

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸಿದ್ದರು. ಜೈಲರ್ ಸಿನಿಮಾ ರಿಲೀಸ್ ಬಳಿಕ ಇದೀಗ ನಿನ್ನೆಯಷ್ಟೆ ಭೋಲೆ ಶಂಕರ್ ಬಿಡುಗಡೆಯಾಗಿದ್ದು, ಅಂದುಕೊಂಡಷ್ಟು ಚಿತ್ರವನ್ನು ಜನರು ಸ್ವೀಕರಿಸಿಲ್ಲ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಮಕಾಡೆ ಮಲಗಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಬೇಸರತಂದಿದೆ.
ಭೋಲಾ ಶಂಕರ್ ಸಿನಿಮಾದಲ್ಲಿ ತಮನ್ನಾ ಪಾತ್ರ ಮಾಡಿದ್ದರೆ, ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಕೂಡ ಹಿಟ್ ಆಗಿತ್ತು. ಈಗ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಭೋಲಾ ಶಂಕರ್ ತಮನ್ನಾನ್ನ ಕೈ ಹಿಡಿಯದಿದ್ದರೂ, ಜೈಲರ್ ಖುಷಿ ತಂದಿದೆ.
ಸದ್ಯ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ತಮನ್ನಾ ಭಾಟಿಯಾ ಅವರಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ‘ಭೋಲಾ ಶಂಕರ್’ ಸಿನಿಮಾದಲ್ಲಿ ಮೆಗಾಸ್ಟಾರ್ ನಾಯಕಿಯಾಗಿರುವ ತಮನ್ನಾ ಅವರು ಈಗ ಸಹನಟ ಚಿರಂಜೀವಿ ಬಗ್ಗೆ ಸೀಕ್ರೆಟ್ ಒಂದನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟಿ ಮೆಗಾಸ್ಟಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ಭೋಲಾ ಶಂಕರ್ ಸಿನಿಮಾ ಆಗಸ್ಟ್ 11ಕ್ಕೆ ತೆರೆ ಕಂಡಿದೆ. ಮೆಗಾಸ್ಟಾರ್ ತಂಗಿಯಾಗಿ ಮಹಾನಟಿ ಕೀರ್ತಿ ಸುರೇಶ್, ನಾಯಕಿಯಾಗಿ ತಮನ್ನಾ ನಟಿಸಿದ್ದಾರೆ. ಸಿನಿಮಾದ ಟ್ರೈಲರ್, ಫಸ್ಟ್ ಲುಕ್ ಎಲ್ಲವೂ ಅಭಿಮಾನಿಗಳ ಗಮನ ಸೆಳೆದಿದೆ. ಮೆಗಾಸ್ಟಾರ್ ಭರ್ಜರಿ ಆ್ಯಕ್ಷನ್ ನೋಡೋದ್ದಕ್ಕೆ ಫ್ಯಾನ್ಸ್ ಕಾದಿದ್ದರು. ಆದರೆ, ಅಂದುಕೊಂಡಷ್ಟು ಸಿನಿಮಾ ಮೋಡಿ ಮಾಡುತ್ತಿಲ್ಲ.
ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಮನ್ನಾ ಚಿರಂಜೀವಿ ಅವರು ಶ್ರಮಜೀವಿ. ಯಾಕೆಂದರೆ ನಾವು ಹಾಡೊಂದರ ಚಿತ್ರೀಕರಣ ಮಾಡುವಾಗ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಹೀಗಿದ್ದರೂ ಸಹ ನೋವಿನ ನಡುವೆಯೇ ಶೂಟಿಂಗ್ ಮುಂದುವರೆಸಿದರು. ಸಿನಿಮಾ ಶೂಟಿಂಗ್ ಮುಂದುವರೆಯಲು ಏನು ಮಾಡಬೇಕೋ ಅದನ್ನು ಚಿರು ಅವರು ಮಾಡಿದರು ಎಂದಿದ್ದರು.