ಗೋಡಂಬಿ ತಿಂದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯಲ್ಲ

cashew nuts
Published on

ಬೆಂಗಳೂರು: ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಹೇಳಬೇಕಾಗಿಲ್ಲ. ಪ್ರತಿ ದಿನ ನೆನೆಸಿದ ಒಣ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.  ಗೋಡಂಬಿ ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

1) ಗೋಡಂಬಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

2) ಗೋಡಂಬಿಯಲ್ಲಿ ಜಿಯಾಕ್ಸಾಂಥಿನ್ ಎಂಬ ಆ್ಯಂಟಿಆಕ್ಸಿಡೆಂಟ್ ಇದೆ. ಇದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.

3) ಗೋಡಂಬಿ ತಿಂದರೆ ತೂಕ ಹೆಚ್ಚುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಗೋಡಂಬಿಯನ್ನು ಮಿತವಾಗಿ ಸೇವಿಸಿದರೆ ತೂಕ ಕಡಿಮೆಯಾಗುವುದು ಖಂಡಿತ.

4) ಗೋಡಂಬಿ ತಿನ್ನುವುದರಿಂದ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ. ದೇಹದ ಎಲ್ಲಾ ಭಾಗಗಳು ಇದರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

5) ಮಧುಮೇಹದಿಂದ ಬಳಲುತ್ತಿರುವವರು ಗೋಡಂಬಿಯನ್ನು ತಿನ್ನುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

6) ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರೂ ಗೋಡಂಬಿ ತಿಂದರೆ ಆರೋಗ್ಯವಂತರಾಗಿರುತ್ತಾರೆ. ಇದರಲ್ಲಿರುವ ಮೆಗ್ನೀಸಿಯಮ್ ಮೈಗ್ರೇನ್ ಅನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ.

ಗಮನಿಸಿ:  ಈ ಲೇಖನವು ಜಾಗೃತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net