ಬೆಂಗಳೂರು: ನಟ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರತಂಡವು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ: ಹರಿಯಾಣ ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಸಿದ ಕುಸ್ತಿಪಟು ವಿನೇಶ್ ಫೋಗೇಟ್
ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಬರೆದ ಕಥೆಗೆ ಡಾಕ್ಟರ್ ಸೂರಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರವು ಕನ್ನಡ ಸೇರಿ ಪಂಚ ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾಯ್ತಿದ್ದಾರೆ.
ಚಿತ್ರದ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ. ಶ್ರೀಮುರಳಿ ಅವರಿಗೆ ಶೂಟಿಂಗ್ ವೇಳೆ ಆದ ಗಾಯಗಳು ಇನ್ನಿತರ ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬರುತ್ತಿತ್ತು. ಇದೀಗ ಅಕ್ಟೋಬರ್ 31ನೇ ತಾರೀಖು ‘ಬಘೀರ’ ಸಿನಿಮಾ ರಾಜ್ಯದಾದ್ಯಂತ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
The hunt for justice begins!#Bagheera roars into cinemas on October 31st 💥💥@SRIMURALIII #DrSuri #PrashanthNeel @VKiragandur @rukminitweets @AJANEESHB @hombalefilms @ChaluveG @GarudaRam @AJShetty @ChethanDsouza @yogigraj @prakashraaj @BagheeraTheFilm#BagheeraOnOct31 pic.twitter.com/0eDQUcX9WH
— Hombale Films (@hombalefilms) September 11, 2024
ಶ್ರೀಮುರಳಿ ಬಘೀರ ಸಿನಿಮಾ ಕನ್ನಡ ಅಷ್ಟೇ ಅಲ್ಲದೇ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಸಹ ತೆರೆಗೆ ಬರಲಿದೆ. ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ.
ಸೂರಿ ಅವರು ಯಶ್ ಅವರ ʼಲಕ್ಕಿ ʼ ಚಿತ್ರದ ನಂತರ ನಾಲ್ಕು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಬಂದಿದ್ದಾರೆ. ಮಫ್ತಿ, ಭರಾಟೆ, ರಥಾವರ, ಕಂಠಿ ಚಿತ್ರಗಳಲ್ಲಿ ಅಬ್ಬರಿಸಿದ ಶ್ರೀಮುರುಳಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದೇ ರೀತಿ ರಕ್ಷಿತ್ ಶೆಟ್ಟಿ ನಟನೆಯ ʻಸಪ್ತ ಸಾಗರದಾಚೆ ಎಲ್ಲೋʼ, ಗಣೇಶ್ ನಟನೆಯ “ಬಾನ ದಾರಿಯಲ್ಲಿʼ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ರುಕ್ಮಿಣಿ ವಸಂತ್ ಈಗ “ಬಘೀರʼ ಚಿತ್ರದ ನಾಯಕಿಯಾಗಿದ್ದಾರೆ.
ಚಿತ್ರದಲ್ಲಿ ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಮತ್ತಿತರ ಪ್ರಮುಖ ಕಲಾವಿದರಿದ್ದಾರೆ.
J-K polls | ಐದು ಗ್ಯಾರಂಟಿಗಳನ್ನು ಘೋಷಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ!