ಬೀದರ್ ವಿದ್ಯಾರ್ಥಿನಿ ಅಮೆರಿಕ ವಿವಿಗೆ ಜಾಗತಿಕ ರಾಯಭಾರಿ

ಬೀದರ್​
Published on

ಬೀದರ್: ಇಲ್ಲಿನ ಇಂಜಿನಿಯರಿಂಗ್ ಪದವೀಧರೆ ಕೀರ್ತನಾ ದಾದಾರಾವ್ ಕೋಳೆಕರ್ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯ `ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಬಾಲ್ಟಿಮೋರ್'ನ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಸದ್ಯ ಬೀದರ್ ನಲ್ಲಿರುವ ಇವರು ಅಮೆರಿಕದ ಕಾಲಮಾನದಂತೆ ಆನ್ ಲೈನ್ ನಲ್ಲಿ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಯ ವಿವಿಧ ಕೋಸ್೯, ಉತ್ಕೃಷ್ಟ ಶೈಕ್ಷಣಿಕ ಗುಣಮಟ್ಟ ಹಾಗೂ ಸೌಕರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆ ವಿದ್ಯಾರ್ಥಿನಿಯೊಬ್ಬರಿಗೆ ಈ ಗೌರವ ಸಿಕ್ಕಿರುವುದು ವಿಶೇಷ.

ಕೀರ್ತನಾ ಅವರು ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಬಾಲ್ಟಿಮೋರ್ ನಲ್ಲಿ ಎರಡು ವರ್ಷ ಮಾಸ್ಟಸ್೯ ಇನ್ ಇನ್ಫಾರ್ಮೆಷನ್ ಸಿಸ್ಟಮ್ ಕೋಸ್೯ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬಂದಿದ್ದು, ಬರುವ ಡಿಸೆಂಬರ್ ನಲ್ಲಿ ಕೋಸ್೯ ಪೂರ್ಣಗೊಳ್ಳಲಿದೆ. ಅಮೆರಿಕ ವಿವಿಯಲ್ಲಿ ರಾಯಭಾರಿ ಆಗುವ ಮೂಲಕ ಕೀರ್ತನಾ ಪ್ರತಿಭೆ ಪ್ರದರ್ಶಿಸಿದ್ದಾರೆ.

ಬೀದರ್ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಗುರುನಾನಕ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಗುರುನಾನಕ್ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಜೆಪಿ ನಗರದ ನಿವಾಸಿಯಾಗಿರುವ ಖ್ಯಾತ ವಕೀಲ ದಾದಾರಾವ್ ಕೋಳೆಕರ್ ಹಾಗೂ ದಿವಂಗತ ಪ್ರೊ.ಅಲ್ಕಾ ಕೋಳೆಕರ್ ಪುತ್ರಿಯಾಗಿದ್ದಾರೆ.

ಸನ್ಮಾನ: ವಿವಿ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾದ ಕೀರ್ತನಾ ಅವರನ್ನು ನಗರದಲ್ಲಿ ವಕೀಲರಾದ ವೀರಶೆಟ್ಟಿ ಭಂಡೆ, ಕೆ.ಕಾಶೀನಾಥ, ಬಾಬುರಾವ ಪಾಟೀಲ್ ಮತ್ತು ಗುರುನಾನಕ್ ಪಬ್ಲಿಕ್ ಶಾಲೆ ನಿವೃತ್ತ ಶಿಕ್ಷಕಿ ವಿಮಲಾ ಪಾಟೀಲ್ ಸನ್ಮಾನಿಸಿದರು.

ಅಮೆರಿಕ ವಿಶ್ವವಿದ್ಯಾಲಯದ ಜಾಗತಿಕ ರಾಯಭಾರಿಯಾಗಿ ಆಯ್ಕೆ ಆಗಿರುವುದು ಸಂತಸ ತಂದಿದೆ. ನಾನು 2020ನೇ ಸಾಲಿನ ಮೊದಲ ರಾಯಭಾರಿ ಆಗಿದ್ದನ್ನು ವಿವಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಕೋವಿಡ್ ಸಂದರ್ಭದ ಕಾರ್ಯಕ್ಕಾಗಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದು ಖುಷಿ ತಂದಿದೆ.| ಕೀರ್ತನಾ ಕೋಳೆಕರ್ಅಮೆರಿಕ ವಿವಿ ರಾಯಭಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net