ನಿಮ್ಮ ತುಟಿಗಳು ನೈಸರ್ಗಿಕವಾಗಿ ಮಿಂಚಬೇಕೆ? ಈ ಬೀಟ್‌ರೂಟ್ ಲಿಪ್​ಬಾಮ್​ ಟ್ರೈ ಮಾಡಿ ನೋಡಿ! Lip Balm

 Lip Balm (ಸಾಂದರ್ಭಿಕ ಚಿತ್ರ)
Lip Balm (ಸಾಂದರ್ಭಿಕ ಚಿತ್ರ)
Published on
Lip Balm: ಲಿಪ್‌ಸ್ಟಿಕ್ ಎಂಬುದು ಕೇವಲ ಬಣ್ಣದ ಲೇಪನವಲ್ಲ. ಇದು ಮಹಿಳೆಯರ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಪ್ರತಿಬಿಂಬ. ಹಬ್ಬದ ಸಂಭ್ರಮವಿರಲಿ ಅಥವಾ ಕಚೇರಿಯ ಕೆಲಸವಿರಲಿ, ಒಂದು ಸಣ್ಣ ಸ್ಪರ್ಶ ಮಹಿಳೆಯ ಮುಖದ ಕಾಂತಿಯನ್ನು ಹೆಚ್ಚಿಸಿ, ಅವಳಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಲಿಪ್​ಸ್ಟಿಕ್​, ಲಿಪ್​ಬಾಮ್​ಗಳಲ್ಲಿ ಕೆಮಿಕಲ್ಸ್​ ಹೆಚ್ಚಿರುತ್ತದೆ. ಹಾಗಾಗಿ ಮನೆಯಲ್ಲೇ ಸುಲಭವಾಗಿ ತಯಾರಿಸಿ ಬೀಟ್ರೂಟ್​ ಲಿಪ್ಸ್​ಸ್ಟಿಕ್​..

ಬೇಕಾಗುವ ಪದಾರ್ಥಗಳು

1 ಸಣ್ಣ ಬೀಟ್‌ರೂಟ್
2 ಟೇಬಲ್ ಸ್ಪೂನ್ ತುಪ್ಪ
1 ಚಮಚ ಆಲಿವ್​ ಆಯಿಲ್​

ಮಾಡುವ ವಿಧಾನ

ಮೊದಲು ಬೀಟ್​ರೂಟ್​ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅದನ್ನು ಒಣ ಬಟ್ಟೆ ಅಥವಾ ಕೈಯಿಂದ ಒತ್ತಿ ರಸವನ್ನು ತೆಗೆಯಿರಿ. ಈ ರಸವನ್ನು ಸಣ್ಣ ಪಾತ್ರೆಯಲ್ಲಿ ಹಾಕಿ ನೀರು ಆವಿಯಾಗುವವರೆಗೂ ಸ್ವಲ್ಪ ಕಾಯಿಸಿಕೊಳ್ಳಿ. ಇದಕ್ಕೆ ತುಪ್ಪ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ ಒಂದು ಸಣ್ಣ ಡಬ್ಬಿಗೆ ಸುರಿದು ಫ್ರಿಜ್​ನಲ್ಲಿ 30 ನಿಮಿಷಗಳು ಇಟ್ಟು ಗಟ್ಟಿಯಾಗಲು ಬಿಡಿ. ನಂತರ ನಿಮ್ಮ ತುಟಿಗಳಿಗೆ ಹಚ್ಚಿರಿ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net