

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದ ಪ್ರಚಾರ ಮಾಡುತ್ತಿದ್ದವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಐದು ಮಂದಿ ಅಪರಿಚಿತರ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ. ಕಾರು ಹಾಗು ಬೈಕ್ಗಳಲ್ಲಿ ಬಂದು, ಹೆಡ್ ಬುಷ್ ಸಿನಿಮಾದ ಪೋಸ್ಟರ್ಗಳನ್ನು ಹಿಡಿದು, ಬೆಳಗ್ಗೆ 11 ಗಂಟೆ ಸುಮಾರಿಗೆ ರಸ್ತೆ ಮಧ್ಯೆ ಕಿರುಚಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಆರೋದಪ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಐದಕ್ಕಿಂತ ಹೆಚ್ಚು ಜನರ ತಂಡವನ್ನು ಕಟ್ಟಿಕೊಂಡು ಹೆಡ್ ಬುಷ್ ಚಿತ್ರದ ಬಗ್ಗೆ ಕೂಗಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ವಿಧಾನಸೌಧದ ಮೆಟ್ರೋ ಸ್ಟೇಷನ್ ಮುಂದೆ ವಾಹನಗಳು ಓಡಾಡಿದ್ದು, ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. (ದಿಗ್ವಿಜಯ ನ್ಯೂಸ್)