ಇಂದಿನಿಂದ ಬಳ್ಳಾರಿ ಹಾಫ್ ಲಾಕ್ ಡೌನ್: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಘೋಷಣೆ

Bellary DC SP Press Meet 23 MAR 20
Published on

ಬಳ್ಳಾರಿ: ಕರೊನಾ ಮುಂಜಾಗ್ರತಾ ಕ್ರಮವಾಗಿ ಮಾ.24ರಂದು ಬೆಳಗ್ಗೆ 6ಗಂಟೆಯಿಂದ ಮಾ.31ರ ವರಗೆ ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ನಾನಾ ನಿರ್ಬಂಧಗಳ ಹೇರಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

ಅವಶ್ಯಕ ಸೇವೆಗಳನ್ನು ಹೊರತುಪಡಿಸಿದಂತೆ ಎಲ್ಲವು ಕ್ಲೋಸ್ ಆಗಲಿವೆ.ಪುಡ್, ರೇಷನ್, ಹಾಲು, ತರಕಾರಿ, ಮಾಂಸದಂಗಡಿ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಬಂದಾಗಲಿವೆ ಎಂದು ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸಿ ಹಾಗೂ ಅಂತರ್ ರಾಜ್ಯ ಸಾರಿಗೆ ಬಸ್ ಬಂದ್ ಮಾಡಲಾಗುವುದು.ಹೊರಗಿಂದ ಬರುವವರ ನಿಯಂತ್ರಣಕ್ಕಾಗಿ ಪ್ರೈವೈಟ್ ಹೊರತಾಗಿ ಈಶಾನ್ಯ ಸಾರಿಗೆ ಸಂಚಾರವನ್ನು ನಿಷೇಧಿಸಲಾಗಿದೆ.

ಸರ್ಕಾರಿ ಕಚೇರಿಗಳು, ಎಪಿಎಂಸಿ, ಇಂದಿರಾ ಕ್ಯಾಂಟಿನ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅಂಗಡಿ- ಮುಂಗಟ್ಟುಗಳನ್ನು ಮುಚ್ಚಲಾಗುವುದು.

ಅಲ್ಲದೆ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಸಾಧ್ಯವಾದಲ್ಲಿ ಶಿಫ್ಟ್ ಮೂಲಕ ಕೆಲಸ ನೀಡುವಂತೆ ಕಾರ್ಖಾನೆ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ.ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಕೆಲಸದಿಂದ ವಿನಾಯಿತಿ ನೀಡುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಗಿದೆ ಎಂದರು.

ನಮ್ಮಲ್ಲಿ ಇದುವರೆಗೂ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಸಹಾಯಕರಿಗೆ ನೆರವಾಗುವ ನಿಟ್ಟಿನಲ್ಲಿ ಎನ್ ಜಿ ಒ ಗಳ ಸಹಯೋಗದಲ್ಲಿ ೧೭ ತಂಡಗಳನ್ನು ರಚಿಸಲಾಗಿದೆ.ಈ ತಂಡ ಅಸಕ್ತರು, ವೃದ್ಧರಿಗೆ ನೆರವಾಗುವ ಕಾರ್ಯ ಮಾಡಲಿವೆ ಎಂದರು.

ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರಡ್ಡಿ, ಎಸ್ಪಿ ಸಿ.ಕೆ.ಬಾಬಾ ಇದ್ದರು.

ಜಿಲ್ಲಾಡಳಿತ ನಿರ್ಧಾರ ಯಾರು ಉಲ್ಲಂಘಿಸಬಾರದು.ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷ್ಯೀಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು.ಇದುವರೆಗೂ 400 ಜನರನ್ನು ಜಿಲ್ಲೆಗೆ ಹೊರಗಡೆ ಬಂದವರೆಂದು ಗುರುತಿಸಲಾಗಿದ್ದು, ಅವರ ಮೇಲೆ ನಿಗಾಯಿಡಲಾಗಿದೆ. ಒಟ್ಟು ೧೪ಚೆಕ್ ಪೋಸ್ಟ್ ಹಾಕಲಾಗಿದೆ. ಅಂತಾರಾಜ್ಯ ಪೋಸ್ಟ್ ಕೂಡ ಹಾಕಲಾಗುವುದು.ಇದರೆಲ್ಲರ ಜತೆಗೆ ನಮ್ಮ‌ ಕಾರ್ಯಕ್ಕೆ ಜನರ ಸಹಕಾರ ಅತ್ಯಗತ್ಯ.

ಸಿ.ಕೆ.ಬಾಬಾ ಎಸ್ಪಿ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net