ಬೆಂಗಳೂರಿನಲ್ಲಿ G20 ಶೃಂಗಸಭೆ; ಭದ್ರತೆ ಸಭೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್

Alok Kumar
Published on

ಬೆಂಗಳೂರು: ಡಿಸೆಂಬರ್​​ 11 ರಿಂದ 18ರ ವರೆಗೆ ದೇನಹಳ್ಳಿಯ ನಂದಿಬೆಟ್ಡದ, ಕೊಡಗುರ್ಕಿ ಬಳಿಯ ಜೆ.ಡಬ್ಯೂ ಮೆರಿಯಟ್ ಹೋಟೆಲ್​ನಲ್ಲಿ G20 ಶೃಂಗಸಭೆ ನಡೆಯಲಿದೆ. ಬೆಂಗಳೂರಿನಲ್ಲಿ G20 ಶೃಂಗಸಭೆ ಆಯೋಜನೆಗೊಂಡಿರುವುದರಿಂದ ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೋಟೆಲ್‌ ಸೆಕ್ಯೂರಿಟಿ, ಗಾಲ್ಪ್ ಕ್ಲಬ್ ನ ಜಿಎಂ, ಕಂದಾಯ ಅಧಿಕಾರಿಗಳ ಜತೆ ಸಭೆ‌ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್ ಯಾವಲ್ಲ ಭದ್ರತೆಗೆ ಕ್ರಮ ಕೈಗೊಳ್ಳಬೆಕೆಂಬ ಮಾಹಿತಿ ಪಡೆದರು. ಭಾರತವು ಜಿ-20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ನಂತರ ಎರಡು ಸಭೆಗಳು ಬೆಂಗಳೂರಿನಲ್ಲಿ ನಿಗದಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net