More

    ಡ್ರೋನ್​​​ ಪ್ರತಾಪ್ ಈಸ್ ಬ್ಯಾಕ್; ಬರ್ತಿದ್ದಂತೆ ದೇವರ ಪೂಜೆ ಮಾಡಿದ ಪ್ರತಾಪ್

    – ಈಗ ಆದ್ರು ಆಟ ಶುರು ಮಾಡ್ತಿಯಾ? ಎಂದ್ರು ಫ್ಯಾನ್ಸ್​

    ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಯ ಹಂತಕ್ಕೆ ಬಂದಿದೆ. ಸದ್ಯ ಮನೆಯಲ್ಲಿ ಒಂಭತ್ತು ಮಂದಿ ಇದ್ದು ಸ್ಪರ್ಧೆ ಜೋರಾಗಿದೆ. ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ಪಾಲಾಗಿದ್ದ ಡ್ರೋನ್ ಪ್ರತಾಪ್ ಅವರು ಚಿಕಿತ್ಸೆ ಪಡೆದು ಮತ್ತೆ ಬಿಗ್ ​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಡ್ರೋನ್ ಪ್ರತಾಪ್ ಆರೋಗ್ಯ ಕೈ ಕೊಟ್ಟಿದೆ. ಅವರು ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಕೆಲವು ಕಡೆಗಳಲ್ಲಿ ವದಂತಿ ಹಬ್ಬಿತ್ತು. ಈ ಊಹಾಪೋಹಗಳು ಹರಿದಾಡಿದ್ದವು ಆದರೆ ಅದು ನಿಜವಲ್ಲ. ಅವರು 2 ದಿನದಿಂದ ಊಟ ಮಾಡಿರಲಿಲ್ಲ, ಖಾಲಿ ಹೊಟ್ಟೆಗೆ ವಿಟಮಿನ್ ಟ್ಯಾಬ್ಲೆಟ್ ತಗೊಂಡಿದ್ದಾರೆ ಹಾಗಾಗಿ ಫುಡ್ ಪಾಯಿಸನ್ ಆಗಿ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಬಿಗ್​ ಬಾಸ್​​ ತಂಡ ತಿಳಿಸಿತ್ತು. ಇದೆ ಬೆನ್ನಲ್ಲೇ ಇದೀಗ ಟ್ರೋನ್​ ಮತ್ತೆ ಮನೆಗೆ ಮರಳಿದ್ದಾರೆ. ಈ ಕುರಿತಾದ ಒಂದು ಪ್ರೋಮೊವನ್ನು ಖಾಸಗಿವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಡ್ರೋನ್​ ಬಿಗ್​ಬಾಸ್​ ಮನೆಯ ಮುಖ್ಯ ದ್ವಾರದಿಂದ ಎಂಟ್ರಿಕೊಟ್ಟಿದ್ದಾರೆ. ಮನೆಯ ಸ್ಪರ್ಧಿಗಳು ಪ್ರತಾಪ್​​ ನೋಡಿ ಖುಷಿಯಿಂದ ಓಡಿದ್ದಾರೆ. ನಮೃತಾ, ಸಂಗೀತಾ ನಾನು ತುಂಬಾ ಮಿಸ್​​ ಮಾಡಿಕೊಂಡೆ ಎಂದು ಹೇಳುತ್ತಾ ವೆಲ್​ಕಮ್​​ ಮಾಡಿದ್ದಾರೆ. ನೀನು ಆರೋಗ್ಯವಾಗಿದ್ದರೆ ನಮಗೆ ಅಷ್ಟೆ ಸಾಕು ಎಂದು ಬಿಗ್​ಬಾಸ್​ ಸ್ಪರ್ಧಿಗಳು ಹೇಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಪ್ರತಾಪ್​ ಬಿಗ್​ಬಾಸ್​​ ಮನೆಯಲ್ಲಿರುವ ದೇವರ ಮನೆಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

    87 ದಿನಗಳ ಕಾಲ ಮನೆಯಲ್ಲಿ ಇದ್ದು ಗೆಲ್ಲುವ ಹಂಬಲವನ್ನು ಹೊತ್ತಿರುವ ಪ್ರತಾಪ್​ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತವರಲ್ಲಾ ಎಂದು ಹಲವರು ಹೇಳುತ್ತಿದ್ದಾರೆ. ಇನ್ನು ಆಟ ಶುರು ಮಾಡು ಗುರು ಎಂದು ಪ್ರತಾಪ್​ ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ.

    ಸಮುದ್ರದಲ್ಲಿ ವಿಮಾನ ಪತನ; ಖ್ಯಾತ ನಟ, ಇಬ್ಬರು ಪುತ್ರಿಯರು ಸಾವು

    ಕನ್ನಡತಿಗೆ ಸರ್ಪ್ರೈಸ್ ಗಿಫ್ಟ್ ಕಳುಹಿಸಿದ ಟಾಲಿವುಡ್​ ನಟ ನಾಗಾರ್ಜುನ; ಅಸಲಿ ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts