ಹೊಳೆಯುವ ಚರ್ಮಕ್ಕೆ ಎಣ್ಣೆಯೇ ಬೇಕಿಲ್ಲ! ಇಲ್ಲಿದೆ ಜಿಡ್ಡು ರಹಿತ ಕಾಂತಿಯ ಗುಟ್ಟು.. Glowing skin

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹೊಳೆಯುವ ಚರ್ಮ ಬೇಕೆಂದು ಹಲವಾರು ಜನರು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ
  • ಇವೆಲ್ಲಾ ಉತ್ಪನ್ನಗಳು ಕ್ಷಣಿಕವಾದರೂ, ಈ ವಸ್ತುಗಳ ಮೇಲೆ ಅವಲಂಬಿತರಾಗಿರುತ್ತಾರೆ
  • ಸೆಲೆಬ್ರಿಟಿಗಳ ಸುಂದವಾದ ಚರ್ಮ ಮತ್ತು ಅವರ ದೇಹವನ್ನು ಅನೇಕರು ಬಯಸುವುದನ್ನು ನಾವು ನೋಡಿದ್ದೇವೆ
  • ಹೊಳಪು ಎಂಬುದು ಕೇವಲ ಪದವಲ್ಲ. ಬದಲಾಗಿ, ಅದು ಒಂದು ವೈದ್ಯಕೀಯ ಅವಲೋಕನವಾಗಿದೆ
Glowing skin: ಹೊಳೆಯುವ ಚರ್ಮ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದಕ್ಕಾಗಿ ಹಲವಾರು ಜನರು ಅನೇಕ ರೀತಿಯ ಉತ್ಪನ್ನಗಳಿಗೆ ಮೊರೆ ಹೋಗುತ್ತಾರೆ. ಇವೆಲ್ಲಾ ಉತ್ಪನ್ನಗಳು ಕ್ಷಣಿಕವಾದರೂ, ಈ ವಸ್ತುಗಳ ಮೇಲೆ ಅವಲಂಬಿತರಾಗಿರುತ್ತಾರೆ. ಆದಾಗ್ಯೂ, ನಿಜವಾದ ಚರ್ಮದ ಹೊಳಪು ಎಂದರೆ ಚರ್ಮವು ಆರೋಗ್ಯಕರವಾಗಿ, ನಯವಾಗಿ ಮತ್ತು ಒಳಗಿನಿಂದ ನೈಸರ್ಗಿಕವಾಗಿ ಕಾಂತಿಯುತವಾಗಿ ಕಾಣುವುದಾಗಿದೆ ಎಂದು ಕೆಲವೊಂದು ಬ್ಯೂಟಿ ತಜ್ಞರು ವಿವರಿಸುತ್ತಾರೆ.
ಸೆಲೆಬ್ರಿಟಿಗಳ ಸುಂದವಾದ ಚರ್ಮ ಮತ್ತು ಅವರ ದೇಹವನ್ನು ಅನೇಕರು ಬಯಸುವುದನ್ನು ನಾವು ನೋಡಿದ್ದೇವೆ. ಜೊತೆಗೆ ಅವರಂತೆಯೇ ಆಗಬೇಕೆಂದು ಬಯಸುತ್ತಾರೆ. ಆದರೆ, ಹೊಳೆಯುವ ಚರ್ಮವೆಂದರೆ ಏನೆಂದು ಇನ್ಫ್ಲುಯೆನ್ಸ್ ಕ್ಲಿನಿಕ್‌ನ ಸಂಸ್ಥಾಪಕಿ ಡಾ. ಗೀತಿಕಾ ಶ್ರೀವಾಸ್ತವ ತಿಳಿಸಿದ್ದಾರೆ.
ವೈದ್ಯರು ಹೇಳುವಂತೆ ಹೊಳಪು ಎಂಬುದು ಕೇವಲ ಪದವಲ್ಲ. ಬದಲಾಗಿ, ಅದು ಒಂದು ವೈದ್ಯಕೀಯ ಅವಲೋಕನವಾಗಿದೆ. ಚರ್ಮವು ನಯವಾದ ಮತ್ತು ಸಮವಾಗಿ ಪ್ರತಿಫಲಿಸುತ್ತದೆ. ಇದು ಚರ್ಮದಿಂದ ಬೆಳಕು ಏಕರೂಪವಾಗಿ ಪ್ರತಿಫಲಿಸಿದಾಗ ಕಾಂತಿಯುತವಾಗಿ ಭಾಸವಾಗುತ್ತದೆ.
ಚರ್ಮವು ಈ ಮೂರು ಗುಣಗಳಿಂದ ತನ್ನ ತ್ವಚೆಯನ್ನು ಪಡೆದುಕೊಳ್ಳುತ್ತದೆ. ಅದರಲ್ಲಿ ನಯವಾದ ವಿನ್ಯಾಸ, ಸಮ ಚರ್ಮದ ಬಣ್ಣ ಮತ್ತು ಸಮತೋಲಿತ ಬೆಳಕಿನ ಪ್ರತಿಫಲನ ಆಗಿದೆ. ಚರ್ಮವು ಚೆನ್ನಾಗಿ ಹೈಡ್ರೀಕರಿಸಲ್ಪಟ್ಟಾಗ ಉರಿಯೂತವನ್ನು ನಿಯಂತ್ರಿಸಿ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ನೀವೇನಾದರೂ, ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಿದ್ದರೆ ಈ ರೀತಿಯ ಬದಲಾವಣೆಗಳು ಮುಖ್ಯವಾಗಿರುತ್ತದೆ.

ಜೀವನಶೈಲಿಯ ಬದಲಾವಣೆಗಳು

ಚರ್ಮದ ನೈಸರ್ಗಿಕ ಹೊಳಪು ಕಡಿಮೆಯಾಗಲು ಉರಿಯೂತ ಕೂಡಾ ಒಂದಾಗಿದೆ. ಇದು ಕಳಪೆ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುವ ಊತವಾಗಿದೆ. ಆದಾಗ್ಯೂ, ಸಕ್ಕರೆ, ಡೈರಿ ಉತ್ಪನ್ನಗಳು ಮತ್ತು ಗ್ಲುಟನ್ ಹೊಂದಿರುವ ಆಹಾರಗಳನ್ನು ಅತಿಯಾಗಿ ಸೇವಿಸಿದಾಗ ಅದು ಚರ್ಮದ ಮೇಲೆ ಕಪ್ಪು ಕಲೆಗಳು ಮತ್ತು ವಯಸ್ಸಾದ ಚಿಹ್ನೆಗಳಿಗೆ ಕಾರಣವಾಗುತ್ತದೆ. ಆದರಿಂದ ಪ್ರತಿನಿತ್ಯ ನೀವು ಸಕ್ಕರೆ ಪದಾರ್ಥಗಳ ಸೇವನೆ ಹೆಚ್ಚಿಸುತ್ತಿದ್ದರೆ, ಅದನ್ನು ಕಡಿಮೆ ಮಾಡಿ. ಅದರ ಬದಲಿಗೆ ಬಾದಾಮಿ ಹಾಲು ಅಥವಾ ಓಟ್ ಹಾಲು ಬಳಸಿರಿ. ಇದು ಚರ್ಮದ ತ್ವಚೆಯನ್ನು ಸರಿ ಪಡಿಸಲು ಸಹಾಯ ಮಾಡುತ್ತದೆ.

ಸರಿಯಾದ ಜಲಸಂಚಯನ

ಕುಡಿಯುವ ನೀರು ದೇಹಕ್ಕೆ ಅಗತ್ಯವಾಗಿದ್ದರೂ, ಕೆಲವು ರೀತಿಯ ಪಾನೀಯಗಳು ಹೆಚ್ಚು ಪ್ರಯೋಜನಕಾರಿ ಎಂದು ನಂಬಲಾಗಿದೆ. ಪ್ರತಿನಿತ್ಯ ಮೆಂತ್ಯೆ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹಾಗೆಯೇ ನೀವೇನಾದರೂ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕೇಸರಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.
ಮೆಂತ್ಯ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೇಸರಿ ನೀರನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಇಲಾಂಜಿರ್ ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮಾಯಿಶ್ಚರೈಸಿಂಗ್ ಮಾಡಿ

ಒಳಗಿನ ರಕ್ಷಣೆಗಿಂತಲೂ ಬಾಹ್ಯ ಮಾಯಿಶ್ಚರೈಸಿಂಗ್​ ಕೂಡಾ ಬಹಳ ಮುಖ್ಯವಾಗಿದೆ. ಅದಕ್ಕಾಗಿ ಸೆರಾಮೈಡ್‌ಗಳು, ಪೆಪ್ಟೈಡ್‌ಗಳು ಮತ್ತು ಹೈಲುರಾನಿಕ್ ಆಮ್ಲವನ್ನು ಹೊಂದಿರುವ ಮಾಯಿಶ್ಚರೈಸರ್‌ಗಳನ್ನು ಬಳಸುವುದರಿಂದ ಚರ್ಮವು ಹೆಚ್ಚು ದಟ್ಟವಾಗಿ ಉಳಿಯಲು ಸಹಾಯ ಮಾಡುತ್ತದೆ.
ವಾರಕ್ಕೊಮ್ಮೆ ಉತ್ತಮ ಫೇಸ್ ಮಾಸ್ಕ್ ಬಳಸುವುದು ಕೂಡಾ ನಿಮ್ಮ ಚರ್ಮಕ್ಕೆ ಒಳ್ಳೆಯದಾಗಿದ್ದು, ಇದು ನಿಮ್ಮ ಚರ್ಮದ ಮೃದುತ್ವವನ್ನು ಹೆಚ್ಚಿಸಲು ಫೇಸ್​ ಮಾಸ್ಕ್​ಗಳು ಮತ್ತು ಅಕ್ಕಿ ಹಿಟ್ಟಿನ ಪುಡಿಯನ್ನು ಬಳಸುವುದು ಪ್ರಯೋಜನವಾಗಿದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net