ಬಿಗ್​ಬಾಸ್​ ಸೀಸನ್ 12​ ಫೀವರ್​ ಶುರು: ಈ ಬಾರಿ ಡೊಡ್ಮನೆ ಪ್ರವೇಶಿಸುವವರು ಯಾರು? ಇಲ್ಲಿದೆ ಸಂಭವನೀಯ ಪಟ್ಟಿ​… BBK 12

BBK 12
Published on

BBK 12 : ಬಿಗ್​ಬಾಸ್​ ಶೋ ( Bigg Boss Show ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಸಹ ಪಡೆದುಕೊಂಡಿದೆ. ಈ ಶೋ ಆರಂಭವಾದ್ರೆ ಟಿಆರ್​ಪಿಯಲ್ಲಿ ದಾಖಲೆಗಳನ್ನೇ ಬರೆಯುತ್ತೆ. ಅಷ್ಟರಮಟ್ಟಿಗೆ ಈ ಶೋ ಮನೆ ಮಾತಾಗಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್​ಶಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ. ಈ ಶೋ ಮಾಮೂಲಿಯಂತೆ ಈ ಬಾರಿಯೂ ಕಲರ್ಸ್​ ಕನ್ನಡದಲ್ಲಿ ಮೂಡಿ ಬರಲಿದೆ.

ಈಗಾಗಲೇ ಯಶಸ್ವಿ 11 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ಬಾಸ್ ಶೋ 12ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ನಿನ್ನೆಯಷ್ಟೇ ಕಲರ್ಸ್​ ಕನ್ನಡ ವಾಹಿನಿ ಲೋಗೋ ಬಿಡುಗಡೆ ಮಾಡಿದೆ. ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ… ಈ ಸಲ ಕಿಚ್ಚು ಮಾತ್ರ ಹೆಚ್ಚು! ಎಂಬ ಟೈಟಲ್‌ ಅಡಿಯಲ್ಲಿ ಬಿಗ್‌ ಬಾಸ್‌ ಟೀಮ್​ ಲೋಗೋ ಲಾಂಚ್‌ ಮಾಡಿದೆ. ಈ ಬಾರಿಯ ಲೋಗೋ ತುಂಬಾ ವಿಶೇಷವಾಗಿದೆ. 12 ನೇ ನಂಬರ್​ ಒಳಗೊಂಡಂತೆ ಬಿಗ್​ಬಾಸ್​ ಕಣ್ಣಿನ ಲೋಗೋ ಡಿಸೈನ್​ ಮಾಡಲಾಗಿದ್ದು, ತುಂಬಾ ವಿಶೇಷವಾಗಿದೆ. ಶೋ ಯಾವಾಗ ಶುರುವಾಗುತ್ತದೆ ಎಂಬುದರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಇನ್ನು ಕೆಲವೇ ವಾರಗಳಲ್ಲಿ ಶೋ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಬಿಗ್​ಬಾಸ್​ ಮನೆಯ ಸಿದ್ಧತೆಗಳು ಬಿಡದಿಯ ಇನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್​ಬಾಸ್​ ಪ್ರೋಮೋ ಕೂಡ ಬರುವ ಸಾಧ್ಯತೆ ಇದೆ. ಸೆ. 2ರಂದು ನಟ ಹಾಗೂ ನಿರೂಪಕ ಸುದೀಪ್​ ಹುಟ್ಟುಹಬ್ಬವಿದ್ದು, ಆ ದಿನ ಬಿಗ್​ಬಾಸ್​ ಪ್ರೋಮೋ ಬಿಡುಗಡೆಯಾದರೂ ಅಚ್ಚರಿಪಡಬೇಕಿಲ್ಲ. ಒಟ್ಟಿನಲ್ಲಿ ಶೋ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಇಷ್ಟೆಲ್ಲ ಹೇಳಿದ ಬಳಿಕ ನಿಮ್ಮ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ, ಈ ಬಾರಿ ಬಿಗ್​ಬಾಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು. ಸದ್ಯದ ಮಾಹಿತಿ ಪ್ರಕಾರ ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅವರ ಹೆಸರು ಈ ಕಳಗಿನಂತಿದೆ.

* ವಿಜಯ್ ಸೂರ್ಯ: ಅಗ್ನಿಸಾಕ್ಷಿ ಮತ್ತು ದೃಷ್ಟಿಬೊಟ್ಟು ಧಾರಾವಾಹಿಗಳಿಂದ ಖ್ಯಾತರಾದ ನಟ.

* ಸಾಗರ್ ಬಿಳಿಗೌಡ : ‘ಸತ್ಯ’ ಧಾರಾವಾಹಿಯ ‘ಅಮೂಲ್ ಬೇಬಿ’ ಪಾತ್ರದಿಂದ ಜನಪ್ರಿಯ ಪಡೆದ ಕಿರುತೆರೆ ನಟ

* ಧನುಷ್: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಗುರುತಿಸಲ್ಪಟ್ಟವರು.

* ಅಮೃತಾ ರಾಮಮೂರ್ತಿ : ‘ಕುಲವಧು’ ಮತ್ತು ‘ಕೆಂಡಸಂಪಿಗೆ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

* ಗಾಯಕ ಸುನೀಲ್ : ‘ಸರಿಗಮಪ’ ಶೋನಲ್ಲಿ ಗಾಯನ ಪ್ರತಿಭೆಯಾಗಿ ಗುರುತಿಸಲ್ಪಟ್ಟವರು.

* ಸ್ವಾತಿ : ಹಿರಿಯ ಕಲಾವಿದೆ, ‘ಗಟ್ಟಿಮೇಳ’ ಮತ್ತು ‘ಬ್ರಹ್ಮಗಂಟು’ ಧಾರಾವಾಹಿಗಳಿಂದ ಖ್ಯಾತಿ.

* ಅರವಿಂದ್ ರತನ್ : ಸಂಖ್ಯಾಶಾಸ್ತ್ರಜ್ಞ (ನ್ಯೂಮರಾಲಜಿ ಎಕ್ಸ್‌ಪರ್ಟ್).

* ಸಮೀರ್ ಎಂಡಿ : ಯೂಟ್ಯೂಬರ್

* ಶ್ವೇತಾ ಆರ್ ಪ್ರಸಾದ್ : ಶ್ರೀರಸ್ತು ಶುಭಮಸ್ತು ಮತ್ತು ರಾಧಾ ರಮಣ ಧಾರಾವಾಹಿಗಳಿಂದ ಖ್ಯಾತಿ.

* ದೀಪಿಕಾ ಗೌಡ : ‘ಕಾಮಿಡಿ ಕಿಲಾಡಿಗಳು’ ಶೋನಿಂದ ಹಾಸ್ಯ ಕಲಾವಿದೆಯಾಗಿ ಖ್ಯಾತಿ.

* ಪಾಯಲ್ ಚೆಂಗಪ್ಪ : ‘ಅಮೃತಾಂಜನ್’ ಮತ್ತು ಇತರ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

* ಗಗನಾ : ‘ಮಹಾನಟಿ’ ಮತ್ತು ‘ಭರ್ಜರಿ ಬ್ಯಾಚುಲರ್ಸ್’ ಶೋಗಳಿಂದ ಜನಪ್ರಿಯ.

* ಬಾಳು ಬೆಳಗುಂದಿ : ‘ಸರಿಗಮಪ’ ಶೋನಲ್ಲಿ ಗಾಯಕರಾಗಿ ಗಮನ ಸೆಳೆದವರು.

* ವರುಣ್ ಆರಾಧ್ಯ : ‘ಬೃಂದಾವನ’ ಧಾರಾವಾಹಿಯಲ್ಲಿ ನಟನೆ ಮತ್ತು ಸೋಶಿಯಲ್​ ಮೀಡಿಯಾ ಸ್ಟಾರ್.

* ಮೇಘಾ ಶೆಟ್ಟಿ : ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಖ್ಯಾತಿ, ‘ಮುದ್ದು ಸೊಸೆ’ ಧಾರಾವಾಹಿಯ ನಿರ್ಮಾಪಕಿ.

* ಸಂಜನಾ ಬುರ್ಲಿ : ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಗುರುತು.

* ದಿವ್ಯಾ ವಸಂತ : ಸುದ್ದಿ ನಿರೂಪಕಿ, ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಒಳಗಾಗಿದ್ದವರು.

* ಡಾ. ಬ್ರೋ (ಗಗನ್ ಶ್ರೀನಿವಾಸ್) : ಯೂಟ್ಯೂಬರ್, ಕಳೆದ ಕೆಲವು ಸೀಸನ್‌ಗಳಿಂದ ಸಂಭಾವ್ಯ ಪಟ್ಟಿಯಲ್ಲಿ ಇವರು ಹೆಸರು ಕೇಳಿಬರುತ್ತಿದೆ.

* ಚಂದನ್ ಶರ್ಮಾ : ಸುದ್ದಿ ನಿರೂಪಕ, ಮಾಧ್ಯಮ ಕ್ಷೇತ್ರದಿಂದ ಸಂಭಾವ್ಯ ಸ್ಪರ್ಧಿ.

* ಪ್ರಿಯಾಂಕಾ ಉಪೇಂದ್ರ : ನಟಿ, ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ.

* ಅರ್ಚನಾ ಜೋಯಿಸ್ : ‘KGF’ ಚಿತ್ರದಲ್ಲಿ ಯಶ್ ಅವರ ತಾಯಿಯ ಪಾತ್ರದಿಂದ ಖ್ಯಾತಿ.

* ಗಿಲ್ಲಿ : ‘ಕಾಮಿಡಿ ಕಿಲಾಡಿಗಳು’ ಶೋನಿಂದ ಹಾಸ್ಯ ಕಲಾವಿದರಾಗಿ ಗುರುತು.

* ರಾಘವೇಂದ್ರ ಆಚಾರ್ಯ : ಸ್ಟ್ಯಾಂಡಪ್​ ಕಾಮಿಡಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದಾರೆ.

* ಅಶೋಕ್​ ಶರ್ಮ: ಮಿಸ್ಟರ್​ ಅಂಡ್​ ಮಿಸ್​ ರಾಮಾಚಾರಿ ಸೇರಿ ಹಲವು ಸಿನಿಮಾಗಳಲ್ಲಿ ನಟನೆ ಮತ್ತು ಗಾಯಕ ಕೂಡ.

* ಜಾಹ್ನವಿ : ಸುದ್ದಿ ನಿರೂಪಕಿ ಮತ್ತು ಇತ್ತೀಚೆಗೆ ಕಿರುತೆರೆ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

* ಮಿಂಚು: ಕಾಮಿಡಿ ಕಿಲಾಡಿ ಶೋನಲ್ಲಿ ಖ್ಯಾತಿ. ಇತ್ತೀಚೆಗೆ ವಿವಾದದಿಂದ ಸುದ್ದಿಯಾಗಿದ್ದರು.

* ಮಡೆನೂರು ಮನು : ಕಾಮಿಡಿ ಕಿಲಾಡಿ ಶೋನಿಂದ ಖ್ಯಾತಿ. ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ನಟನೆ ಮತ್ತು ಇತ್ತೀಚಗೆ ವಿವಾದದಿಂದ ಭಾರಿ ಸುದ್ದಿ.

ಉಳಿದಂತೆ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳಾದ​ ವರ್ಷಾ ಕಾವೇರಿ, ರೇಷ್ಮಾ ಹೆಸರು ಕೂಡ ಚಾಲ್ತಿಯಲ್ಲಿದೆ. ಅಲ್ಲದೆ, ಆನಂದ್​ ಗುರೂಜಿ ಹೆಸರು ಕೂಡ ಕೇಳಿಬರುತ್ತಿದೆ. ನಟಿ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ಹೆಸರು ಕೂಡ ಇದೆ.

ಗಮನಿಸಿ: ಈ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂಭಾವ್ಯ ಹೆಸರುಗಳನ್ನು ಆಧರಿಸಿದೆ ಮತ್ತು ಕಲರ್ಸ್ ಕನ್ನಡ ವಾಹಿನಿಯಿಂದ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ. ಕಾರ್ಯಕ್ರಮದ ಆರಂಭದ ದಿನಾಂಕವೂ ಇನ್ನೂ ಘೋಷಿತವಾಗಿಲ್ಲ, ಆದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ 2025 ರಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಅಂತಿಮವಾಗಿ ಯಾರು ಮನೆಯ ಒಳಗೆ ಪ್ರವೇಶಿಸುತ್ತಾರೆ ಎಂಬುದು ತಿಳಿದುಕೊಳ್ಳಲು ಬಿಗ್​ಬಾಸ್​ ಆರಂಭವಾಗುವರೆಗೂ ಕಾಯಬೇಕಿದೆ. ನಿಮ್ಮ ಪ್ರಕಾರ ಯಾರೆಲ್ಲ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಬಹುದು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net