ವಾರದ ಕಥೆ ಕಿಚ್ಚನ ಜತೆಯ ಎಪಿಸೋಡ್​​ಗಳನ್ನ ಮಾತ್ರ ವೀಕ್ಷಿಸುವ ದೊಡ್ಡ ಬಳಗವೇ ಇದೆ. ಹೀಗಾಗಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಕಿಚ್ಚ ಸುದೀಪ್​ ಅವರನ್ನ ಬಿಟ್ಟುಕೊಡಲು ಕಲರ್ಸ್​​ ರೆಡಿ ಇಲ್ಲವೆಂದೂ ಹೇಳಲಾಗುತ್ತಿದೆ. ಇನ್ನು ಈ ಮಧ್ಯೆ ಅನೇಕ ಸೀರಿಯಲ್ ನಟ ನಟಿಯರ ಹೆಸರೂ ಈ ಬಾರಿಯ ಕಂಟೆಸ್ಟೆಂಟ್​​​ಗಳ ಪಟ್ಟಿಯಲ್ಲಿ ಫೈನಲ್​ ಆಗಿದೆಯೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net