ವಸತಿ ಯೋಜನೆ ಅಕ್ರಮ: 7 ಪಿಡಿಒ ಅಮಾನತು ಸೇರಿ ಒಟ್ಟು 40 ಪಿಡಿಒಗಳಿಗೆ 72 ಕೋಟಿ ರೂ. ದಂಡ!

House 1
Published on

ಬೀದರ್: ವಿವಿಧ ವಸತಿ ಯೋಜನೆಯಡಿ ಅಕ್ರಮದಲ್ಲಿ ಭಾಗಿಯಾಗಿದ್ದ 7 ಪಿಡಿಒ ಅಮಾನತು ಸೇರಿದಂತೆ ಒಟ್ಟು 40 ಪಿಡಿಒಗಳಿಗೆ ಸರ್ಕಾರ 72 ಕೋಟಿ ರೂಪಾಯಿ ದಂಡ ವಿಧಿಸಿದೆ.

ವಿವಿಧ ವಸತಿ ಯೋಜನೆಯಡಿ ಅಕ್ರಮದಲ್ಲಿ ಭಾಲ್ಕಿ ತಾಲೂಕಿನ 40 ಗ್ರಾಮ ಪಂಚಾಯತಿ ಪಿಡಿಓಗಳು ಭಾಗಿಯಾಗಿದ್ದು, 07 ಜನ ಪಿಡಒಗಳನ್ನು ಜಿಲ್ಲಾ ಪಂಚಾಯತ್​ ಸಿಇಒ ಅಮಾನತು ಮಾಡಿದ್ದಾರೆ.

ವಿವಿಧ ವಸತಿ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭಾವಿಗಳಿಗೆ ಮನೆ ಹಂಚಿಕೆಯಲ್ಲಿ ಭಾರಿ ಅಕ್ರಮ ಹಿನ್ನೆಲೆಯಲ್ಲಿ ಭಾಲ್ಕಿಯ 40 ಗ್ರಾಮ ಪಂಚಾಯತಿ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 8 ಸಾವಿರ ಫಲಾನುಭಾವಿಗಳಿಗೆ ಅಕ್ರಮ ಮನೆ ಮಂಜೂರಾತಿ ಮಾಡಿದ ಆರೋಪ ಹೊತ್ತ ಬೀದರ್​ನ ಭಾಲ್ಕಿ ತಾಲೂಕಿನ 40 ಗ್ರಾಮ ಪಂಚಾಯತಿಗಳ ಪಿಡಿಒಗಳಿಗೆ 72 ಕೋಟಿ ರೂ. ದಂಡ ವಿಧಿಸಲಾಗಿದೆ.

ಭಾಲ್ಕಿಯ ಬಾಳೂರ್ ಪಿಡಿಒ ಸಂಗಮೇಶ, ಬಿರಿ(ಬಿ) ಪಿಡಿಓ ಮಲ್ಲೇಶ ಮಾರುತಿ, ರೇವಣಪ್ಪ ರೇಖಾ, ಚಂದ್ರಶೇಖರ, ಸಂತೋಷ ಹಾಗೂ ಪ್ರವೀಣಕುಮಾರ ಮಹಾತ್ಮಕರ ಸೇರಿದಂತೆ 7 ಜನ ಪಿಡಿಒಗಳಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಉಳಿದ 33 ಪಿಡಿಒಗಳಿಗೂ ಅಮಾನತು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.

ಅಮಾನತು ಮಾಡಿ ಜಿಲ್ಲಾ ಪಂಚಾಯತ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net