ಯುವಕರಿಂದ ನಾಟಕ ಪ್ರದರ್ಶಿಸಲು ಚಿಂತನೆ ನಡೆದಿದೆ ಎಂದ ಅಕಾಡೆಮಿ ಸದಸ್ಯ ಕಪಗಲ್ಲು ಪ್ರಭುದೇವ

13022022 Bellari youth drama
Published on

ಬಳ್ಳಾರಿ: ಪೌರಾಣಿಕ ನಾಟಕಗಳ ಇತಿಹಾಸ ತಿಳಿಸಲು ರಂಗತೋರಣದಿಂದ ಯುವಕರಿಂದ ನಾಟಕ ಪ್ರದರ್ಶನ ನಡೆಸಲು ಚಿಂತನೆ ಮಾಡುತ್ತಿದ್ದು, ಆಸಕ್ತಿಯುಳ್ಳವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕಪಗಲ್ಲು ಪ್ರಭುದೇವ ಹೇಳಿದರು.

ನಗರದ ರಾಘವ ಕಲಾ ಮಂದಿರದಲ್ಲಿ ಅಲಾಪ್ ಸಂಗೀತ ಕಲಾ ಟ್ರಸ್ಟ್ ಮತ್ತು ರಮೇಶ್ ಗೌಡ ಪಾಟೀಲ್ ಕಲಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ರಕ್ತರಾತ್ರಿ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತರಾತ್ರಿ ನಾಟಕ ಮತ್ತು ಹೇಮರೆಡ್ಡಿ ಮಲ್ಲಮ್ಮ ಈ ಭಾಗದಲ್ಲಿ ಹೆಚ್ಚು ಪ್ರಸಿದ್ಧ ನಾಟಕಗಳು ಎಂದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ ರಂಗಣ್ಣನವರ್ ಮಾತನಾಡಿ, ಎರಡು ಟ್ರಸ್ಟ್‌ಗಳ ಕಾರ್ಯ ಪ್ರಶಂಸಿನೀಯ. ಸಂಸ್ಕೃತಿ ಕಾರ್ಯಕ್ರಮಗಳಿಗೆ ರಾಘವ ಮೆಮೋರಿಯಲ್ ಅಸೋಷಿಯೇಶನ್ ಸಹಕಾರ ನೀಡುತ್ತಿರುವುದು ಸಂತೋಷ ಸಂಗತಿ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ರಾಘವ ಕಲಾ ಮಂದಿರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ರಾಘವ ಮೆಮೋರಿಯಲ್ ಅಸೋಷಿಯೇಶನ್ ಗೌರವಾಧ್ಯಕ್ಷ ಕೆ.ಚನ್ನಪ್ಪ, ಮಾಜಿ ಮೇಯರ್ ಕೆ.ಬಸವರಾಜ, ಶಿವ ಟ್ರೇಡರ್ಸ್ ಮಾಲೀಕ ಕೆ.ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net