ಸರಳ ಜೀವನಶೈಲಿಯಲ್ಲೇ 34 ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ! ಈಕೆಯ ಫಿಟ್​ನೆಸ್​ ರಹಸ್ಯವಾದ್ರೂ ಏನು? Weight Loss

Photo instagram ನಿಂದ ತೆಗೆದುಕೊಳ್ಳಲಾಗಿದೆ.
Photo instagram ನಿಂದ ತೆಗೆದುಕೊಳ್ಳಲಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಎಲ್ಲರಿಗೂ ಸುಲಭವೇನಲ್ಲ, ಹಲವಾರು ಜನರು ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಾರೆ
  • ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದಿದ್ದರೆ, ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟ
  • ಆರೋಗ್ಯಕರ ತೂಕ ಇಳಿಸುವ ಪ್ರಯಾಣದ ಮೊದಲ ಹೆಜ್ಜೆ ಕೆಲವು ಜೀವನಶೈಲಿಯ ಬದಲಾವಣೆ
Weight Loss: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಎಲ್ಲರಿಗೂ ಸುಲಭವೇನಲ್ಲ. ಹಲವಾರು ಜನರು ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಾರೆ. ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದಿದ್ದರೆ, ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಆರೋಗ್ಯಕರ ತೂಕ ಇಳಿಸುವ ಪ್ರಯಾಣದ ಮೊದಲ ಹೆಜ್ಜೆ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡುವುದು. ನೀವೇನಾದರೂ ತೂಕ ಇಳಿಸಿಕೊಳ್ಳಲು ಬಯಸಿದರೆ, ಸರಳ ಜೀವನಶೈಲಿಯಲ್ಲಿ ಅಭ್ಯಾಸದಲ್ಲಿಯೇ 34 ಕೆಜಿ ತೂಕ ಇಳಿಸಿಕೊಂಡ ಪೌಷ್ಟಿಕತಜ್ಞ ಎರಿನ್ ಗಿರೌರಾಡ್ ಅವರಿಂದ ಸೂಚನೆಗಳನ್ನು ಪಡೆಯಿರಿ.
ಸರಿಯಾದ ವಿಧಾನ, ಪ್ರೇರಣೆ ಮತ್ತು ಮಾರ್ಗದರ್ಶನದೊಂದಿಗೆ, ಆಕಾರ ಪಡೆಯುವುದು ಸಂಪೂರ್ಣವಾಗಿ ಸಾಧಿಸಬಹುದಾದದ್ದು ಎಂದು ಅವರ ತೂಕ ಇಳಿಸುವ ಪ್ರಯಾಣ ತೋರಿಸುತ್ತದೆ. ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತೂಕ ಇಳಿಸಿಕೊಳ್ಳುವುದರ ಕುರಿತು ಪೋಸ್ಟ್​ ಹಂಚಿಕೊಂಡಿದ್ದಾರೆ. ಇದು ನೀವು ಸವಾಲನ್ನು ತಡವಾಗಿ ತಲುಪಿದರೂ ನಿಮ್ಮ ಜೀವನಶೈಲಿಯ ಕೆಲವು ಬದಲಾವಣೆಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು 10 ಸಲಹೆಗಳು

1.ಕ್ಯಾಲೋರಿ ಕೊರತೆ

ನೀವು ದಿನಕ್ಕೆ 1100–1200 ಕ್ಯಾಲೋರಿಗಳಿಗೆ ನಿಮ್ಮನ್ನು ಸೀಮಿತಗೊಳಿಸಿಕೊಳ್ಳಬೇಡಿ. ಇದು ನಿಮಗೆ ಹಸಿವನ್ನುಂಟು ಮಾಡುತ್ತದೆ. ಬದಲಾಗಿ, ನೀವು ಕ್ರಮೇಣ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಸಣ್ಣ ಕ್ಯಾಲೋರಿಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ನಿಮ್ಮನ್ನು ಶಕ್ತಿ ಪಡೆಯಲು ಸಹಾಯ ಮಾಡುತ್ತದೆ.

2.ತಿನ್ನುವುದನ್ನು ಟ್ರ್ಯಾಕ್ ಮಾಡಿ 

ನಿಮ್ಮ ತೂಕವನ್ನು ಪ್ರತಿನಿತ್ಯ ಅಳತೆ ಮಾಡುತ್ತೀರಿ. ಹಾಗೆಯೇ ನಿಮ್ಮ ಊಟದ ವಿವರಗಳನ್ನು ದಾಖಲಿಸುತ್ತಿರಿ. ಆಹಾರ ಟ್ರ್ಯಾಕಿಂಗ್ ನಿಮ್ಮ ಕ್ಯಾಲೋರಿ ಕೊರತೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಇದು ನಿಮ್ಮ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

3.ಆಹಾರದಲ್ಲಿ ಪ್ರೋಟೀನ್ ಸೇವಿಸಿ

ಪ್ರೋಟೀನ್-ಭರಿತ ಆಹಾರವು ನಿಮ್ಮನ್ನು ಹೆಚ್ಚು ಸಮಯದವರೆಗೆ ಹಸಿವಾಗದಂತೆ ತಡೆಯುತ್ತದೆ. ಇದು ಸ್ನಾಯುಗಳ ಬೆಳವಣಿಗೆಯನ್ನು ಉತ್ತೇಜಿಸಿ, ಚಯಾಪಚಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿನಿತ್ಯ  120 ಗ್ರಾಂ ಪ್ರೋಟೀನ್ ಸೇವಿಸುವ ಮೂಲಕ ನಿಮ್ಮ ದಿನವನ್ನು ಆರಂಭಿಸಿ.

4.ಸರಿಯಾದ ನಿದ್ರೆ ಪಡೆಯಿರಿ

ಪ್ರತಿದಿನ 7-8 ಗಂಟೆಗಳ ತಾಸು ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಹಸಿವಿನ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ನಿದ್ರೆಯ ಮಾದರಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

5.ಒತ್ತಡ ಕಡಿಮೆ ಮಾಡಿ

ಮೂಲಭೂತ ಒತ್ತಡ ನಿರ್ವಹಣಾ ಅಭ್ಯಾಸಗಳಲ್ಲಿ ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು, ಸ್ಟ್ರೆಚ್ಚಿಂಗ್​ ಈ ರೀತಿಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.

6.ಊಟವನ್ನು ಬಿಡಬೇಡಿ

ನಿಮ್ಮ ಊಟದ ಯೋಜನೆಯಿಂದ ದೂರ ಸರಿಯುವುದು ಅಥವಾ ಕಡಿಮೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಇದು ನಿಮ್ಮ ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕೆ ಅಡ್ಡಿ ಉಂಟಾಗುತ್ತದೆ. ಹಾಗಾಗಿ ಪ್ರತಿನಿತ್ಯ 3 ಊಟಗಳನ್ನು ಸಂಪೂರ್ಣವಾಗಿ ಸೇವಿಸಿರಿ.

7.ವಾರಕ್ಕೆ 5 ಬಾರಿ ವ್ಯಾಯಾಮ ಮಾಡಿ

ನಿಯಮಿತ ವ್ಯಾಯಾಮವು ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮೂರು ಶಕ್ತಿ-ತರಬೇತಿ ಅವಧಿಗಳನ್ನು ಅನುಸರಿಸಿ ಎರಡು HIIT ವ್ಯಾಯಾಮಗಳನ್ನು ಗುರಿಯಾಗಿಸಿಕೊಳ್ಳಿ. ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

8.ನಡಿಗೆ

ಬಹು ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಪ್ರತಿದಿನ 7,000–10,000 ಹೆಜ್ಜೆಗಳನ್ನು ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಹಾಗೆಯೇ ನಿದ್ರೆಗೆ ಮುನ್ನ ಜೀರ್ಣಕ್ರಿಯೆಯನ್ನು ಹೆಚ್ಚಿಸಿಕೊಳ್ಳಲು ಊಟದ ನಂತರ 30 ನಿಮಿಷಗಳ ಕಾಲ ನಡೆಯಿರಿ.

9.ಫೈಬರ್ ಸೇರಿಸಿ

ಪ್ರತಿದಿನ 25 ಗ್ರಾಂ ಫೈಬರ್ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ. ಇದು ಆರಂಭದಲ್ಲಿ ಸವಾಲಿನ ಸಂಗತಿಯಾಗಿ ಅನಿಸುವುದರಿಂದ, ಬೆಳಿಗ್ಗೆ ಹೆಚ್ಚು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಫೈಬರ್ ನಿಮಗೆ ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಇರಲು ಸಹಾಯ ಮಾಡಿ, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹಾಗೆಯೇ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ.

10.ಹೈಡ್ರೇಟೆಡ್ ಆಗಿರಿ

ಪ್ರತಿನಿತ್ಯ ನಿಯಮಿತವಾಗಿ ನೀರನ್ನು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಅಂದರೆ ಕನಿಷ್ಟ 3- 4 ಲೀಟರ್​ ನೀರು ಕುಡಿಯಿರಿ. ಇದು ನಿಮ್ಮ ದೇಹವನ್ನು ಹೈಡ್ರೇಟ್​ ಆಗಿಡಲು ಸಹಾಯ ಮಾಡುತ್ತದೆ. ಹಾಗೆಯೇ ಹಸಿವಿನಿಂದ ಬಳಲುವುದನ್ನು ನಿಲ್ಲಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net