ಬಂಗಾಳಿ ಚಿತ್ರನಿರ್ದೇಶಕ, ಕವಿ ಬುದ್ಧದೇಬ್​ ದಾಸ್​ಗುಪ್ತ ನಿಧನ

dasgupta
Published on

ಕೊಲ್ಕತ : ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದ ಹಿರಿಯ ಬಂಗಾಳಿ ಚಿತ್ರನಿರ್ದೇಶಕ ಮತ್ತು ಖ್ಯಾತ ಕವಿ ಬುದ್ಧದೇಬ್ ದಾಸ್​ಗುಪ್ತ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

77 ವರ್ಷ ವಯಸ್ಸಾಗಿದ್ದ ದಾಸ್​​ಗುಪ್ತ ಸ್ವಲ್ಪಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್​ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕೊಲ್ಕತದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅವರು ನಿದ್ದೆಯಲ್ಲೇ ಸಹಜ ಸಾವು ಹೊಂದಿದ್ದಾರೆ.

ದಾಸ್​ಗುಪ್ತ ಅವರ ಐದು ಸಿನಿಮಾಗಳಿಗೆ ಅತ್ಯುತ್ತಮ ಚಲನಚಿತ್ರಕ್ಕಾಗಿ ನೀಡುವ ನ್ಯಾಷನಲ್ ಫಿಲಂ ಅವಾರ್ಡ್​ಗಳು ಲಭಿಸಿವೆ, ಎರಡು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಮೇ 2008 ರಲ್ಲಿ ಮ್ಯಾಡ್ರಿಡ್​ನಲ್ಲಿ ನಡೆದ ಸ್ಪೈನ್​ ಇಂಟರ್​ನ್ಯಾಷನಲ್​ ಫಿಲಂ ಫೆಸ್ಟಿವಲ್​ನಲ್ಲಿ ಅವರಿಗೆ ಲೈಫ್​​ಟೈಮ್​ ಅಚೀವ್​ಮೆಂಟ್​ ಅವಾರ್ಡ್​ ಲಭಿಸಿತ್ತು. ಬಾಗ್​ ಬಹದೂರ್​, ಲಾಲ್​ ದರ್ಜಾ, ಕಾಲ್​ಪುರುಷ್ ಮತ್ತು ಮಿಥುನ್​ ಚಕ್ರವರ್ತಿ ನಟಿಸಿದ ತಹದೆರ್​​ ಕಥಾ ಅವರು ನಿರ್ದೇಶಿಸಿದ ಜನಪ್ರಿಯ ಚಿತ್ರಗಳು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net