

ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾ ಪರಿಸ್ಥಿತಿ ಆತಂಕಕಾರಿ ಪರಿಸ್ಥಿತಿ ತಲುಪಿದೆ. ಸೋಂಕಿಗೆ ಭಾನುವಾರ ಒಂದೇ ದಿನ ನಾಲ್ಕು ಜನ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ 60 ವರ್ಷದ ಪುರುಷ, ಬಳ್ಳಾರಿ ತಾಲೂಕು ರೂಪನಗುಡಿಯ 65 ವರ್ಷದ ಪುರುಷ, ಬಳ್ಳಾರಿಯ ಕೋಟೆ ಪ್ರದೇಶದ 63 ವರ್ಷದ ಮಹಿಳೆ, ರಾಜೇಶ್ವರಿ ನಗರದ 58 ವರ್ಷದ ಪುರುಷ ಮೃತಪಟ್ಟಿದ್ದಾರೆ. ಮೃತರು ಜ್ವರ, ಕೆಮ್ಮು, ಎದೆ ನೋವು, ಉಸಿರಾಟ ತೊಂದರೆ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರು.