ಭಟ್ಕಳ: ಪಟ್ಟಣದ ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ ಎಜುಕೇಷನ್ ನ್ಯೂಸ್ ನೆಟ್ವರ್ಕ್ ಸಂಸ್ಥೆಯು ನೀಡುವ ಡೈನಮಿಕ್ ಸ್ಕೂಲ್-2024 ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಶಾಲೆಯ ಸಾಧನೆಯ ಕಿರೀಟಕ್ಕೆ ಹೊಸ ಗರಿ ಸೇರಿಕೊಂಡಿದೆ.
ಎಜುಕೇಷನ್ ಟುಡೇ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕೆ-12 ಲೀಡರಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡಗಳ ಕುರಿತಾದ 12ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸತತ 10 ವರ್ಷಗಳಿಂದ 100 ಪ್ರತಿಶತ ಫಲಿತಾಂಶದೊಂದಿಗೆ ಈ ವರ್ಷದಲ್ಲಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿರುವುದು ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ವರ್ಷದ ಜೂನ್ನಲ್ಲಿ ಮೋಸ್ಟ್ ಇನ್ನೋವೆಟಿವ್ ಸ್ಕೂಲ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ಟ್ರಸ್ಟ್ ಚೇರ್ಮನ್ ಡಾ. ಸುರೇಶ ನಾಯಕ ಪ್ರಶಸ್ತಿ ಸ್ವೀಕರಿಸಿದರು.