ಒಡಿಶಾ ಎಫ್ ಸಿ ಎದುರು ಸುಲಭ ಜಯ ದಾಖಲಿಸಿದ ಬಿಎಫ್ ಸಿ

bfc and odisha fc for web
Published on

ಬಂಬೊಲಿಮ್: ನಾಯಕ ಸುನೀಲ್ ಛೇಟ್ರಿ (38ನೇ ನಿಮಿಷ) ಹಾಗೂ ಕ್ಲೀಟೊನ್ ಸಿಲ್ವಾ (79ನೇ ನಿಮಿಷ) ಸಿಡಿಸಿದ ತಲಾ ಒಂದು ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡ ಐಎಸ್‌ಎಲ್‌ನಲ್ಲಿ ಸತತ 2ನೇ ಜಯ ದಾಖಲಿಸಿತು. ಜಿಎಂಸಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ ತಂಡ 2-1 ಗೋಲುಗಳಿಂದ ಒಡಿಶಾ ಎಫ್ ಸಿ ತಂಡವನ್ನು ಸೋಲಿಸಿತು. ಇದರೊಂದಿಗೆ 3ನೇ ಜಯ ದಾಖಲಿಸಿದ ಸುನೀಲ್ ಛೇಟ್ರಿ ಬಳಗ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಸತತ 6ನೇ ಪಂದ್ಯದಲ್ಲಿ ಅಜೇಯ ಸಾಧನೆ ಮಾಡಿತು.

ಪಂದ್ಯದ ಆರಂಭದಿಂದಲ್ಲೂ ಪ್ರಭುತ್ವ ಸಾಧಿಸಿದ ಬಿಎಫ್ ಸಿ, ಒಡಿಶಾ ತಂಡದ ಮೇಲೆ ಒತ್ತಡ ಹೇರಲು ಯಶಸ್ವಿಯಾಯಿತು. ಮೊದಲ ನಿಮಿಷದಲ್ಲೇ ಗೋಲುಗಳಿಸುವ ಅವಕಾಶವಿತ್ತಾದರೂ ಒಡಿಶಾ ಆಟಗಾರರು ಅಡ್ಡಿಯಾದರು. ಪಂದ್ಯದ 38ನೇ ನಿಮಿಷದಲ್ಲಿ ನಾಯಕ ಸುನೀಲ್ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರಿಂದ ಪಂದ್ಯದ ಮೊದಲಾರ್ಧದಲ್ಲಿ ಬಿಎಫ್ ಸಿ 1-0 ಯಿಂದ ಮುನ್ನಡೆ ಸಾಧಿಸಿದ್ದರು. ದ್ವಿತೀಯಾರ್ಧದಲ್ಲೂ ಬಿಎಫ್ ಸಿ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು. 71ನೇ ನಿಮಿಷದಲ್ಲಿ ಒಡಿಶಾ ತಂಡ ಟೇಲರ್ ಬಾರಿ ಬಿಎಫ್ ಸಿ ಆಘಾತ ನೀಡಿದರು. ಇದರಿಂದ ಪಂದ್ಯ ತಲಾ 1 ಗೋಲುಗಳಿಂದ ಸಮಬಲ ಸಾಧಿಸಿತು. ಬಳಿಕ ಕ್ಲೀಟೊನ್ ಸಿಲ್ವಾ ಮತ್ತೊಂದು ಗೋಲು ಗಳಿಸಿ ಬಿಎಫ್ ಸಿಗೆ ಮುನ್ನಡೆ ತಂದುಕೊಟ್ಟರು.

ಬಿಎಫ್ ಸಿ ಲೀಗ್‌ನಲ್ಲಿ ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ತಲಾ 3ರಲ್ಲಿ ಗೆಲುವು ಹಾಗೂ ಡ್ರಾ ಸಾಧಿಸಿತು. ಮತ್ತೊಂದೆಡೆ, ಒಡಿಶಾ ಎಫ್ ಸಿ ತಂಡ ಆಡಿರುವ 6 ಪಂದ್ಯಗಳಲ್ಲಿ 1 ಡ್ರಾ ಸಾಧಿಸಿ, 5 ಸೋಲು ಕಂಡಿದೆ.

ಬಿಎಫ್ ಸಿ ಮುಂದಿನ ಎದುರಾಳಿ: ಎಟಿಕೆ ಮೋಹನ್ ಬಾಗನ್, ಯಾವಾಗ: ಡಿಸೆಂಬರ್ 21 (ಸೋಮವಾರ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net