ಬೆಂಗಳೂರು: ಮಾನವ ಹಕ್ಕು ಉಲ್ಲಂಘನೆ, ಮಹಿಳೆಯರಿಗೆ ಧಕ್ಕೆ ತಂದ ಆರೋಪ ಬಿಗ್‌ಬಾಸ್ ಶೋ ( BIgg Boss ) ಮೇಲೆ ಮತ್ತು ಕೆಲ ಸ್ಪರ್ಧಿಗಳ ಮೇಲೆ ಇದ್ದು, ಇದೇ ಕಾರಣಕ್ಕೆ ಬಿಗ್ಬಾಸ್ಗೆ ಕುಂಬಳಗೋಡು ಪೊಲೀಸರು ನೊಟೀಸ್ ನೀಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ಸ್ವರ್ಗ ನರಕ ಎಂಬ ಕಾನ್ಸೆಪ್ಟನ್ನು ಇಡಲಾಗಿತ್ತು. ಇಲ್ಲಿ ನರಕಕ್ಕೆಂದು ಹೋದ ಸ್ಪರ್ಧಿಗಳಿಗೆ ಊಟದ ಬದಲಿಗೆ ಗಂಜಿ, ನೆಲದ ಮೇಲೆ ಹಾಕಲಾದ ಬೆಡ್‌ನಲ್ಲಿ ನಿದ್ದೆ, ಕೂರಲು ಕುರ್ಚಿ ಇಲ್ಲ, ನೀರಿಗೆ ಒಂದು ಮಡಿಕೆ, ಶೌಚಾಲಯಕ್ಕೆಂದು ಹೋಗಲು ಸ್ವರ್ಗವಾಸಿಗಳ ಅನುಮತಿ ಇವೆಲ್ಲವನ್ನೂ ಮಾಡಬೇಕಿತ್ತು.
ನರಕವಾಸಿಗಳನ್ನು ಜೈಲಿನ ಮಾದರಿಯ ಸರಳುಗಳ ಹಿಂದೆ ಇಡಲಾಗಿತ್ತು. ಇದು ಕೆಲವೊಂದು ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವುದೇ ವ್ಯಕ್ತಿಯ ಇಷ್ಟದ ವಿರುದ್ಧವಾಗಿ, ಹಾಗೂ ಇಷ್ಟದ ಅನುಸಾರವಾಗಿ ಬಂಧನದಲ್ಲಿ ಇಡುವಂತಿಲ್ಲ, ಕನಿಷ್ಠ ಅಗತ್ಯಗಳಾದ ಪೌಷ್ಠಿಕ ಆಹಾರ, ಶೌಚಾಲಯದ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘಟನೆ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಆರೋಪ ಮಾಡಿದ್ದರು.
‘ಬಿಗ್‌ಬಾಸ್’ ಸೆಟ್‌ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ- ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಸಡ್ಡೆ ತೋರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.