ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ: ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಡಿಟೇಲ್ಸ್‌

band

ನವದೆಹಲಿ: ಎಸ್‌ಸಿ/ಎಸ್‌ಟಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಮೀಸಲಾತಿ ಬಚಾವೋ ಸಂಘರ್ಷ್ ಸಮಿತಿಯು ಆಗಸ್ಟ್ 21 ರಂದು ಅಂದರೆ ನಾಳೆ ಭಾರತ್ ಬಂದ್​​​ಗೆ ಕರೆ ನೀಡಿದೆ. ಅಂದ ಹಾಗೆ ಕರ್ನಾಟಕದಲ್ಲಿ ಈ ಬಂದ್ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Uttar Pradesh | ನರ್ಸ್ ಮೇಲೆ ಅತ್ಯಾಚಾರ: ವೈದ್ಯ ಸೇರಿ ಮೂವರ ಬಂಧನ

ಆಗಸ್ಟ್ 1 ರಂದು ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಮತ್ತು ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಒಳಗೆ ಉಪ-ವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಅನುಮತಿ ನೀಡಿದೆ. ನಿಜವಾಗಿಯೂ ಅಗತ್ಯವಿರುವವರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದೆ. ಆದರೆ ಸರ್ವೋಚ್ಛ ನ್ಯಾಯಾಲಯದ ಈ ತೀರ್ಪನ್ನು ವಿರೋಧಿಸಿ ಮತ್ತು ನ್ಯಾಯಾಲಯದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಭಾರತ್ ಬಂದ್ ನಡೆಸಲಾಗುತ್ತಿದೆ.

ಉತ್ತರ ಭಾರತದಲ್ಲಿ ಅಲರ್ಟ್: ಉತ್ತರಪ್ರದೇಶ ಹಾಗೂ ರಾಜಸ್ತಾನದಲ್ಲಿ ಬಂದ್​ನ ತೀವ್ರತೆಯು ಹೆಚ್ಚಾಗುವ ಮುನ್ಸೂಚನೆಯಿದ್ದು, ಪ್ರಮುಖವಾಗಿ ಆ ಎರಡು ರಾಜ್ಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆ ಸೇರಿದಂತೆ ಹಲವು ರೀತಿಯ ಭದ್ರತಾ ಪಡೆಗಳನ್ನು ನೇಮಿಸಲಾಗುತ್ತಿದೆ.‘

ಭಾರತ್ ಬಂದ್​​ಗೆ ಕರೆ ನೀಡಿರುವುದೇಕೆ?: ವರದಿಗಳ ಪ್ರಕಾರ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಒಂದು ತೀರ್ಪು ಈಗ ಭಾರತ್ ಬಂದ್​ಗೆ ಕಾರಣವಾಗಿದೆ. ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ಎಸ್​ಸಿ ಎಸ್​ಟಿಗೆ ಸಮುದಾಯಗಳಲ್ಲೂ ಒಳಪಂಗಡಗಳನ್ನು ಗುರುತಿಸುವಂತೆ ಎಂದು ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿತ್ತು. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ರಿಸರ್ವೆಷನ್ ಬಚಾವೋ ಸಂಘರ್ಷ ಸಮಿತಿ ಸಜ್ಜಾಗಿದೆ. ತಮ್ಮ ಬಂದ್​ಗೆ ಬೆಂಬಲಿಸಬೇಕು ಎಂದು ಹಲವು ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳಿಗೆ ಮನವಿಯನ್ನು ಕೂಡ ಮಾಡಲಾಗಿದೆ.
ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತಾ ಕ್ರಮಗಳು

ಬಂದ್ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ವಿಭಾಗೀಯ ಆಯುಕ್ತರು ಉಪಸ್ಥಿತರಿದ್ದರು. ಬಂದ್ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಲು ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಭಾರತ್ ಬಂದ್ ದಿನ ಏನಿರುತ್ತೆ , ಏನಿರಲ್ಲ?: ಭಾರತ್ ಬಂದ್ ದಿನದಂದು ಏನಿರುತ್ತೆ ಏನಿರಲ್ಲ ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆದರೆ ತುರ್ತು, ಆಂಬ್ಯುಲೆನ್ಸ್ ಸೇವೆಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು, ಪೊಲೀಸ್ ಸೇವೆಗಳು ಸಕ್ರಿಯವಾಗಿರಲಿವೆ. ಅಗತ್ಯ ಔಷಧಿಗಳನ್ನು ಒದಗಿಸಲು ಫಾರ್ಮಸಿಗಳು ಸಹ ತೆರೆದಿರುತ್ತವೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು ಎಂದಿನಂತೆ ಇರುತ್ತವೆ ಎಂದು ವರದಿಗಳು ತಿಳಿಸಿವೆ. ಬಂದ್ ವೇಳೆ ಹಿಂಸಾಚಾರದ ಸಾಧ್ಯತೆಯ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸಿದ್ಧತೆಗಾಗಿ ಸಭೆ ನಡೆಸಿದ್ದಾರೆ. ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ.

ಅಬಕಾರಿ ನೀತಿ ಪ್ರಕರಣ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ನ್ಯಾಯಾಂಗ ಬಂಧನ ವಿಸ್ತರಣೆ

Share This Article

Raw Milkನಿಂದ ಹೊಳೆಯುವ ತ್ವಚೆ! ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ ಸಾಕು..

Raw Milk Beauty Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಲು…

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…