Bigg Boss ಮನೆಯಲ್ಲಿರುವಾಗಲೇ ಸ್ಫರ್ಧಿಗೆ ಹೃದಯಾಘಾತ

BIGG Boss
Published on

ಹೈದರಾಬಾದ್​: ತೆಲುಗು ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ (Bigg Boss) ಆರಂಭವಾಗಿ ವಾರಗಳೇ ಕಳೆದಿದ್ದು, ದಿನ ಕಳೆದಂತೆ ಕಾರ್ಯಕ್ರಮದ ಕುರಿತಾಗಿ ರೋಷಕತೆ ಹೆಚ್ಚಾಗುತ್ತಿದೆ. ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ತೆಲುಗು ಪ್ರೇಕ್ಷಕರಿಗೆ ಮನರಂಜನೆ (Entertainment) ನೀಡುವಲ್ಲಿ ಮಾತ್ರ ವಿಫಲವಾಗಿಲ್ಲ.

ಕಾರ್ಯಕ್ರಮ ಶುರುವಾಗಿ ವಾರಗಳು ಕಳೆದಿದ್ದು, ಇದೀಗ ಮನೆಗೆ ವೈಲ್ಡ್​ಕಾರ್ಡ್​ ಮೂಲಕ ಹೊಸ ಸ್ಫರ್ಧಿಗಳು ಎಂಟ್ರಿ ಕೊಡುತ್ತಿದ್ದಾರೆ. ಈ ಪೈಕಿ ಖ್ಯಾತ ಯೂಟ್ಯೂಬರ್​ ಗಂಗವ್ವ (Gangavva) ಕೂಡ ಮನೆಗೆ ಎಂಟ್ರಿ ನೀಡಿದ್ದು, ಜನರಿಗೆ ಮನರಂಜನೆ ನೀಡುವ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದಾರೆ.

Bigg Boss Gangavva

ಬಯಸ್ಸು 60 ದಾಟಿದರೂ ಮನೆಯಲ್ಲಿರುವ ಸ್ಫರ್ಧಿಗಳಿಗೆ ಟಫ್​ ಫೈಟ್​ ಕೊಡುವ ಮೂಲಕ ತಾವು ಯಾರಿಗೂ ಕಮ್ಮಿ ಇಲ್ಲ ಎಂದು ನಿರೂಪಿಸಿರುವ ಗಂಗವ್ವ ಅವರಿಗೆ ಹೃದಯಘಾತವಾಗಿದೆ (Heart Attack)  ಎಂಬ ಸುದ್ದಿ ಹೊರಬಿದ್ದಿದೆ. ಬಿಗ್​ಬಾಸ್​ (Bigg Boss) ಮನೆಯಲ್ಲಿರುವಾಗಲೇ ಈ ಘಟನೆ ನಡೆದಿದ್ದು, ತಕ್ಷಣವೇ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದು ವರದಿಯಾಗಿದೆ.

 ಮೈ ವಿಲೇಜ್ ಶೋ (My Village Show) ಮೂಲಕ ಯೂಟ್ಯೂಬ್‌ನಲ್ಲಿ ಖ್ಯಾತಿಯಾಗಿರುವ ಗಂಗವ್ವ ತನ್ನ ಹಾಸ್ಯಭರಿತ ವಿಡಿಯೋಗಳಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ಯೂಟ್ಯೂಬ್‌ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ರಾಮ್ ಪೋತಿನೇನಿ ಅವರ ಇ ಸ್ಮಾರ್ಟ್ ಶಂಕರ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಿಗ್​ಬಾಸ್​ (Bigg Boss) ಸೀಸನ್​ 4ರಲ್ಲಿ ಸ್ಫರ್ಧಿಯಾಗಿದ್ದ ಅವರು ಅನಾರೋಗ್ಯದಿಂದಾಗಿ ಕಾರ್ಯಕ್ರಮವನ್ನು ಅರ್ಧಕ್ಕೆ ತೊರೆದಿದ್ದರು. ಇದೀಗ ವೈಲ್ಡ್​ಕಾರ್ಡ್​ ಮೂಲಕ ಮತ್ತೊಮ್ಮೆ ದೊಡ್ಮನೆ ಪ್ರವೇಶಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net