More

    ಗೂಂಡಾಗಳು ಭೂಮಿ ಕಬಳಿಸಿದ್ರು, ಬಾಡಿಗೆದಾರರ ಎಬ್ಬಿಸಲು ಕೋರ್ಟ್​ಗೆ ಅಲೆಯಬೇಕಾಯ್ತು: ಸಂಕಷ್ಟ ಹೇಳ್ಕೊಂಡ ಉದ್ಯಮಿ

    ಬೆಂಗಳೂರು: ಆಸ್ತಿ-ಮನೆ ಹೊಂದಿದ್ದಕ್ಕೆ ಏನೇನು ಕಷ್ಟ ಎದುರಿಸಬೇಕಾಯಿತು ಎಂದು ಉದ್ಯಮಿಯೊಬ್ಬರು ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ರಿಯಲ್​ ಎಸ್ಟೇಟ್​ ನಮ್ಮಂಥವರಿಗಲ್ಲ, ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದೇ ಲೇಸು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಬೆಂಗಳೂರು ಮೂಲದ ಕ್ಯಾಪಿಟಲ್​ಮೈಂಡ್ ಎಂಬ ಕಂಪನಿಯ ಸ್ಥಾಪಕ ಹಾಗೂ ಸಿಇಒ ಆಗಿರುವ ದೀಪಕ್ ಶೆಣೈ ಎಂಬವರು ಈ ಕುರಿತು ಹೇಳಿಕೊಂಡಿದ್ದಾರೆ. ಹಿರಿಯ ವ್ಯಕ್ತಿಯೊಬ್ಬರು ಬಾಡಿಗೆದಾರರಿಂದ ಫ್ಲ್ಯಾಟ್​ ವಾಪಸ್​ ಪಡೆಯಲು 4 ವರ್ಷ ಪರದಾಡಿದ ಕುರಿತು ಪತ್ರಿಕೆಯೊಂದರಲ್ಲಿ ಬಂದಿರುವ ಸುದ್ದಿಯನ್ನು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ದೀಪಕ್ ಶೆಣೈ ತನ್ನ ತಾಯಿಯೂ ಇಂಥದ್ದೇ ಸಮಸ್ಯೆ ಎದುರಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಎಂಟು ವರ್ಷದ ಈ ಬಾಲಕಿ ಟಿವಿ ನೋಡುವ ಸ್ಟೈಲೇ ವಿಚಿತ್ರ!; ವಿಡಿಯೋ ವೈರಲ್

    ನಾವೂ ಇಂಥದ್ದನ್ನು ಅನುಭವಿಸಿದ್ದೇವೆ. ಬಾಡಿಗೆಗೆ ಬಂದ ಮೊದಲ ತಿಂಗಳ ಬಳಿಕ ಬಾಡಿಗೆ ಕೊಡದೆ ಸತಾಯಿಸುತ್ತಿದ್ದವರನ್ನು ಮನೆಯಿಂದ ಎಬ್ಬಿಸಲು ನನ್ನ ಅಮ್ಮ ಎರಡು ವರ್ಷ ಕೋರ್ಟ್​ಗೆ ಅಲೆಯಬೇಕಾಯಿತು. ನಂತರ ಕೋರ್ಟ್ ಆದೇಶ ಬಂದ ಮೇಲೂ ಮನೆಯಿಂದ ಖಾಲಿ ಮಾಡಿಸಲು 3 ತಿಂಗಳು ಬೇಕಾಯಿತು ಎಂದು ದೀಪಕ್ ಶೆಣೈ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಆ ಬಳಿಕ ಅಮ್ಮ ತನ್ನ ಎಲ್ಲ ಆಸ್ತಿಗಳನ್ನು ಮಾರಿ ಈಗಿರುವ ಏಕೈಕ ಮನೆಯಲ್ಲಿ ವಾಸವಿದ್ದಾರೆ. ಅಲ್ಲದೆ ನಮ್ಮ ಒಂದು ಜಾಗವನ್ನು ಗೂಂಡಾಗಳು ಸ್ವಾಧೀನಪಡಿಸಿಕೊಂಡಿದ್ದನ್ನೂ ನೆನಪಿಸಿಕೊಂಡ ಶೆಣೈ, ರಿಯಲ್ ಎಸ್ಟೇಟ್​ ನಮ್ಮಂಥವರಿಗಲ್ಲ. ನಾವು ರಿಯಲ್​ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದರಿಂದ ಕಡಿಮೆ ತೊಂದರೆಯಲ್ಲಿ ಹೆಚ್ಚಿನ ಹಣ ಗಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts