ಗಣಿನಾಡಲ್ಲಿ ಪವರ್ ಸ್ಟಾರ್ ಹವಾ! - ಯುವರತ್ನ ಪ್ರಮೋಷನ್‌ಗೆ ಬಂದ ಪುನೀತ್ ರಾಜ್‌ಕುಮಾರ್

Punit Bellary Visit
ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದಲ್ಲಿ ನಟ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಗಳು ಸೋಮವಾರ ಕ್ರೇನ್ ಮೂಲಕ ಹೂವಿನ ಹಾರ ಹಾಕಿ ಸಂಭ್ರಮಿಸಿದರು.
Published on

ಬಳ್ಳಾರಿ: ಯುವರತ್ನ ಸಿನಿಮಾ ಪ್ರಮೋಷನ್‌ಗಾಗಿ ಗಣಿನಗರಿಗೆ ಸೋಮವಾರ ಆಗಮಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಗರದ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರುಶನ ಪಡೆದರು. ನಿರ್ದೇಶಕ ಸಂತೋಷ ಆನಂದ, ನಟ ಧನಂಜಯ ಸೇರಿದಂತೆ ಇತರರು ಸಾಥ್ ನೀಡಿದರು. ಇದೇ ವೇಳೆ ಕ್ರೇನ್ ಮೂಲಕ ಅಭಿಮಾನಿಗಳು ಪುನೀತ್‌ಗೆ ಬೃಹತ್ ಆಕಾರದ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಅಲ್ಲದೆ ಎರಡು ಜೆಸಿಬಿಗಳ ಮೂಲಕ ಅಭಿಮಾನಿಗಳು ಪುನೀತ್‌ಗೆ ಹೂವಿನ ಮಳೆಗೈದರು.

ನೆಚ್ಚಿನ ನಟನನ್ನು ನೋಡಲು ನೂರಾರು ಅಭಿವಾನಿಗಳು ಮುಗಿಬೀಳುತ್ತಿದ್ದರು. ಈ ವೇಳೆ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು. ಬ್ಯಾರಿಕೇಡ್ ಲೆಕ್ಕಿಸದೇ ಅಭಿಮಾನಿಗಳು ನುಗ್ಗಿದ ಪರಿಣಾಮ ದೇವಸ್ಥಾನದಲ್ಲಿ ಭಕ್ತರು ಸಾಲಾಗಿ ಹೊಗಲು ಹಾಕಿದ್ದ ಪರ್ಮನೆಂಟ್ ಬ್ಯಾರಿಕೇಡ್ ಮುರಿದವು.

ನಂತರ ವಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಮನೆಗೆ ತೆರಳಿದ ಪುನೀತ್, ಅಲ್ಲಿ ಉಪಾಹಾರ ಸವಿದರು. ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಏರ್ಪಟಿತ್ತು. ಅಭಿವಾನಿಗಳನ್ನು ನಿಯಂತ್ರಣ ವಾಡಲು ಪೊಲೀಸರ ಹರಸಹಾಸ ಪಟ್ಟರು.

ಬಳಿಕ ಎನ್‌ಎಸ್‌ಆರ್ ಗಾರ್ಡ್‌ನಗೆ ತೆರಳಿ ಮಾತನಾಡಿದ ಪುನೀತ್, ಯುವರತ್ನ ಚಿತ್ರವು ಏ.1ರಂದು ರಿಲೀಸ್ ಆಗಲಿದೆ. ಈಗಾಗಲೇ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಳ್ಳಾರಿಯ ಜನರು ನನ್ನ ತಂದೆ ಕಾಲದಿಂದಲೂ ನಮ್ಮ ಕುಟುಂಬವನ್ನು ಬಹಳ ಪ್ರೀತಿ ವಾಡುತ್ತಾ ಬಂದಿದ್ದಾರೆ. ಇಲ್ಲಿ ಅಪ್ಪಾಜಿ ಹೆಸರಲ್ಲಿ ಪಾರ್ಕ್ ಕೂಡಾ ಇದೆ. ಅರಸು ಮತ್ತು ಪವರ್ ಆಡಿಯೋವನ್ನು ಬಳ್ಳಾರಿಯಲ್ಲಿ ರಿಲೀಸ್ ವಾಡಿದ್ವಿ. ಹಲವಾರು ಚಿತ್ರಗಳು ಬಳ್ಳಾರಿಯಲ್ಲಿ ಶೂಟಿಂಗ್ ನಡೆದಿದೆ. ಯುವರತ್ನ ಸಿನಿಮಾ ಕೂಡ ಬಳ್ಳಾರಿಯಲ್ಲಿ ಸಕ್ಸಸ್ ಕಾಣುವ ವಿಶ್ವಾಸವಿದೆ. ಅಭಿಮಾನಿಗಳು, ಜನರು ಸರ್ಕಾರದ ನಿಮಯ ಪಾಲಿಸಿ ಚಿತ್ರಮಂದಿರಕ್ಕೆ ಬಂದು ಸಿನಿವಾ ನೋಡಿ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net