ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಳಕೆ ಹೆಚ್ಚಳ; 1 ಕೋಟಿ ಖಾಸಗಿ ವಾಹನಗಳು ಗಡಿ ದಾಟುವ ನಿರೀಕ್ಷೆ!

Bengaluru
Published on

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್​ ಇದ್ದರೂ ಖಾಸಗಿ ವಾಹನಗಳ ಬಳಕೆ ಹೆಚ್ಚಳವಾಗಿದ್ದು,  ದಸರಾ- ದೀಪಾವಳಿ ಹಬ್ಬದ ಖುತುವಿನ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಒಂದು ಕೋಟಿ ದಾಟುವ ನಿರೀಕ್ಷೆಯಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

BNG Traffic

ನಗರದಲ್ಲಿ ಪ್ರಸ್ತುತ 99.8 ಲಕ್ಷ ಸಾರಿಗೆಯೇತರ ನೋಂದಣಿ ವಾಹನಗಳಿವೆ. ಈ ವಾಹನಗಳು 75.6 ಲಕ್ಷ ದ್ವಿಚಕ್ರ ವಾಹನಗಳು ಮತ್ತು 23.1 ಲಕ್ಷ ಕಾರುಗಳನ್ನು ಒಳಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಪ್ರತಿದಿನ ಸರಾಸರಿ 1,300 ಹೊಸ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಮತ್ತು 409 ಕಾರುಗಳು ರಸ್ತೆಗಿಳಿಯುತ್ತವೆ.

traffic jam

ಹೆಚ್ಚುತ್ತಲೇ ಇದೆ ಖಾಸಗಿ ವಾಹನಗಳ ಸಂಖ್ಯೆ:  ಬೆಂಗಳೂರಿನಲ್ಲಿ 2012-13 ರಲ್ಲಿ ವಾಹನಗಳ ಸಂಖ್ಯೆ 55.2 ಲಕ್ಷ ಇತ್ತು. ಆದರೆ ಈಗ ಈ ವರ್ಷದ ಸೆಪ್ಟೆಂಬರ್ 30ರ ವರೆಗೆ 1.1 ಕೋಟಿಗೆ ದ್ವಿಗುಣಗೊಂಡಿದೆ. ಮೆಟ್ರೋ ಮತ್ತು BMTC ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ನಿರ್ವಾಹಕರು. ಮೆಟ್ರೋ 74 ಕಿಮೀ ಮಾರ್ಗವನ್ನು ಆವರಿಸಿದೆ. ಮತ್ತು ದಿನಕ್ಕೆ 7 ಲಕ್ಷ ಪ್ರಯಾಣಿಕರು ಮೆಟ್ರೋಗೆ ಅವಲಂಬಿಸಿದ್ದಾರೆ.

ಬಿಎಂಟಿಸಿಯಲ್ಲಿ ಪ್ರತಿದಿನ 43 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ.ಇನ್ನು ನಮ್ಮ ಮೆಟ್ರೋ ತನ್ನ ಸಂಚಾರ ಮಾರ್ಗವನ್ನು ಹೆಚ್ಚಿಸುತ್ತಿದೆ. ಜತೆಗೆ ಐಟಿ ಬಿಟಿ ಹಬ್​ಗಳೊಂದಿಗೂ ಕೈ ಜೋಡಿಸಿದೆ. ಇಷ್ಟೆಲ್ಲಾ ಆದರೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

2023-24ರಲ್ಲಿ ಹೊಸ ವಾಹನಗಳ ನೋಂದಣಿ ಮತ್ತು ಇತರ ಮೂಲಗಳಿಂದ ಈ ಹಣಕಾಸು ವರ್ಷದಲ್ಲಿ ಇಲಾಖೆಯು 5,226 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿಯಂತಹ ಹಲವು ವಿಧಗಳ ಸಾರಿಗೆ ವ್ಯವಸ್ಥೆ ಇದ್ದರೂ ಸಹ ಜನ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net