29ಕ್ಕೆ ಕರ್ನಾಟಕ ಬಂದ್; 2-4ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಿದ ಬೆಂಗಳೂರು ವಿವಿ

Untitled design - 2023-09-27T144009.271
Published on

ಬೆಂಗಳೂರು: ತಮಿಳುನಾಡು-ಕರ್ನಾಟಕ ಕಾವೇರಿ ಜಲ ವಿವಾದ ಈಗ ಮತ್ತಷ್ಟು ತೀವ್ರವಾಗಿದ್ದು, ವಿವಿಧ ಕನ್ನಡ ಪರ ಸಂಘಟನೆಗಳು ಸೆ. 26 ರಂದು ಬೆಂಗಳೂರು ಬಂದ್​ ನಡೆಸುವ ಮುಖೇನ ಹೋರಾಟ ಮಾಡಿತ್ತು.

ಇದೀಗ ಸೆ. 29 ರಂದು ಕಾವೇರಿ ನೀರಿಗಾಗಿ ರಾಜ್ಯವ್ಯಾಪಿ ಬಂದ್​ ಮಾಡಿ, ಬೃಹತ್​​ ಪ್ರತಿಭಟನೆ ನಡೆಸಲು ಮುಂದಾಗಿದೆ. ಸದ್ಯ ಈ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯ ಶುಕ್ರವಾರ ನಡೆಯಬೇಕಿದ್ದ 2-4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ.

29 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವ ಜತೆ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ರಾಜ್ಯ ಸಂಪೂರ್ಣವಾಗಿ ಬಂದ್​ ಆದ್ರೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ನಿಟ್ಟಿನಲ್ಲಿ ಇದೀಗ ಬೆಂಗಳೂರು ಯೂನಿವರ್ಸಿಟಿ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು 30ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net