ಬ್ಯೂಟಿ ಪಾರ್ಲರ್ ಮರೆತುಬಿಡಿ! ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಿಸಲು ಇಲ್ಲಿವೆ ಸುಲಭ ಕ್ರಮಗಳು..Glowing Skin

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Glowing Skin : ಮುಖದ ಅಂದವನ್ನು ಕಾಪಾಡಿಕೊಳ್ಳಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ತ್ವಚೆಯನ್ನು ಕಾಯ್ದುಕೊಳ್ಳಲು ಹರಸಾಹಸ ಪಡುತ್ತಾರೆ. ಇದಕ್ಕಾಗಿ ಅನೇಕರು ಪಾರ್ಲರ್​ಗಳ ಮೊರೆ ಹೋದರೆ, ಇನ್ನೂ ಕೆಲವರು ಚಿಕಿತ್ಸೆಗಳಿಗೆ ಮೊರೆ ಹೋಗುತ್ತಾರೆ. ಈ ರೀತಿಯಾಗಿ ಮಾಡಿದರೂ ಕೂಡಾ ಯಾವುದೇ ರೀತಿಯಲ್ಲು ಸೌಂದರ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಆದರಿಂದ ನೀವೇನಾದರೂ, ಅಂದವಾದ ಮುಖವನ್ನು ಹೊಂದಬೇಕೆಂದರೆ, ಈ ರೀತಿಯ ಫೇಸ್​ ಪ್ಯಾಕ್​ಗಳನ್ನು ಬಳಸುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು.

ಅರಿಶಿನ ಮತ್ತು ಕಡಲೆಕಾಯಿ ಪುಡಿ

ಅರಿಶಿನವು ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದು ಮುಖಕ್ಕೆ ತಕ್ಷಣದ ಹೊಳಪನ್ನು ನೀಡುತ್ತದೆ. ಹಾಗಾಗಿ ಒಂದು ಚಿಟಿಕೆ ಅರಿಶಿಣ ಪುಡಿಗೆ ಸ್ವಲ್ಪ ರೋಸ್​ ವಾಟರ್​ ಮಿಕ್ಸ್​ ಮಾಡಿ ನಂತರ ಮುಖಕ್ಕೆ ಹಚ್ಚಿರಿ. 20 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ತೊಳೆಯುವುದರಿಂದ ಇದು ತ್ವಚೆಯನ್ನು ಕಾಪಾಡುತ್ತದೆ.

ಜೇನುತುಪ್ಪ ಮತ್ತು ನಿಂಬೆ

ಜೇನುತುಪ್ಪದ ಪ್ಯಾಕ್​ ಮುಖದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಾಗಿ 1 ಟೀ ಚಮಚ ಜೇನುತುಪ್ಪಕ್ಕೆ 1/2 ಟೀ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ಇದು ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ತ್ವರಿತ ಹೊಳಪನ್ನು ನೀಡುತ್ತದೆ.

ಅಲೋವೆರಾ ಮತ್ತು ವಿಟಮಿನ್ ಇ

ಅಲೋವೆರಾವನ್ನು ಸೌಂದರ್ಯ ವರ್ಧಕದ ರಾಜ ಎಂದೇ ಕರೆಯಲಾಗುತ್ತದೆ. ವಿಟಮಿನ್​ ಇ ಕ್ಯಾಪ್ಸುಲ್ ಅನ್ನು ತಾಜಾ ಅಲೋವೆರಾ ಜೆಲ್​ನೊಂದಿಗೆ ಬೆರೆಸಿ. ನಂತರ, ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ತೊಳೆಯುವುದರಿಂದ ಇದು ಚರ್ಮವನ್ನು ಮೃದುಗೊಳಿಸಿ, ಕಾಂತಿಯನ್ನು ನೀಡುತ್ತದೆ.

ಮೊಸರು ಮತ್ತು ಕಾಫಿ

ಮೊಸರು ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಹಾಗಾಗಿ ಅರ್ಧ ಟೀ ಚಮಚ ಕಾಫಿ ಪುಡಿಗೆ ಒಂದು ಚಮಚ ಮೊಸರು ಹಾಕಿ ಮಿಶ್ರಣ ಮಾಡಿ ಹಚ್ಚಿ ತಣ್ಣೀರಿನಿಂದ ತೊಳೆಯುವುದರಿಂದ ಇದು ಚರ್ಮಕ್ಕೆ ಹೊಳಪನ್ನು ನೀಡುವುದರ ಜೊತೆಗೆ ಮೃದುತ್ವವನ್ನು ಕಾಪಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net