ಬೈಕ್ ಚಾಲನೆ ಮಾಡುವಾಗ ಹಿಂಬದಿ ಸವಾರರ ಜತೆ ಮಾತಾಡುದ್ರೆ ಬೀಳುತ್ತೆ ಫೈನ್​; ನೂತನ ಕ್ರಮ ಜಾರಿ ಮಾಡಿದ ಸರ್ಕಾರ

Bike Ride
Published on: 

ನವದೆಹಲಿ: ಸಾಮಾನ್ಯವಾಗಿ ನಾವುಗಳು ನೋಡಿರುವಂತೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಸವಾರರು ಹಿಂಬದಿ ಕುಳಿತಿರುವವರ ಜೊತೆ ಮಾತನಾಡುತ್ತ ಚಾಲನೆ ಮಾಡುತ್ತಿರುವುದನ್ನು ನೋಡಿದ್ದೇವೆ. ಇದರಿಂದ ಅನೇಕ ಬಾರಿ ಅಪಘಾತಗಳಾಗಿದ್ದು, ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಕೇರಳ ಸರ್ಕಾರ ಮುಂದಾಗಿದ್ದು, ಹೊಸ ಕಾಯ್ದೆಯನ್ನು ಜರಿಗೆ ತರಲು ಸಿದ್ಧತೆ ನಡೆಸಿದೆ.

ಕೇರಳದ ಮೋಟಾರು ವಾಹನ ಇಲಾಖೆಯೂ ದ್ವಿಚಕ್ರ ವಾಹನ ಸವಾರರನ್ನು ಗುರಿಯಾಗಿರಿಸಿಕೊಂಡು ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಹೊಸ ನಿಯಮವನ್ನು ಪರಿಚಯಿಸಿದೆ. ಈ ನಿಯಮವು ಗೊಂದಲವನ್ನು ಪರಿಹರಿಸುವ ಜೊತೆಗೆ ಅಪಘಾತವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Traffic Police

ಈ ನಿಯಮದಡಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹಿಂಬದಿ ಸವಾರರ ಜೊತೆ ಮಾತನಾಡಿದರೆ ಅವರಿಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಅಧಿಕೃತ ಸೂಚನೆಯನ್ನು ಹೊರಡಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಯನ್ನು ಸಿದ್ದಪಡಿಸಲು ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. ಅದರಂತೆ ಈ ಸಮಿತಿಯು ದಂಡದ ಮೊತ್ತ ಸೇರಿದಂತೆ ಎಲ್ಲಾ ವಿಚಾರಗಳನ್ನು ನಿರ್ಧರಿಸಲಿದೆ.

ಹಿಂಬದಿ ಸವಾರನ ಜೊತೆ ಮಾತನಾಡುವುದು ಅಪಾಯನಾ?

ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ಪಿಲಿಯನ್‌ನೊಂದಿಗೆ ಮಾತನಾಡುವುದು ಅಪಾಯಕಾರಿ ಏಕೆಂದರೆ ಅದು ಸವಾರನ ಗಮನವನ್ನು ಬೇರೆಡೆ ಸೆಳೆಯುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ ಈ ಕ್ರಮಕೈಗೊಂಡಿದೆ.