ಭೂತದ ಹಾಡುಗಳು ಕೃತಿ ಬಿಡುಗಡೆ

New Project (35)
Published on

ಕುಂಬಳೆ: ಅನುವಾದಿತ ಕೃತಿ ‘ಭೂತದ ಹಾಡುಗಳು’ ಬಿಡುಗಡೆ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ನಡೆಯಿತು. ಬೆಂಗಳೂರಿನ ದ್ರಾವಿಡಂ ಪಬ್ಲಿಕೇಷನ್ಸ್ ಪ್ರಕಾಶಿಸಿರುವ ಕೃತಿಯನ್ನು ಡಾ.ಸುಷ್ಮಾ ಶಂಕರ್ ಅನುವಾದಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅನುವಾದಕ ಕೆ.ವಿ.ಕುವಾರನ್ ಅವರು ಡಾ.ಕೆ.ಕಮಲಾಕ್ಷ ಅವರಿಗೆ ನೀಡಿ ಕೃತಿ ಬಿಡುಗಡೆಗೊಳಿಸಿದರು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರೊ.ಎ.ಶ್ರೀನಾಥ್, ಪತ್ರಕರ್ತ ರವೀಂದ್ರನ್ ಪಾಡಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟತ್ತೋಡಿ, ಡಾ.ಕೆ.ಕಮಲಾಕ್ಷ, ಪ್ರೊ.ರಾಕೇಶ್, ನಿಥಿನ್ ಮತ್ತಿತರರಿದ್ದರು. ಡಾ.ಕೆ.ವಾಮನ ರಾವ್ ಬೇಕಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net