More

    ಬಂಡಿ ಚಕ್ರ ಕಳಚಿ ಬಿದ್ದಿದ್ದರು ಸಹಯಾಕ್ಕೆ ಬರದ ಜನ; ಸಂಕಷ್ಟದಲ್ಲಿದ್ದ ರೈತನಿಗೆ ಎಎಸ್‌ಐ ಮಾಡಿದ್ದೇನು ನೋಡಿ…

    ನವದೆಹಲಿ: ರಸ್ತೆಯಲ್ಲಿ ಗಾಡಿ ಓಡಿಸುವಾಗ ತೊಂದರೆಗೆ ಸಿಲುಕಿದ್ದ ರೈತರನ್ನು ನೋಡಿದ ಎಎಸ್‌ಐ ಸಹಾಯ ಮಾಡಲು ಮುಂದಾದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ಎಎಸ್‌ಐ ಬಗ್ಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.

    ತಾಂಡೂರು ಪ್ರದೇಶದಲ್ಲಿ ರೈತರೊಬ್ಬರು ಜಮೀನಿನಲ್ಲಿ ಸರಕು ಸಾಗಿಸುತ್ತಿದ್ದಾರೆ. ಈ ವೇಳೆ ಬಂಡಿ ಚಕ್ರ ಕಳಚಿ ಬಿದ್ದಿದೆ.  ರೈತ ಮತ್ತು ಅವನೊಂದಿಗೆ ಮಹಿಳೆ  ಚಕ್ರವನ್ನು ಮತ್ತೆ ಗಾಡಿಗೆ  ಜೋಡಿಸಲು ಪ್ರಯತ್ನಿಸಿದರು ಆದರೆ ಅವರಿಗೆ ಸಾಧ್ಯವಾಗಲಿಲ್ಲ. ರಸ್ತೆಯಲ್ಲಿ ಸಾಗುತ್ತಿದ್ದವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರೂ ಯಾರೂ ಗಮನ ಹರಿಸಲಿಲ್ಲ. ಅದೇ ವೇಳೆ ಕಾರಿನಲ್ಲಿ ಹೋಗುತ್ತಿದ್ದ ತಾಂಡೂರು ಪಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್‌ಐ ಗೋಪಾಲ್‌ ರೈತರ ಸಂಕಷ್ಟವನ್ನು ಗಮನಿಸಿದರು. ಕೂಡಲೇ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿ ರೈತನ ಬಳಿ ಹೋದರು.

    ರೈತನ ಬಳಿ ಹೋದ ಎಎಸ್‌ಐ,  ಯಾವುದಾದರೂ ವಾಹನ ಡಿಕ್ಕಿಯಾಗಿ ಹೀಗಾಯಿತೇ ಎಂದು ರೈತನನ್ನು ಪ್ರಶ್ನಿಸಿದರು. ಅದ್ಯಾವುದೂ ಇಲ್ಲ ,ರಸ್ತೆಯಲ್ಲಿ ಸಹಾಯ ಕೇಳಿದರೂ ಯಾರೂ ಬರಲಿಲ್ಲ ಎಂದು ಹೇಳಿದರು. ಹಾಗಾಗಿ ಎಎಸ್ ಐ ಗೋಪಾಲ್ ರೈತನಿಗೆ ಸಹಾಯ ಮಾಡಿದರು. ಗಾಡಿಯನ್ನು ಮೇಲಕ್ಕೆತ್ತಿ ಚಕ್ರವನ್ನು ಸರಿಪಡಿಸಿದನರು. ಇದಕ್ಕೆ ರೈತ ಎಎಸ್‌ಐ ಧನ್ಯವಾದ ಅರ್ಪಿಸಿದರು.

    ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ರೈತನಿಗೆ ಸಹಾಯ ಮಾಡಿದ ಎಎಸ್‌ಐ ಅವರನ್ನು ಶ್ಲಾಘಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts