Hair Oil : ಫೆಬ್ರವರಿಯಿಂದಲೇ ಸೂರ್ಯನ ಶಾಖ ನೆತ್ತಿಯನ್ನು ಸುಡುವಂತೆ ಮಾಡುತ್ತಿದೆ. ಬಿಸಲಿನಲ್ಲಿ ಚರ್ಮ, ಕೂದಲು ಇಡೀ ದೇಹವನ್ನೇ ಆರೋಗ್ಯಕರವಾಗಿ ನೋಡಿಕೊಳ್ಳೋದು ಅವಶ್ಯಕ. ಅದರಲ್ಲೂ, ಹೆಣ್ಣು ಮಕ್ಕಳು ಹೆಚ್ಚು ಒತ್ತು ಕೊಡೋದು ಕೂದಲಿಗೆ. ಹೀಗಾಗಿ ಅವುಗಳ ಪೋಷಣೆ ಅಗತ್ಯ. ಕೂದಲನ್ನು ಪೋಷಿಸಿಕೊಳ್ಳಲು ರೀಲ್ಸ್, ಯೂಟ್ಯೂಬ್ನಲ್ಲಿ ಕಾಣುವ ಎಲ್ಲ ಟಿಪ್ಸ್ ಪಡೆದುಕೊಂಡು ಇನ್ನಷ್ಟು ಕೂದಲು ಹಾಳು ಮಾಡಿಕೊಂಡು ಬಿಡುತ್ತಾರೆ. ಆದರೆ, ಈ ಬೇಸಿಗೆಯಲ್ಲಿ ತಜ್ಱ ವೈದ್ಯರ ಸಲಹೆ ಮೇರೆಗೆ ರೋಸ್ಮರಿ, ಭೃಂಗರಾಜ ಸೇರಿದಂತೆ ಯಾವ ಎಣ್ಣೆ ಬಳಕೆ ಒಳ್ಳೆಯದು ಯಾವುದು ಬೇಡ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.