ನೀನು ನನ್ನ ತಂದೆ ಬಳಿ ಹೋಗು, ನಾನು ಜೈಲಿಗೆ ಹೋಗ್ತೀನಿ! ತಾಯಿಯನ್ನೇ ಕೊಂದ ಕೇಸ್​, ಸ್ಫೋಟಕ ಮಾಹಿತಿ ಬಯಲು ​

Accused Senali Sen
Published on

ಬೆಂಗಳೂರು: ಹೆತ್ತ ತಾಯಿಯನ್ನು ಕೊಂದು ಸೂಟ್​ಕೇಸ್​ನಲ್ಲಿ ಶವವಿಟ್ಟು ಪೊಲೀಸ್​ ಠಾಣೆಗೆ ಹೊತ್ತು ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಮಗಳು ಸೇನಾಲಿ ಸೇನ್​ ಎಂಬಾಕೆ ತಾಯಿ ಬೀವಾ ಪಾಲ್ (70) ಎಂಬಾಕೆಯನ್ನು ಕೊಲೆ ಮಾಡಿ, ಸೂಟ್​ಕೇಸ್​ನಲ್ಲಿ ತಂದೆಯ ಫೋಟೋ ಜತೆಗೆ ತಾಯಿ ಶವವಿಟ್ಟು, ಮೈಕೊಲೇಔಟ್ ಪೊಲೀಸ್ ಠಾಣೆಗೆ ಹೊತ್ತು ತಂದು ಶರಣಾಗಿದ್ದಾಳೆ.

ನೀನು ನನ್ನ ತಂದೆ ಬಳಿ ಹೋಗು

ಈ ಪ್ರಕರಣದ ವಿಚಾರಣೆ ವೇಳೆ ಸೆನಾಲಿ ಸೇನ್​ ಮತ್ತಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ. ತಾಯಿಯೇ ಮಗಳ ಬಳಿ ನಿದ್ರೆ ಮಾತ್ರೆ ಕೊಟ್ಟು ಸಾಯಿಸುವಂತೆ ಹೇಳಿದಳು ಎಂಬ ಅಂಶ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಸೆನಾಲಿ ತಂದೆ ತೀರಿ ಹೋಗಿದ್ದಾರೆ. ನೀನು ನನ್ನ ತಂದೆ ಬಳಿ ಹೋಗು, ನಾನು ಜೈಲಿಗೆ ಹೋಗ್ತೀನಿ ಎಂದು ಕೊಲೆ ಮಾಡುವ ಮುಂಚೆಯೇ ತಾಯಿ-ಮಗಳು ಮಾತನಾಡಿದ್ದರು ಎಂಬ ಸಂಗತಿ ಬಯಲಾಗಿದೆ.

ಮಾನಸಿಕವಾಗಿ ಕುಗ್ಗಿ ಹೋಗಿದ್ದಳು

ಆರೋಪಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್​ ಮತ್ತು ಸೆನಾಲಿ ಅತ್ತೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಂತೆ. ತಾಯಿ ಮತ್ತು ಅತ್ತೆ ಜಗಳದಿಂದ ಬೇಸತ್ತು ಸೆನಾಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಸೇನಾಲಿ ಮಗನಿಗೂ ಕೂಡ ಮಾನಸಿಕ ತೊಂದರೆ ಕಾಡುತ್ತಿತ್ತು. ಒಂದು ಕಡೆ ಮಗನ ಚಿಂತೆ, ಇನ್ನೊಂದು ಕಡೆ ಅತ್ತೆ-ತಾಯಿಯ ಜಗಳ. ಇದರಿಂದ ಜೀವನದಲ್ಲಿ ಬೇಸತ್ತು ಹೋಗಿದ್ದ ಸೆನಾಲಿ ಈ ದುಷ್ಕ್ರತ್ಯ ಎಸಗಿದ್ದಾಳೆ.

ಆಟೋ ಬುಕ್

ಸೆನಾಲಿ ಬಿಳೇಕಳ್ಳಿಯ ಎನ್​​ಎಸ್​ಆರ್​ ಗ್ರೀನ್ ಅಪಾರ್ಟ್​ಮೆಂಟ್​​ನ 106 ನಂಬರ್​ನ ಫ್ಲ್ಯಾಟ್​ನಲ್ಲಿ ವಾಸವಿದ್ದರು. ಸುಮಾರು ಆರು ವರ್ಷದಿಂದ ಒಂದೇ ಫ್ಲ್ಯಾಟ್​ನಲ್ಲಿ ನೆಲೆಸಿದ್ದಾರೆ. ಸೆನಾಲಿಗೆ ಒಬ್ಬ ಮಗ ಸಹ ಇದ್ದಾನೆ. ಇವರು ಮೂಲತಃ ಕೊಲ್ಕತಾ ನಿವಾಸಿಗಳು. ನಿನ್ನೆ ತಾಯಿಯನ್ನು ಕೊಲೆ ಮಾಡಿ ಉಬರ್ ಮುಖಾಂತರ ಆಟೋ ಬುಕ್ ಮಾಡಿ ಠಾಣೆಗೆ ಬಂದು ಸೆನಾಲಿ ಶರಣಾಗಿದ್ದಾಳೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net