ಬೆಂಗಳೂರು: ವಿಮಾನವೇರಲು ವಿಳಂಬವಾಯ್ತು ಅಂತಾ ಬಾಂಬ್​ ಬೆದರಿಕೆ ಹಾಕಿ ರಂಪಾಟ ಮಾಡಿದ ಮಹಿಳೆ ಜೈಲುಪಾಲು!

Kerala Woman
Published on

ಬೆಂಗಳೂರು: ವಿಮಾನ ಹತ್ತಲು ವಿಳಂಬವಾಯ್ತು ಅಂತಾ ಬಾಂಬ್ ಬೆದರಿಕೆ ಹಾಕಿ, ರಂಪಾಟ ಮಾಡಿದ ಮಹಿಳೆಗೆ ದೇವನಹಳ್ಳಿಯ ಜೆಎಂಎಫ್ಸಿ ಕೋರ್ಟ್ ಫೆ. 17 ರವರೆಗೂ 11 ದಿನಗಳ‌ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ವಿಮಾನ ಹತ್ತಬೇಕು ಅನ್ನುವ ಭರದಲ್ಲಿ ಇದೀಗ ಮಹಿಳೆ ಜೈಲು ಪಾಲಾಗಿದ್ದಾಳೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆ.3ರಂದು ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಕೊಲ್ಕತ್ತಾಗೆ ತೆರಳಲು ಕೇರಳ ಮೂಲದ ಮಾನಸಿ ಎಂಬಾಕೆ ಆಗಮಿದ್ದಳು. 6E445 ಸಂಖ್ಯೆಯ ಇಂಡಿಗೂ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಮಾನಸಿ, ಬೋರ್ಡಿಂಗ್ ಗೇಟ್ ನಂಬರ್ 06 ರಲ್ಲಿ ಕುಳಿತಿದ್ದ‌ ವೇಳೆ ಕಿರಿಕ್ ಮಾಡಿದ್ದಾಳೆ.

ವಿಮಾನ ಹತ್ತಲು ವಿಳಂಬವಾಗುತ್ತಿದೆ ಅಂತಾ ಮೊದಲಿಗೆ ವಿಮಾನ ನಿಲ್ದಾಣದ ಭದ್ರತಾ ಪಡೆಯ ಮೇಲೆ ಕಿರಿಕ್ ಮಾಡಿದ್ದಾಳೆ. ಅಲ್ಲದೆ, ಹಲ್ಲೆ ಸಹ ನಡೆಸಿದ್ದಾಳೆ. ಬಳಿಕ ತನ್ನನ್ನು ಬೇಗ ಬಿಡಲಿಲ್ಲ ಅಂದರೆ, ವಿಮಾನದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ವಿಮಾನದಲ್ಲಿ ಬಾಂಬ್ ಇಟ್ಟಿದ್ದು ವಾಪಸ್ ಹೋಗುವಂತೆ ಸ್ಥಳದಲ್ಲಿದ್ದ ಪ್ರಯಾಣಿಕರಿಗೂ ಕಿರುಚಾಡಿ ರಂಪಾಟ ಮಾಡಿದ್ದಾಳೆ. ಹೀಗಾಗಿ ಆಕೆಯನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಮಹಿಳೆಯನ್ನ ವಶಕ್ಕೆ ಕೇಸ್ ದಾಖಲಿಸಿದ ವಿಮಾನ ನಿಲ್ದಾಣದ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ. ಆರೋಪಿ ಮಹಿಳೆಗೆ ಫೆ. 17 ರವರೆಗೂ 11 ದಿನಗಳ‌ ಕಾಲ ದೇವನಹಳ್ಳಿಯ ಜೆಎಂಎಫ್ಸಿ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net