

Bengaluru: ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿಧ್ಯಾರ್ಥಿಗಳು ತಮ್ಮ ಪ್ರತಿಭೆಗೆ, ಎಲ್ಲಾ ರೀತಿಯ ಸೌಲಭ್ಯ ಇರುವ ತರಗತಿಗಳು, ಖಾಸಗಿ ಶಾಲಾ ಬಜೆಟ್ ಅಗತ್ಯವಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದು, ರೊಬೊಟಿಕ್ಸ್ ಒಲಿಂಪಿಕ್ಸ್ ಎಂದು ಕರೆಯಲ್ಪಡುವ ಜಾಗತಿಕ ರೊಬೊಟಿಕ್ಸ್ ಸ್ಪರ್ಧೆಯಾದ FIRST ಗ್ಲೋಬಲ್ ಚಾಲೆಂಜ್ 2025 ರಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.
ಬಡತನ ಎನ್ನುವುದು ಕೇವಲ ನಮ್ಮ ಸ್ಥಿತಿಗೆ ಹೊರತು, ದೊಡ್ಡ ಕನಸ್ಸುಗಳಿಗಳಲ್ಲ ಎನ್ನುವುದನ್ನು ಬೆಂಗಳೂರಿನಲ್ಲಿ ಮನೆಕೆಲಸ, ಗಾರ್ಮೆಂಟ್ ಕೆಲಸ ಮಾಡಿಕೊಂಡಿರುವ ಪೋಷಕರ ಮಕ್ಕಳು ನಿರೂಪಿಸಿದ್ದಾರೆ. ಮಲ್ಲೇಶ್ವರಂನ 18ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಹತ್ತಿರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿರುವಾಗ ಕೋಡಿಂಗ್, ರೊಬೊಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಕರಗತ ಮಾಡಿಕೊಂಡಿದ್ದ ಇವರು, ಅಮೆರಿಕಾದಲ್ಲಿ ನಮ್ಮ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ:ಪಂಚಮುಖಿ ಹನುಮಂತನ ಚಿತ್ರವನ್ನು ಈ ದಿಕ್ಕಿನಲ್ಲಿ ಇಟ್ಟರೆ… ಮನೆಯಲ್ಲಿ ಶಾಂತಿ, ಸಮೃದ್ಧಿ ಗ್ಯಾರಂಟಿ! Vastu tips ಆಯ್ಕೆಯಾದ ವಿದ್ಯಾರ್ಥಿಗಳು - ನಿಂಗರಾಜ್ (11 ನೇ ತರಗತಿ), ಪರಶುರಾಮ್ ಎಂ (11 ನೇ ತರಗತಿ), ಅರ್ಜುನ್ ಕೆ ರಾಜ್ (11 ನೇ ತರಗತಿ), ಗೌರೀಶ್ ಕೆ (10 ನೇ ತರಗತಿ), ಮತ್ತು ಜಿ ಎನ್ ಚಂದನ್ ರಾಜ್ (9 ನೇ ತರಗತಿ) .
ಈ ಐದು ಮಕ್ಕಳ ಯಶೋಗಾಥೆ ತಮ್ಮ ಸರ್ಕಾರಿ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಪ್ರಾರಂಭವಾಯಿತು, ಶಾಲೆಯ ತರಗತಿಗಳು ಮುಗಿದ ನಂತರ ಆರಂಭವಾಗುತ್ತಿದ್ದ ಚಟುವಟಿಕೆಗಳು, ವಿದ್ಯಾರ್ಥಿಗಳಲ್ಲಿನ ಉತ್ಸಾಹದಿಂದ ದಿನೇ ದಿನೇ ಪೂರ್ಣ ಪ್ರಮಾಣದ ಕೆಲಸವಾಗಿ ಬದಲಾಯಿತು. ಇವರೆಲ್ಲಾ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್ ಸ್ಪೇಸ್ ಲ್ಯಾಬ್‌ಗೆ ತೆರಳಿದರು, ಅಲ್ಲಿ ಪ್ರಾಯೋಗಿಕ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಹೆಚ್ಚಿನ ಕೌಶಲ್ಯಗಳನ್ನು ಬೆಳಸಿಕೊಂಡರು. ಈಗ ಆರು ತಿಂಗಳ ಅವಧಿಯಲ್ಲಿ ರೋಬೋಟ್ವೊಂದನ್ನು ವಿನ್ಯಾಸಗೊಳಿಸಲಾಗಿದ್ದು, ಅದು ಅಂತಿಮ ಪರೀಕ್ಷೆಗೆ ಸಿದ್ಧವಾಗಿದೆ. ಈ ತಂಡ ಅಕ್ಟೋಬರ್ 29 ಮತ್ತು ನವೆಂಬರ್ 1 ವರೆಗೆ ನಡೆಯುವ ಸ್ಪರ್ಧೆಯಲ್ಲಿ ಸುಮಾರು 200 ಇತರ ದೇಶಗಳ ವಿರುದ್ಧ ಸೆಣೆಸಾಡಲು ಉತ್ತರ ಅಮೆರಿಕದ ಪನಾಮಕ್ಕೆ ಪ್ರಯಾಣಿಸಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಐವರ ತಂಡಕ್ಕೆ ಬೆಂಬಲ ನೀಡಿದ್ದು, ಅವರ ಪ್ರಯಾಣಕ್ಕೆ ಶುಭ ಹಾರೈಸಿದೆ. ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು, ಪನಾಮದಲ್ಲಿ ನಡೆಯುವ ಪ್ರತಿಷ್ಠಿತ FIRST ಗ್ಲೋಬಲ್ ಚಾಲೆಂಜ್ 2025 ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆಯ ನಮ್ಮ ಯುವ ನಾವೀನ್ಯಕಾರರ ಬಗ್ಗೆ ನನಗೆ ಅಪಾರ ಹೆಮ್ಮೆಯಾಗುತ್ತಿದ್ದು, ಸರ್ಕಾರಿ ತರಗತಿಯಿಂದ ಅಂತರರಾಷ್ಟ್ರೀಯ ರೊಬೊಟಿಕ್ಸ್ ಕ್ಷೇತ್ರಕ್ಕೆ ಅವರ ಗಮನಾರ್ಹ ಪ್ರಯಾಣವು ನಮ್ಮ ಶಾಲೆಗಳಲ್ಲಿ ಬೆಳೆಯುತ್ತಿರುವ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಈ ಪ್ರತಿಭಾನ್ವಿತ ಮನಸ್ಸುಗಳೊಂದಿಗಿನ ನನ್ನ ಸಂವಾದದ ಸಮಯದಲ್ಲಿ, ಅವರ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸಮರ್ಪಣೆ ಭಾವಕ್ಕೆ ನಾನು ಪ್ರಭಾವಿತನಾಗಿದ್ದೇನೆ, ಗುಣಮಟ್ಟದ ಶಿಕ್ಷಣ, ಅವಕಾಶಗಳೊಂದಿಗೆ ಸೇರಿಕೊಂಡಾಗ, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕೂಡ ವಿಶ್ವದ ವೇದಿಕೆಯಲ್ಲಿ ಸ್ಪರ್ಧಿಸಲು ಸಾಧ್ಯ ಎನ್ನುವುದಕ್ಕೆ ಈ ಯಶಸ್ಸು ತಾಜಾ ಉದಾಹರಣೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಮತ್ತು ಅವರ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಈ ಐದು ಜನ ವಿದ್ಯಾರ್ಥಿಗಳಿಗೆ, ಮುಂಬರುವ ಸವಾಲು ಸ್ಪರ್ಧೆಗಿಂತ ಹೆಚ್ಚಿನದಾಗಿದ್ದು, ಪ್ರತಿಭೆಯನ್ನು ಮಾರ್ಗದರ್ಶನದಿಂದ ಪೋಷಿಸಿದಾಗ, ಪ್ರತಿಯೊಂದು ಅಡೆತಡೆಗಳನ್ನು ಭೇದಿಸಬಹುದು ಎನ್ನುವುದನ್ನು ನಿರೂಪಿಸಲು ಇದು ಒಂದು ಅವಕಾಶ. ಕರ್ನಾಟಕದ ಸರ್ಕಾರಿ ಶಾಲೆಗಳು ನಾವೀನ್ಯತೆ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ ಎಂಬುದಕ್ಕೆ ಈ ಹುಡುಗರು ಜೀವಂತ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳು ನಿರ್ಮಿಸಿರುವ ರೋಬೋಟ್, ಕೇವಲ ಲೋಹ ಮತ್ತು ಕೋಡ್‌ನೊಂದಿಗೆ ತಯಾರಾಗಿಲ್ಲ, ಬದಲಾಗಿ ಭರವಸೆ, ತಂಡದ ಒಗ್ಗಟ್ಟಿಗೆ ಯಾವುದೇ ಮಿತಿ ಇಲ್ಲ ಎನ್ನುವುದನ್ನು ರುಜುವಾತು ಮಾಡಿದೆ.(ಏಜೆನ್ಸೀಸ್)