ಪಾಲಕ್ ಸೊಪ್ಪು ವಿಟಮಿನ್ A, C, E ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇವು ಚರ್ಮದ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳ ಹಾನಿಯಿಂದ ರಕ್ಷಿಸುತ್ತವೆ. ವಿಟಮಿನ್ C ಕಾಲಜನ್ ಉತ್ಪಾದನೆ ಹೆಚ್ಚಿಸಿ ಚರ್ಮವನ್ನು ಗಟ್ಟಿಯಾಗಿಟ್ಟು, ಸುಕ್ಕಾಗದಂತೆ ತಡೆಯುತ್ತದೆ. ವಿಟಮಿನ್ A ಚರ್ಮದ ಮೇಲ್ಮೈ ನವೀಕರಣಕ್ಕೆ ಸಹಾಯ ಮಾಡುತ್ತದೆ. ಕಬ್ಬಿಣ ಮತ್ತು ಫೋಲೇಟ್ ರಕ್ತ ಸಂಚಾರ ಸುಧಾರಿಸಿ ಚರ್ಮಕ್ಕೆ ಪೋಷಣೆ ನೀಡುತ್ತವೆ. ನಿಯಮಿತ ಸೇವನೆಯಿಂದ ಚರ್ಮ ಹೊಳಪು, ಮೊಡವೆ ಕಡಿಮೆಯಾಗಿ ಆರೋಗ್ಯವಂತವಾಗಿರುತ್ತದೆ (ಏಜೆನ್ಸೀಸ್).