ಜೆಡಿಎಸ್ ಮುಖಂಡನ ಮನೆಯಲ್ಲಿ ಹುಲಿ ಚರ್ಮ ಪತ್ತೆ: ಆರೋಪಿ ಸೇರಿ 4 ಹುಲಿ ಚರ್ಮದ ತುಂಡುಗಳು ವಶಕ್ಕೆ

JDS Leader
Published on

ಬೀದರ್: ಜೆಡಿಎಸ್ ಪಕ್ಷದ ಮುಖಂಡ ಅಶೋಕ ಪಾಟೀಲ್ ಮನೆಯ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿ ಚರ್ಮ ವಶಕ್ಕೆ ಪಡೆದು, ಪಾಟೀಲ್​ರನ್ನು ಬಂಧಿಸಿದ್ದಾರೆ.

ಬೀದರ್ ತಾಲೂಕಿನ ಸಂಗೋಳಗಿ ಗ್ರಾಮದ ಅಶೋಕ್ ಪಾಟೀಲ್ ಎಂಬುವರ ಮನೆಯಲ್ಲಿ ಹುಲಿ ಚರ್ಮದ ತುಂಡುಗಳಿರುವ ಬಗ್ಗೆ ಖಚಿತ ಮಾಹಿತಿ ಬಂದ ಕೂಡಲೇ ಬೀದರ್ ಮತ್ತು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು.

ಅಶೋಕ್ ಪಾಟೀಲ್ ಮನೆಯ ಜಗಲಿಯಲ್ಲಿ ಹುಲಿ ಚರ್ಮವನ್ನು ಪೂಜೆಗೆ ಇಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಜಗಲಿ ಮೇಲಿದ್ದ 4 ಹುಲಿ ಚರ್ಮದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಅಶೋಕ್ ಪಾಟೀಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೀದರ್ ಅರಣ್ಯ ಇಲಾಖೆ ಅಧಿಕಾರಿ ವಾನತಿ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಎಎಸ್ಎಫ್ ಡಾ.ಶಿವಕುಮಾರ್, ವಲಯ ಅರಣ್ಯ ಅಧಿಕಾರಿ ಮಹೇಂದ್ರ ಮೌರ್ಯ ಸೇರಿದಂತೆ ಇತರೆ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net