

ಹರಾರೆ: ಪ್ರವಾಸಿ ಭಾರತ ವಿರುದ್ಧ ಜುಲೈ 6ರಿಂದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಆತಿಥೇಯ ಜಿಂಬಾಬ್ವೆ ತಂಡ ಪ್ರಕಟಗೊಂಡಿದ್ದು, ಬೆಲ್ಜಿಯಂ ಮೂಲದ ಕ್ರಿಕೆಟಿಗ ಅಂತುಮ್ ನಖ್ವಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. 25 ವರ್ಷದ ಅಂತುಮ್ ವರ್ಷಾರಂಭದಲ್ಲಿ ದೇಶೀಯ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿದ್ದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಜಿಂಬಾಬ್ವೆ ಬ್ಯಾಟರ್ ಎನಿಸಿದ್ದರು.
ಪಾಕಿಸ್ತಾನ ಮೂಲದ ದಂಪತಿಗೆ ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ಜನಿಸಿರುವ ಅಂತುಮ್, 4ನೇ ವಯಸ್ಸಿನಲ್ಲಿ ಆಸ್ಟ್ರೆಲಿಯಾಕ್ಕೆ ವಲಸೆ ಹೋಗಿದ್ದರು. ವೃತ್ತಿಯಲ್ಲಿ ಪೈಲಟ್ ಆಗಿದ್ದ ಅಂತುಮ್, ಕ್ರಿಕೆಟ್ಗಾಗಿ ಅದಕ್ಕೆ ಅಲ್ಪವಿರಾಮ ನೀಡಿದ್ದಾರೆ. ಪೌರತ್ವ ಗೊಂದಲದಿಂದಾಗಿ ಜಿಂಬಾಬ್ವೆ ಪರ ಆಡುವುದಕ್ಕೆ ಅವರಿಗೆ ಇನ್ನೂ ಅಂತಿಮ ಅನುಮತಿ ಲಭಿಸಿಲ್ಲ ಎನ್ನಲಾಗಿದೆ.
ಜಿಂಬಾಬ್ವೆ ತಂಡ: ಸಿಕಂದರ್ ರಾಜಾ (ನಾಯಕ), ರಾಜ್ ಅಕ್ರಮ್, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನ್ನೋಸೆಂಟ್ ಕೈಯಾ, ಕ್ಲೆವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್ಟನ್ ಮಸಕಜ, ಬ್ರೆಂಡನ್ ಮಾವುಟಾ, ಬ್ಲೆಸ್ಸಿಂಗ್ ಮುಜರಬಾನಿ, ಡಿಯೋನ್ ಮೈಯರ್ಸ್, ಅಂತುಮ್ ನಖ್ವಿ, ರಿಚರ್ಡ್ ನಾಗರವ, ಮಿಲ್ಟನ್ ಶುಂಬಾ.