More

    ಭವಾನಿ ರೇವಣ್ಣ ಬಳಿಯಿರೋ ಕೋಟಿ ಮೌಲ್ಯದ ಕಾರಿನಲ್ಲಿದೆ ಲಕ್ಷುರಿ ಫೀಚರ್ಸ್​​; ಬೆಂಗಳೂರು ಆನ್ ರೋಡ್​​ಗೆ ಖರ್ಚಾಗುತ್ತೆ ಕೋಟಿ.. ಕೋಟಿ..

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಸೊಸೆ, ಎಚ್‌ಡಿ ರೇವಣ್ಣ  ಪತ್ನಿ ಭವಾನಿ ರೇವಣ್ಣ  ಪ್ರಯಾಣಿಸುತ್ತಿದ್ದ ಕಾರ್‌ಗೆ  ಬೈಕ್ ಸವಾರನೊಬ್ಬ ಡಿಕ್ಕಿ ಹೊಡಿದಿದ್ದನು. ಈ ವೇಳೆ ಕಾರ್​​ನಲ್ಲಿದ್ದ ಭವಾನಿ ರೇವಣ್ಣ  ತಮ್ಮ ಕೋಟಿ ಬೆಲೆ ಬಾಳುವ ಕಾರ್​ಗೆ ಡ್ಯಾಮೆಜ್​ ಆಯ್ತು ಎನ್ನುವ ಸಿಟ್ಟಿಗೆ ಬೈಕ್​ ಸವಾರನಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈ ವೇಳೆ  ನೆಟ್ಟಿಗರ ಕಣ್ಣು ಬಿದ್ದಿದ್ದು ಭವಾನಿ ರೇವಣ್ಣ ಅವರ  ವೆಲ್‌ಫೈರ್ ಕಾರ್​ ಮೇಲೆ. ಈ ಕಾರಿನ ವಿಶೇಷತೆ ಏನು ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹುಡುಕುತ್ತಿದ್ದವರಿಗೆ ಇಲ್ಲಿದೆ ಮಾಹಿತಿ… ಈ ಟೊಯೊಟಾ ವೆಲ್‌ಫೈರ್  ಕಾರು 60 ಕ್ಕೂ ಹೆಚ್ಚು ಸಂಪರ್ಕಿತ ಫಿಚರ್ಸ್ ಗಳನ್ನು ಹೊಂದಿದೆ.

    ಕಾರಿನ ಬೆಲೆ ಎಷ್ಟು ಗೊತ್ತಾ?: ಭಾರತದಲ್ಲಿ ಟೊಯೊಟಾ ಕಂಪನಿಯು  ನಾಲ್ಕು ವರ್ಷಗಳ ಹಿಂದಷ್ಟೇ ಹೊಸ ವೆಲ್‌ಫೈರ್ ಪರಿಚಯಿಸಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಸದ್ಯ ಭಾರತದಲ್ಲಿ ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಮಾರಾಟವಾಗುತ್ತಿದ್ದು, ಇದರಲ್ಲಿ ಹೈ ವೆರಿಯೆಂಟ್ ಈ ಕಾರಿಗೆ ಪ್ರಸ್ತುತ ಆನ್ ರೋಡ್ ಬೆಲೆಯು ರೂ.1,48,58,511 ಆಗಿದ್ದು, ಈ ಕಾರಿನ ಟಾಪ್ ವೆರಿಯೆಂಟ್ ಮಾದರಿಯ ಬೆಂಗಳೂರು ಆನ್ ರೋಡ್ ಬೆಲೆಯು ರೂ.1.61 ಕೋಟಿಯಾಗಿದೆ. ಇದು ಸ್ಟ್ಯಾಂಡ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವು 2.5-ಲೀಟರ್ ಇನ್‌ಲೈನ್ 4-ಸಿಲಿಂಡರ್ DOHC (ಡಬಲ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್) ಎಂಜಿನ್ ಅನ್ನು ಹೊಂದಿದೆ.

    ಭವಾನಿ ರೇವಣ್ಣ ಬಳಿಯಿರೋ ಕೋಟಿ ಮೌಲ್ಯದ ಕಾರಿನಲ್ಲಿದೆ ಲಕ್ಷುರಿ ಫೀಚರ್ಸ್​​; ಬೆಂಗಳೂರು ಆನ್ ರೋಡ್​​ಗೆ ಖರ್ಚಾಗುತ್ತೆ ಕೋಟಿ.. ಕೋಟಿ..

    ಕಾರಿನ ಮೈಲೆಜ್​ ಎಷ್ಟು ಗೊತ್ತಾ?: ವೆಲ್‌ಫೈರ್ ಕಾರಿನಲ್ಲಿ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್ ಸಿಸ್ಟಂ ಹೊಂದಿದೆ.  ಮುಂಭಾಗ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರ್ ಶಕ್ತಿ ಒದಗಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 19.28 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

    ವೆಲ್‌ಫೈರ್ ಕಾರಿನ ವಿಶೇಷತೆ: ವೆಲ್‌ಫೈರ್ ಕಾರು ಹೈ ಎಂಡ್ ವಿಐಪಿ ಎಕ್ಸಿಕ್ಯೂಟಿವ್ ಲಾಂಜ್ ಆವೃತ್ತಿಯಾಗಿದ್ದು,  ಇದು 4,935 ಎಂಎಂ ಉದ್ದ, 1,850 ಎಂಎಂ ಅಗಲ, 1,895 ಎಂಎಂ ಎತ್ತರ ಹಾಗೂ 3,000 ಎಂಎಂ ವೀಲ್ಹ್ ಬೆಸ್‌ನೊಂದಿಗೆ ಅತ್ಯುತ್ತಮ ಒಳಾಂಗಣ ಸೌಲಭ್ಯ ಹೊಂದಿದೆ. ಹೊಸ ಕಾರಿನ ಒಳಭಾಗವು 7 ಸೀಟರ್ ಸೌಲಭ್ಯದೊಂದಿಗೆ ಇದರಲ್ಲಿ 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಚ್‌ಡಿಎಂಐನೊಂದಿಗೆ ವೈ-ಪೈ ಸೌಲಭ್ಯವನ್ನು ಹೊಂದಿರುವ 13-ಇಂಚಿನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ರೂಫ್ ಲೈಟ್ ಸಿಸ್ಟಂ ಮತ್ತು 17-ಸ್ಪೀಕರ್ಸ್ ಹೊಂದಿರುವ ಜೆಬಿಎಲ್ ಆಡಿಯೋ ಸಿಸ್ಟಂ ನೀಡಲಾಗಿದೆ. ಕಾರಿನಲ್ಲಿ ಪ್ರಮುಖವಾಗಿ ಕ್ಯಾಪ್ಟನ್ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ಪುಷ್‌ಬ್ಯಾಕ್ ಸೌಲಭ್ಯದೊಂದಿಗೆ ಆರ್ಮ್‌ರೆಸ್ಟ್ ಮತ್ತು ಲೆಗ್ ರೆಸ್ಟ್ ಒದಗಿಸುತ್ತದೆ. ಚಳಿಗಾಲದಲ್ಲಿ ಬಿಸಿ ಹವೆ ಮತ್ತು ಬಿಸಿ ವಾತಾವರಣವಿದ್ದಲ್ಲಿ ತಂಪಾಗುತ್ತದೆ.

    ಭವಾನಿ ರೇವಣ್ಣ ಬಳಿಯಿರೋ ಕೋಟಿ ಮೌಲ್ಯದ ಕಾರಿನಲ್ಲಿದೆ ಲಕ್ಷುರಿ ಫೀಚರ್ಸ್​​; ಬೆಂಗಳೂರು ಆನ್ ರೋಡ್​​ಗೆ ಖರ್ಚಾಗುತ್ತೆ ಕೋಟಿ.. ಕೋಟಿ..

    ಕಾರಿನಲ್ಲಿರುವ ಸುರಕ್ಷತಾ ವೈಶಿಷ್ಟ್ಯ: ಸುರಕ್ಷತೆಗಾಗಿ ವೆಹಿಕಲ್ ಡೈನಾಮಿಕ್ ಇಂಟೆಗ್ರೆಟೆಡ್ ಮ್ಯಾನೆಜ್‌ಮೆಂಟ್ ತಂತ್ರಜ್ಞಾನವನ್ನು(ವಿಡಿಐಎಂ) ಬಳಕೆ ಮಾಡಲಾಗಿದ್ದು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, 7 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಪ್ರೀ-ಕೊಲಿಷನ್ ಸೇಫ್ಟಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts