ಬೇಂದ್ರೆಯವರ ನಾಕುತಂತಿ ಷಷ್ಟ್ಯಬ್ದಿ ಸರಣಿ; ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜನೆ

bendre
Published on

ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆಯವರ ನಾಕುತಂತಿ ಕೃತಿಯ ಷಷ್ಟ್ಯಬ್ದಿ ಸರಣಿಯ ‘ನಾದ-6’ ಕಾರ್ಯಕ್ರಮವನ್ನು ಸುಬ್ರಮಣ್ಯಪುರದ ರಾಜಾ ಗಾರ್ಡೇನಿಯಾ ಲೇಔಟ್‌ನ ಭಾರದ್ವಾಜ ಸಭಾಂಗಣದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾದಂಬರಿಕಾರ ಡಾ.ಜಿ.ಬಿ.ಹರೀಶ್, ಬೇಂದ್ರೆಯವರ ಕಾವ್ಯದ ಆಳಕ್ಕಿಳಿದು ಅರ್ಥ ಮಾಡಿಕೊಳ್ಳಲಾಗದೆ, ಬೇಂದ್ರೆ ಕಾವ್ಯದಲ್ಲಿ ಏನೂ ಇಲ್ಲ ಎಂದು ಕೊಲ್ಲುವ ಪ್ರಯತ್ನ ಕನ್ನಡ ಸಾರಸ್ವತ ಲೋಕದಲ್ಲಿ ನಡೆದಿದ್ದು ಬೇಸರದ ಸಂಗತಿ ಎಂದರು.

ಬೇಂದ್ರೆಯವರು ಗ್ರಾಮೀಣ ಸೊಗಡಿನಿಂದ ವೇದಗಳವರೆಗೆ ಎಲ್ಲ ವಿಚಾರಗಳನ್ನೂ ತಮ್ಮ ಕಾವ್ಯಗಳಲ್ಲಿ ತಂದಿದ್ದಾರೆ. ಆದರೆ ಬೇಂದ್ರೆಯವರನ್ನು ವಿಮರ್ಶೆ ಮಾಡಿದ ಅನೇಕರು ಅವರ ಕಾವ್ಯದ ಆತ್ಮವನ್ನು ಪ್ರವೇಶಿಸಿಯೇ ಇಲ್ಲ. ಕವಿಯನ್ನು ಮೇಲ್ನೋಟಕ್ಕೆ ಅರ್ಥಮಾಡಿಕೊಂಡು ಮುಂದೆ ಹೋಗಿದ್ದಾರೆ. ಯಾವುದೇ ರಸಿಕ, ವಿಮರ್ಶಕರಿಗೆ ಕವಿಯ ದೃಷ್ಟಿ, ಕೃಪೆ ಸಿಕ್ಕರೆ ಮಾತ್ರ ಕಾವ್ಯ ಅರ್ಥವಾಗುತ್ತದೆ. ಇಲ್ಲದಿದ್ದರೆ ವಿಮರ್ಶೆಗಾಗಿ ವಿಮರ್ಶೆ ನಡೆಯುತ್ತದೆ ಎಂದು ಡಾ.ಹರೀಶ್ ವಿವರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಮಾರುತಿರಾಮ್ ಬೇಂದ್ರೆಯವರ ಕಾವ್ಯಗಾಯನ ಮಾಡಿದರು. ಅಭಾಸಾಪ ಬೆಂಗಳೂರು ಘಟಕದ ಅಧ್ಯಕ್ಷ ಎಂ.ಎಸ್.ನರಸಿಂಹಮೂರ್ತಿ, ಬೆಂಗಳೂರು ದಕ್ಷಿಣ ಅಧ್ಯಕ್ಷ ಡಾ. ಭಾನು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net