

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮದ ಟಿವಿ ಮತ್ತು OTT ಎರಡೂ ಆವೃತ್ತಿಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಭಾರತದ ಅತಿದೊಡ್ಡ ಡಿಜಿಟಲ್ ರಿಯಾಲಿಟಿ ಶೋ "ಬಿಗ್ ಬಾಸ್" ಒಟಿಟಿಯ ಮೂರನೇ ಸೀಸನ್ ಶೀಘ್ರದಲ್ಲೇ ಪ್ರಸಾರವಾಗಲಿದೆ. ಕೆಲ ದಿನಗಳ ಹಿಂದೆ ಈ ಬಾರಿಯ ಕಾರ್ಯಕ್ರಮದ ನಿರೂಪಕರ ಬಗ್ಗೆ ಕ್ರಿಯೇಟ್ ಮಾಡಿದ್ದ ಸಸ್ಪೆನ್ಸ್, ಶೋ ಬಗ್ಗೆ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿತ್ತು.
ನಂತರ ಈ ಬಾರಿಯ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್ ಅನ್ನು ಸಲ್ಮಾನ್ಖಾನ್ ಬದಲಿಗೆ ಅನಿಲ್ ಕಪೂರ್ ಹೋಸ್ಟ್ ಮಾಡಲಿದ್ದಾರೆ ಎಂಬ ವಿಚಾರವನ್ನು ಅನಾವರಣಗೊಳಿಸಲಾಯಿತು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಅನಿಲ್ ಕಪೂರ್ ಅವರೊಂದಿಗಿನ ಬಿಗ್ ಬಾಸ್ ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ಅನಿಲ್ ಕಪೂರ್ ಬಿಗ್ ಬಾಸ್ OTT 3ರ ಹೊಸ ನಿರೂಪಕರಾಗಿ ಬಂದಿದ್ದಾರೆ. ದೊಡ್ಡ ಪರದೆಯನ್ನು ಆಳಿದ ನಂತರ ಅನಿಲ್ ಈಗ ಬಿಗ್ ಬಾಗ್ ಬಾಸ್ ಮನೆಯನ್ನು ಆಳಲು ಬರುತ್ತಿದ್ದಾರೆ ಎಂಬ ಶಿರ್ಷಿಕೆಯನ್ನು ಬರೆಯಲಾಗಿದೆ. ಜತೆಗೆ ಜೂನ್ 21 ರಿಂದ ಬಿಗ್ ಬಾಸ್ ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಟ ಅನಿಲ್ ಕಪೂರ್, "ನಾನು ಯಾವಾಗಲೂ ನನ್ನ ಎಲ್ಲ ಪ್ರಾಜೆಕ್ಟ್‌ಗಳನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಮಾಡಿದ್ದೇನೆ. ಬಿಗ್ ಬಾಸ್‌ಗೆ ಹತ್ತು ಪಟ್ಟು ಶಕ್ತಿಯನ್ನು ತರುತ್ತೇನೆ" ಎಂದು ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಈ ಶೋಗೆ ಹೋಗುವ ಹಲವು ಸ್ಪರ್ಧಿಗಳ ಹೆಸರು ಕೇಳಿಬರುತ್ತಿದೆ. ಇದರಲ್ಲಿ ರಿಯಾಜ್ ಅಲಿ, ಶಿವಂಗಿ ಜೋಶಿ, ಶಫಾಕ್ ನಾಜ್, ದಲ್ಜಿತ್ ಕೌರ್, ವೈರಲ್ ವಡಾಪಾವ್ ಹುಡುಗಿ ಚಂದ್ರಿಕಾ, ಯೂಟ್ಯೂಬರ್ ಝೈನ್ ಸೈಫಿ, ವಿಕ್ಕಿ ಜೈನ್ ಮತ್ತು ಅದ್ನಾನ್ ಶೇಖ್ ಸೇರಿದ್ದಾರೆ. ಇದಲ್ಲದೇ ಕೃತಿ ಸನೋನ್ ಸಹೋದರಿ ನೂಪುರ್ ಸನೋನ್, ತ್ರಿಶಾಲಾ ದತ್, ಅಹಾನಾ ಡಿಯೋಲ್, ಮಿಥುನ್ ಚಕ್ರವರ್ತಿ ಪುತ್ರ ಉಷ್ಮಯ್ ಚಕ್ರವರ್ತಿ ಹೆಸರುಗಳೂ ಚರ್ಚೆಯಾಗುತ್ತಿವೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಆಗಿಲ್ಲ. (ಏಜೆನ್ಸೀಸ್)