ಭಜನಾ ದಿಂಡಿ ಮೆರವಣಿಗೆ ಸಂಪನ್ನ...

Dhindi Lead
Published on

ಲಕ್ಷ್ಮೀ ವೆಂಕಟೇಶ ಸನ್ನಿಧಿಗೆ ಹೂ-ಹಣ್ಣುಗಳ ಅಲಂಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ತೆಂಕಪೇಟೆಯಲ್ಲಿರುವ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವದ ನಿಮಿತ್ತ 125 ದಿನಗಳ ಅಹೋರಾತ್ರಿ ನಿರಂತರ ಭಜನೋತ್ಸವ ನಡೆದಿದೆ. ತನ್ನಿಮಿತ್ತ ಶ್ರೀದೇವರ ಸನ್ನಿಧಿಯನ್ನು ಜೂ.1ರಂದು ವಿವಿಧ ಬಗೆಯ ಹೂ-ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಭಜನಾ ದಿಂಡಿ ಮೆರವಣಿಗೆ ಅತ್ಯಂತ ಸಂಭ್ರಮದಿಂದ ಸಂಪನ್ನಗೊಂಡಿತು.

ಸ್ವರ್ಣ ಪಾದುಕೆಯ ಮೆರವಣಿಗೆ

Dhindi 3
ಶ್ರೀ ಕಾಶಿ ಮಠ ಸಂಸ್ಥಾನದ ಸಂಯಮೀಂದ್ರ ತೀರ್ಥ ಶ್ರೀಪಾದರು ಭಜನಾ ದಿಂಡಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀಮದ್​ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವ ಹಾಗೂ ಶ್ರೀ ಗುರುಗಳ ಆರಾಧನೆ ನಿಮಿತ್ತ ಸ್ವರ್ಣ ಪಾದುಕೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಶ್ರೀ ವಿಠೋಬಾ ರುಕುಮಾಯಿ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆಯೊಂದಿಗೆ ತೆರಳಿದ ಮೆರವಣಿಗೆಯು ಉಡುಪಿ ದೇವಳದಿಂದ ಹೊರಟು ಐಡಿಯಲ್​ ಸರ್ಕಲ್​, ಹಳೇ ಡಯಾನಾ ಸರ್ಕಲ್​, ತ್ರಿವೇಣಿ ಸರ್ಕಲ್​, ಚಿತ್ತರಂಜನ ಸರ್ಕಲ್​, ಕೊಳದಪೇಟೆಯಾಗಿ ದೇವಳಕ್ಕೆ ಆಗಮಿಸಿತು. ಶ್ರೀಗಳೊಂದಿಗೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Dhindi 2
ಮಟ್ಟಾರು ಸತೀಶ ಕಿಣಿ, ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ನರಹರಿ ಪೈ, ವಿಶಾಲ ಶೆಣೈ, ಉಮೇಶ ಪೈ, ಭಾಸ್ಕರ ಶೆಣೈ, ದೀಪಕ ಭಟ್​, ದಯಾಘನ್​ ಭಟ್​, ವಿಶ್ವನಾಥ ಭಟ್​, ವಸಂತ ಕಿಣೆ, ಗಣೇಶ ಕಿಣಿ, ಆಡಳಿತ ಮಂಡಳಿಯ ಸದಸ್ಯರು, ಜಿಎಸ್​ಬಿ ಸಮಾಜದ ಯುವಕ ಮಂಡಳಿ, ಭಗಿನಿ ವೃಂದ, ಮಹಿಳಾ ಮಂಡಳಿ, ಶತಮಾನೋತ್ತರ ರಜತ ಭಜನಾ ಮಹೋತ್ಸವ ಸಮಿತಿ ಸದಸ್ಯರು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net