ಸುಪ್ರಿಯಾಗೆ ಬೆಸ್ಟ್ ಪ್ಲೇಯರ್ ಪ್ರಶಸ್ತಿ

12-supriya
Published on

ಬಂಟ್ವಾಳ: ನೇಪಾಲದಲ್ಲಿ ಪಿಸಿಎ ಸ್ಪೋರ್ಟ್ಸ್ ಈವೆಂಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ನಡೆದ ಇಂಡೋ-ನೇಪಾಲ್ ಇಂಟರ್‌ನ್ಯಾಷನಲ್ ಇನ್ವಿಟೇಶನಲ್ ಮೆನ್ ಆಂಡ್ ವುಮನ್ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನ ಥ್ರೋಬಾಲ್ ಪಂದ್ಯಾಟದಲ್ಲಿ ಭಾರತ ಚಾಂಪಿಯನ್ ಪ್ರಶಸ್ತಿ ಪಡೆದಿದ್ದು, ತಂಡದಲ್ಲಿ ಭಾಗವಹಿಸಿದ್ದ ಬಂಟ್ವಾಳ ಚಂಡ್ತಿಮಾರಿನ ಸುಪ್ರಿಯಾ ಎಸ್.ಪಿ. ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದಿದ್ದಾರೆ. ಅವರು ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ. ಪುರುಷರ ತಂಡವನ್ನು ಚಂಡ್ತಿಮಾರಿನ ಪ್ರಜ್ವಲ್ ಎಸ್.ಪಿ., ರಕ್ಷಿತ್ ಆರ್. ಪ್ರತಿನಿಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net