ಟೂರ್ನಿ ಆರಂಭಕ್ಕೂ RCBಗೆ ಬಿಗ್​ಶಾಕ್​; ಗಾಯದಿಂದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್​ ಔಟ್​, ಬದಲಿಯಾಗಿ ತಂಡ ಕೂಡಿಕೊಂಡ ಇಂಗ್ಲೆಂಡ್​ ಪ್ಲೇಯರ್​

RCB
Published on

ಬೆಂಗಳೂರು: ಫೆಬ್ರವರಿ 07ರಿಂದ ಮಾರ್ಚ್​ 02ರವರೆಗೆ ನಡೆಯಲಿರುವ ಮೂರನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ಗೆ ತಂಡಗಳು ಈಗಾಗಲೇ ತಯಾರಿ ಆರಂಭಿಸಿದ್ದು, ಹಾಲಿ ಚಾಂಪಿಯನ್ಸ್​ ಆರ್​ಸಿಬಿ (RCB) ಒಂದು ಹೆಜ್ಜೆ ಮುಂದಿದ್ದಾರೆ ಎಂದರೆ ತಪ್ಪಾಗಲಾರದು. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಆರ್​ಸಿಬಿ ತಂಡಕ್ಕೆ ದೊಡ್ಡ ತಲೆನೋವೊಂದು ಎದುರಾಗಿದ್ದು, ಗಾಯದ ಸಮಸ್ಯೆಯಿಂದ ಸ್ಟಾರ್ ಆಟಗಾರ್ತಿಯೊಬ್ಬರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರತಿ ಸೋಫಿ ಮೊಲಿನೆಕ್ಸ್ ಮೊಣಕಾಲಿನ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದು, ಬದಲಿ ಆಟಗಾರ್ತಿಯಾಗಿ ಇಂಗ್ಲೆಂಡ್​ನ ಚಾರ್ಲಿ ಡೀನ್ ತಂಡ ಕೂಡಿಕೊಂಡಿದ್ದಾರೆ. 24 ವರ್ಷದ ಚಾರ್ಲಿ ಡೀನ್ ಈ ಹಿಂದೆ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಇಂಗ್ಲೆಂಡ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳ ಪರ ಕಣಕ್ಕಿಳಿದಿರುವ ಚಾರ್ಲಿ ಡೀನ್ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ (RCB) ಪರ ಆಡಲಿದ್ದಾರೆ. ಇಂಗ್ಲೆಂಡ್ ಪರ 36 ಟಿ20 ಪಂದ್ಯಗಳನ್ನಾಡಿರುವ ಚಾರ್ಲಿ ಡೀನ್ ಈವರೆಗೆ 46 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರೊಂದಿಗೆ 12 ಇನಿಂಗ್ಸ್​ಗಳಲ್ಲಿ 135 ರನ್ ಕಲೆಹಾಕಿದ್ದಾರೆ.

Sophie Dean
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net