ಬೆನ್​ ಡಕೆಟ್​ ಭರ್ಜರಿ ಶತಕ! ವಿಕೆಟ್​ ಕಬಳಿಸಲು ಟೀಮ್​ ಇಂಡಿಯಾ ಬೌಲರ್​ಗಳ ಹೆಣಗಾಟ; ಗೆಲುವಿನತ್ತ ಇಂಗ್ಲೆಂಡ್​ | IND vs ENG

ವಿಜಯವಾಣಿ - 2025-06-24T194703.844
Published on

IND vs ENG Test: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ (ಜೂ.20) ಲೀಡ್ಸ್‌ನ ಹೆಡಿಂಗ್ಲಿನಲ್ಲಿ ಆರಂಭಗೊಂಡಿದ್ದು, ಇಂದು ಐದನೇ ಹಾಗೂ ಕೊನೆ ದಿನಕ್ಕೆ ಕಾಲಿಟ್ಟಿದೆ. ಆಂಗ್ಲರ ಎದುರು ಮೊದಲ ಟೆಸ್ಟ್​ ಗೆದ್ದು ಬೀಗಲು ಎದುರುನೋಡುತ್ತಿದ್ದ ಟೀಮ್ ಇಂಡಿಯಾಗೆ ಸದ್ಯ ಸೋಲು ಸನ್ನಿಹಿತವಾಗಿದೆ.

ಟೀಮ್ ಇಂಡಿಯಾ ನೀಡಿದ 371 ರನ್​ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಬೆನ್​ ಡಕೆಟ್​ ಸಿಡಿಸಿದ ಭರ್ಜರಿ ಶತಕ ಮೊದಲ ಟೆಸ್ಟ್​ ಗೆಲುವಿನ ಮುನ್ಸೂಚನೆಯನ್ನು ನೀಡಿದೆ. ಜ್ಯಾಕ್​ ಕ್ರಾಲಿ ಆಕರ್ಷಕ ಅರ್ಧ ಶತಕ (65 ರನ್​) ತಂಡಕ್ಕೆ ನೆರವಾದರೆ, ಡಕೆಟ್​ ಗೆಲುವಿನ ಪತಾಕೆ ಹಾರಿಸಲು ಕ್ರೀಸ್​ಗೆ ಅಂಟಿ ನಿಂತಿರುವುದು ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿದೆ.

ಒಂದೆಡೆ ಡಕೆಟ್​ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರೆ, ಅತ್ತ ವಿಕೆಟ್​ ಕಬಳಿಸಲು ಟೀಮ್ ಇಂಡಿಯಾ ವೇಗಿಗಳು ತೀರ ಹೆಣಗಾಡುತ್ತಿದ್ದಾರೆ. ತಂಡದ ಪರ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್​ ಪಡೆದಿದ್ದರೆ, ವಿಶ್ವದ ಬೆಸ್ಟ್​ ಬೌಲರ್​ ಎಂದೇ ಕರೆಸಿಕೊಳ್ಳುವ ಜಸ್ಪ್ರಿತ್​ ಬುಮ್ರಾ ಒಂದೇ ಒಂದು ವಿಕೆಟ್ ಪಡೆದಿಲ್ಲ. ಇದು ತಂಡದ ಮೇಲಿನ ಗೆಲುವಿನ ನಿರೀಕ್ಷೆಗಳನ್ನು ಕೊಂಚ ಕುಸಿಯುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net