

ಬೇಸರ ಮೂಡಿಸಿದ ನಡೆ ಜಿಲ್ಲೆಯಲ್ಲಿ ಕೈಗಾರಿಕೆ, ಕೃಷಿ, ವೈದ್ಯಕೀಯ, ವಿಜ್ಞಾನ, ಶಿಕ್ಷಣ, ಮಾರುಕಟ್ಟೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ನಿರೀಕ್ಷಿಸಿದ್ದ ಯೋಜನೆಗಳು ಘೋಷಣೆಯಾಗಿಲ್ಲ. ಸರ್ಕಾರದ ನಡೆ ಬೇಸರ ಮೂಡಿಸಿದೆ. | ಯಶವಂತರಾಜ್ ನಾಗಿರೆಡ್ಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ, ಬಳ್ಳಾರಿಆಸ್ಪತ್ರೆಗಳ ಉನ್ನತೀಕರಣ ಸ್ವಾಗತಮೊದಲ ಬಾರಿಗೆ ಬಜೆಟ್ ನಾಲ್ಕು ಲಕ್ಷ ಕೋಟಿ ರೂ. ದಾಟಿದ್ದು ಸಂತಸದ ವಿಷಯ. ಬಹುತೇಕ ಎಲ್ಲ ಕ್ಷೇತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಸಿಎಂ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಒಂಬತ್ತು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು 150 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮತ್ತು ಇತರ ಏಳು ಕೇಂದ್ರಗಳಲ್ಲಿ 100 ಹಾಸಿಗೆಗಳಿಗೆ ಆಸ್ಪತ್ರೆಗಳ ಉನ್ನತೀಕರಣ ಕ್ರಮ ಸ್ವಾಗತಿಸುತ್ತೇನೆ.| ಸಿರಿಗೇರಿ ಪನ್ನರಾಜ್, ಲೆಕ್ಕಪರಿಶೋಧಕ, ಬಳ್ಳಾರಿಕೃಷಿ ಮೊತ್ತ ಹೆಚ್ಚಿಸಬೇಕಿತ್ತುಕೃಷಿಗೆ ನೀಡಿದ ಅನುದಾನದ ಮೊತ್ತ ಹೆಚ್ಚಳವಾಗಬೇಕು. ಪ್ರತ್ಯೇಕವಾಗಿ ನೀರಾವರಿಗೆ 10 ಸಾವಿರ ಕೋಟಿ ರೂಪಾಯಿ ಮೀಸಲಿರಿಸಬೇಕಿತ್ತು. ಚಿಲ್ಲಿ ಬೀಜ ಉಚಿತವಾಗಿ ವಿತರಿಸುವ ಜತೆಗೆ ಬೆಂಬಲ ಬೆಲೆ ಘೋಷಣೆ ಪ್ರಸ್ತಾಪವಾಗಬೇಕಿತ್ತು. ಎಲ್ಲ ಕ್ಷೇತ್ರಗಳಿಗೆ ನೀಡಿದ ಆದ್ಯತೆಯಷ್ಟೇ ಕೃಷಿಗೆ ನೀಡಿದ್ದು ಸರಿಯಲ್ಲ. ಕೃಷಿಕರಾದ ಸಿಎಂ ಸಿದ್ದರಾಮಯ್ಯ ಕೃಷಿಗೆ ವಿಶೇಷ ಹೆಚ್ಚಿನ ಅನುದಾನ ಮೀಸಲಿಡಬೇಕಿತ್ತು.| ಕೊಟ್ಟೂರು ರಮೇಶ, ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ, ಕಂಪ್ಲಿಹೋರಾಟ ಅನಿವಾರ್ಯಆಶಾ ಕಾರ್ಯಕರ್ತೆಯರಿಗೆ ಬಜೆಟ್ ನಿರಾಶೆಗೊಳಿಸಿದೆ. ಕನಿಷ್ಠ ವೇತನ ಮಾಸಿಕ 15ಸಾವಿರ ರೂ., ಗ್ರಾಚ್ಯುಟಿ, ವಾಹನ ಸೌಲಭ್ಯ, ಕಾರ್ಯಕರ್ತರೆಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ರಜಿಸ್ಟರ್, ಮೊಬೈಲ್, ಟ್ಯಾಬ್ ಸರ್ಕಾರವೇ ವಿತರಿಸಬೇಕು. ಬೇರೆ ಆನ್‌ಲೈನ್ ಸೇವೆಗಳ ಕೆಲಸ ಹಚ್ಚಬಾರದು. ಈ ಎಲ್ಲ ಕನಿಷ್ಠ ಹಾಗೂ ಅಗತ್ಯ ಸೌಕರ್ಯಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ.| ಜೆ.ಮಹಾಲಕ್ಷ್ಮೀ, ಎಐಯುಟಿಯುಸಿ ಸಂಯೋಜಿತ ಆಶಾ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷೆ, ಕಂಪ್ಲಿ.ಕಾರ್ಯನಿರ್ವಹಿಸಲು ಅನುಕೂಲಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅತಿಥಿ ಶಿಕ್ಷಕರ ಮಾಸಿಕ ಗೌರವಧನವನ್ನು ಎರಡು ಸಾವಿರ ರೂ. ಹೆಚ್ಚಿಸಲಾಗಿದೆ. ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಲು ಇದು ಅನುಕೂಲವಾಗಲಿದೆ.| ಎಚ್.ರುದ್ರವೇಣಿ, ಶಿಕ್ಷಕಿ, ಸಿರಗುಪ್ಪಮೂಲ ಸಮಸ್ಯೆಗಳ ಕಡೆಗಣನೆಬಜೆಟ್‌ನಲ್ಲಿ ಸರ್ವರಿಗೂ ಸಮಪಾಲಾಗಿ ಹಣ ಹೊಂದಿಸಲಾಗಿದೆ. ಗ್ರಾಮೀಣ, ಪಟ್ಟಣ ಪಂಚಾಯಿತಿ, ನಗರ ಪ್ರದೇಶಗಳ ಮೂಲ ಸಮಸ್ಯೆಗಳಿಗೆ ಒತ್ತು ನೀಡಬೇಕಾಗಿತ್ತು. ಇದು ಬಿಟ್ಟರೆ ಉಳಿದ ಎಲ್ಲ ಕ್ಷೇತ್ರಗಳಿಗೆ ಸಮನಾಗಿ ಹಂಚಿದ್ದಾರೆ.| ಬಿಂದು, ವಿದ್ಯಾರ್ಥಿನಿ, ಸಿರಿಗೇರಿಕ-ಕ ಭಾಗಕ್ಕಿಲ್ಲ ಪ್ರಯೋಜನಬಜೆಟ್‌ನಲ್ಲಿ ಆರ್ಥಿಕ ಸುಧಾರಣೆ, ಸಬಲೀಕರಣದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ಬಜೆಟ್ ಆಗಿದೆ. ಕೆಕೆಆರ್‌ಡಿಬಿಗೆ ಕೊಟ್ಟಿರುವ ಐದು ಸಾವಿರ ಕೋಟಿ ರೂ. ಮೂಗಿಗೆ ತುಪ್ಪ ಸವರಿದಂತೆ ಆಗಿದೆ. ಕಳೆದ ವರ್ಷ ಮೀಸಲಿಟ್ಟ ಹಣ ಖರ್ಚಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಿರಾಶಾದಾಯಕವಾಗಿದೆ.| ಮಾಬು ಸಾಬ್ ಕರಂಗಿ, ಗ್ರಾಮಸ್ಥ, ಹೂವಿನಹಡಗಲಿದಿನಬಳಕೆ ಸಾಮಗ್ರಿ ಬೆಲೆ ಇಳಿಸಬೇಕಿತ್ತುಸಿಎಂ ಸಿದ್ದರಾಮಯ್ಯ ಬಜೆಟ್ ಮೂಲಕ ಮಧ್ಯಮ ವರ್ಗಗಳ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಪಡಿತರ ಸಾಮಾಗ್ರಿಗಳ ದರ ಇಳಿಸುವ ಬಗ್ಗೆ ಚಿಂತನೆ ಇಲ್ಲ. ದಿನಬಳಕೆ ಸಾಮಗ್ರಿಗಳ ಬೆಲೆ ಕಡಿಮೆ ಮಾಡಬೇಕಿತ್ತು. ದುಡಿಯುವ ವರ್ಗಕ್ಕೆ ಕಿರು ಸಾಲ ನೀಡಿಕೆ ಮಾಡಿದ್ದರೆ ಒಳಿತಾಗುತ್ತಿತ್ತು.| ಎಚ್.ರಮೇಶ್, ಕಾರ್ಮಿಕ, ಕೂಡ್ಲಿಗಿವಿಜಯನಗರ ನಿರ್ಲಕ್ಷೃಬಜೆಟ್‌ನಲ್ಲಿ 4 ಸಾವಿರ ಕೋಟಿ ರೂ. ಬೆಂಗಳೂರಿಗೆ ಅಭಿವೃದ್ಧಿಗೆ ಹೋಗಿದೆ. ಆದರೆ, ಜಿಲ್ಲಾವಾರು ನೋಡಿದರೆ ನಿರೀಕ್ಷೆ ಹುಸಿಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹಲವು ಅವಕಾಶಗಳಿವೆ. ಆದರೂ, ಸರ್ಕಾರ ನಿರ್ಲಕ್ಷ್ಯ ತೋರಿದೆ. ಈ ಭಾಗದ ಜನರ ಆಶಯಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ.| ಅಶ್ವಿನ್ ಕೊತಂಬರಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ, ವಿಜಯನಗರಆಶ್ವಾಸನೆಗಳಿಗೆ ಸೀಮಿತಕೆಲವರಿಗೆ ಗೌರವ ಧನ ಅಲ್ಪ ಮಟ್ಟಿಗೆ ಏರಿಸಿರುವುದು ಬಿಟ್ಟರೆ, ಯಾವ ನಿರೀಕ್ಷೆಯೂ ಸಫಲವಾಗಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಯಾವ ಕೊಡುಗೆಯೂ ನೀಡದ ರಾಜ್ಯ ಸರ್ಕಾರ, ಯುವಜನರ ಉದ್ಯೋಗದ ಮಾತನಾಡಿಲ್ಲ. ಹೆಸರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ವಸತಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವ ಯೋಜನೆ ಪ್ರಕಟಿಸಿಲ್ಲ. ಒಟ್ಟಾರೆಯಾಗಿ ಕೇವಲ ಆಶ್ವಾಸನೆ ತುಂಬಿದ ಅಭಿವೃದ್ಧಿ ಇಲ್ಲದ ಬಜೆಟ್ ಇದಾಗಿದೆ.| ಈಡಿಗರ ಮಂಜುನಾಥ, ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಜಯನಗರರೈತರಿಗೆ ಅನ್ಯಾಯರಾಜ್ಯ ಬಜೆಟ್ ರೈತರಿಗೆ ಚಂಬು ನೀಡಿದೆ. ಸಬ್ಸಿಡಿ ಮೂಲಕ ಸಾಲ ನೀಡಿದರೆ, ರೈತರ ಅಭಿವೃದ್ಧಿ ಸಾಧ್ಯವಿಲ್ಲ. ರೈತರು ದೇಶದ ಬೆನ್ನೆಲುಬು ಎನ್ನುತ್ತಾ ರೈತರ ಬೆನ್ನು ಮುರಿಯುವ ಕೆಲಸ ಮಾಡಲಾಗುತ್ತಿದೆ. ನಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ರೈತರಿಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸಲಿ. ವಿಜಯನಗರದಲ್ಲಿ ಸಕ್ಕರೆ ಕಾರ್ಖಾನೆ ಆರಂಭ ಸೇರಿದಂತೆ ಈ ಭಾಗದ ಬೇಡಿಕೆ ಈಡೇರಿಸುವ ಘೋಷಣೆ ಮಾಡದೆ ರೈತರಿಗೆ ಅನ್ಯಾಯ ಮಾಡಲಾಗಿದೆ.| ನಾಗರಾಜ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ, ವಿಜಯನಗರಕೃಷಿಕರಿಗೆ ಪ್ರಯೋಜನವಿಲ್ಲದ ಬಜೆಟ್ರೈತರು, ಕೃಷಿ ಕೂಲಿಕಾರ್ಮಿಕರ ಆತ್ಮಹತ್ಯೆ, ವಲಸೆ, ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಬಜೆಟ್ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಸ್.ಶಿವಶಂಕರ್ ಟೀಕಿಸಿದ್ದಾರೆ.ಬಗರ್‌ಹುಕುಂ, ಅರಣ್ಯ ಸಾಗುವಳಿ, ಗೇಣಿ ರೈತರ ಕಲ್ಯಾಣ ಮತ್ತು ಅವರ ಹಕ್ಕುಪತ್ರ ನೀಡುವುದನ್ನು ನಿರ್ಲಕ್ಷಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಖಾತ್ರಿ, ಕೇರಳ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿ ಪ್ರಸ್ತಾಪವಾಗಿಲ್ಲ. ಶಿಕ್ಷಣ, ಆರೋಗ್ಯ, ಕೃಷಿ ಮಾರುಕಟ್ಟೆ, ವಸತಿ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವವನ್ನು ಬಜೆಟ್ ಪ್ರೋತ್ಸಾಹಿಸುತ್ತಿರುವುದರಿಂದ ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆ ಏರಿಕೆಗೆ ಕಾರಣವಾಗಲಿದೆ. ಎಪಿಎಂಸಿ ಮಾರುಕಟ್ಟೆಗಳನ್ನು ಬಪಡಿಸುವ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲದಿದ್ದರಿಂದ ಕೃಷಿಕರಿಗೆ ಪ್ರಯೋಜನವಿಲ್ಲದ ಬಜೆಟ್ ಆಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.| ವಿ.ಎಸ್.ಶಿವಶಂಕರ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷಸಾಲದ ಪ್ರಮಾಣ ದುಪ್ಪಟ್ಟುಬೆಳೆಗಳಿಗೆ ದರ ಹೆಚ್ಚಳ ಮಾಡದೆ, ರೈತರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಬಡವರಿಗೆ ಸಂಬಂಧಿಸಿದ ದರವನ್ನು ಹೆಚ್ಚಿಸಿರುವುದು ಬಿಟ್ಟರೆ ಬೇರೆ ಸಾಧನೆ ಏನೂ ಇಲ್ಲ. ಮುಂದಿನ ದಿನಗಳಲ್ಲಿ ಗ್ಯಾರಂಟಿಗಳಿಂದಲೇ ರಾಜ್ಯವು ದಿವಾಳಿ ಹಂತಕ್ಕೆ ತಲುಪಿ ಸರ್ಕಾರದ ವಿರುದ್ದ ರಾಜ್ಯದ ಜನತೆ ಮುಗಿ ಬೀಳುವ ಕಾಲ ದೂರವಿಲ್ಲ, ಕಳೆದ ವರ್ಷಕ್ಕಿಂತ ಈ ಬಾರಿ ಸರ್ಕಾರ ಪಡೆದಿರುವ ಸಾಲ ದುಪ್ಪಟ್ಟು ಆಗಿದೆ.| ಗಿರೀಶ್ ಬಾವಿಕಟ್ಟಿ, ಕೃಷಿಕ, ಹರಪನಹಳ್ಳಿಕಲಾವಿದರಿಗೆ ನಿರಾಸೆವೃತ್ತಿ ನಾಟಕ ಕಂಪನಿಗಳು ಬೆಳೆಯಲು ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಿಸಬಹುದು ಎಂಬ ನಿರೀಕ್ಷಿಸಲಾಗಿತ್ತು. ಅದು ಹುಸಿಯಾಗಿದೆ. ಸರ್ಕಾರ ಸಿನಿಮಾಗಳಿಗೆ ನೀಡುವ ಮಹತ್ವ ವೃತ್ತಿ ನಾಟಕಗಳಿಗೆ ನೀಡದಿರುವುದು ಸಾಬೀತಾಗಿದೆ. ಇದರಿಂದ ನಾಟಕ ಕಂಪನಿಗಳ ಮಾಲೀಕರು ಹಾಗೂ ಕಲಾವಿದರಿಗೆ ನಿರಾಸೆ ಮೂಡಿದೆ.| ಚಿಂದೋಡಿ ಶ್ರೀಕಂಠೇಶ, ಕೆ.ಬಿ.ಆರ್ ಡ್ರಾಮಾ ಕಂಪನಿ ಮಾಲೀಕ, ಕೊಟ್ಟೂರು.