ಪೋಷಕರೇ ಗಮನಿಸಿ: ನಿಮ್ಮ ಮನೆಯ ಅಲಂಕಾರಿಕ ಗಿಡಗಳೇ ಮಕ್ಕಳಿಗೆ ವಿಷವಾಗಬಹುದು, ಇಂದೇ ಎಚ್ಚೆತ್ತುಕೊಳ್ಳಿ... Dangerous Plants

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Dangerous Plants : ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಸಸ್ಯಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ವಾತಾವರಣವನ್ನು ಶುಚಿಯಾಗಿರಿಸುತ್ತದೆ. ಅಂದಹಾಗೇ ನಿಮ್ಮ ಮನೆಯಲ್ಲಿ ಮಕ್ಕಳು ಮತ್ತು ಸಾಕುಪ್ರಾಣಿಗಳಿದ್ದರೆ, ನೀವು ಎಂದಿಗೂ ನೆಡಬಾರದ ಕೆಲವು ಸಸ್ಯಗಳ ಬಗ್ಗೆ ತಿಳಿದಿರಬೇಕು.
ಏಕೆಂದರೆ, ಈ ಸಸ್ಯಗಳು ನೋಡಲು ಸುಂದರವಾಗಿದ್ದರೂ, ಅವು ವಿಷಕಾರಿಯಾಗಬಹುದು. ಆದರಿಂದ ನೀವೇನಾದರೂ ಮನೆಯಲ್ಲಿ ಸಸ್ಯಗಳನ್ನು ನೆಡಬೇಕೆಂದು ಪ್ರಯತ್ನಿಸುತ್ತಿದ್ದರೆ, ಈ ಸಸ್ಯಗಳನ್ನು ನೆಡಲೇಬೇಡಿ. ಹಾಗಿದ್ದರೆ, ನಾವು ಹೇಳಲು ಹೋಗುತ್ತಿರುವ ಸಸ್ಯಗಳು ಯಾವುದು ಎಂದು ನೋಡೋಣ ಬನ್ನಿ...

ಕಳ್ಳಿ ಗಿಡ

ಪಾಪಾಸುಕಳ್ಳಿಯ ಮುಳ್ಳುಗಳು ಕಣ್ಣಿಗೆ ಕಾಣದಷ್ಟು ಸಣ್ಣದಾಗಿರುತ್ತವೆ. ಮಕ್ಕಳು ಅಥವಾ ಸಾಕುಪ್ರಾಣಿಗಳು ಅವುಗಳನ್ನು ಮುಟ್ಟಿದಾಗ ಅವು ಚರ್ಮದೊಳಗೆ ಆಳವಾಗಿ ಇಳಿದು ಉರಿ ಅಥವಾ ಸೋಂಕನ್ನು ಉಂಟು ಮಾಡುತ್ತದೆ. ಆದಾಗ್ಯೂ, ಕೆಲವು ಜಾತಿಯ ಪಾಪಸುಕಳ್ಳಿಗಳಲ್ಲಿನ ಹಾಲು ಚರ್ಮದ ಮೇಲೆ ಬೀಳುವುದರಿಂದ ಇದು ತುರಿಕೆ, ಅಲರ್ಜಿಯಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಲಿಲ್ಲಿ ಸಸ್ಯ

ಲಿಲ್ಲಿ ಸಸ್ಯವು ಬೆಕ್ಕುಗಳಿಗೆ 'ಮಹಾಘಾತಕ' ಎಂದು ಹೇಳಲಾಗುತ್ತದೆ. ಈ ಗಿಡದ ಎಲೆ, ಹೂವು ಅಥವಾ ಅದರ ಪರಾಗವನ್ನು ಬೆಕ್ಕುಗಳು ಅಪ್ಪಿತಪ್ಪಿ ನೆಕ್ಕಿದರೆ ಅಥವಾ ತಿಂದರೆ, ಕೇವಲ 24-42 ಗಂಟೆಗಳಲ್ಲಿ ಅವುಗಳ ಮೂತ್ರಪಿಂಡ ವೈಫಲ್ಯ ಉಂಟಾಗುತ್ತದೆ. ಅದೇ ರೀತಿ ಮಕ್ಕಳು ಅವುಗಳನ್ನು ಮುಟ್ಟಿ ಬಾಯಿಗೆ ಹಾಕಿಕೊಂಡರೆ, ಕಿರಿಕಿರಿ, ವಾಂತಿ, ಅತಿಸಾರ ಉಂಟಾಗುತ್ತದೆ.

ದತುರಾ ಸಸ್ಯ

ದತುರಾ ಸಸ್ಯವನ್ನು ಹೆಚ್ಚಾಗಿ ನಿಮ್ಮ ಮನೆಯಲ್ಲಿ ಕುಂಡದಲ್ಲಿ ಬೆಳೆಸಲಾಗುತ್ತದೆ. ಆದರೆ ಆ ಸಸ್ಯದಲ್ಲಿರುವ ರಸವು ನಿಮ್ಮ ಕಣ್ಣುಗಳಿಗೆ ಬಿದ್ದರೆ, ಇದರಿಂದ ದೃಷ್ಟಿ ಹಾಳಾಗಬಹುದು. ಈ ಹೂವನ್ನು ತಿನ್ನುವುದರಿಂದ ಮೂರ್ಛೆ ಮತ್ತು ಸೆಳೆತ ಸೇರಿದಂತೆ ಹಲವಾರು ಅಡ್ಡಪರಿಣಾಮಗಳು ಉಂಟಾಗಬಹುದು. ಈ ಸಸ್ಯವು ಹೆಚ್ಚು ವಿಷವಾಗಿರುವುದರಿಂದ ವಿಪತ್ತಿಗೆ ಕಾರಣವಾಗಬಹುದು.

ಅರುಮ್

ಅರಲಿ ಸಸ್ಯವು ಹಳದಿ, ಗುಲಾಬಿ ಮತ್ತು ಇತರ ಬಣ್ಣಗಳಲ್ಲಿ ಹೂವುಗಳನ್ನು ಹೊಂದಿರುತ್ತದೆ. ಆದರೆ, ಇದರ ಎಲೆಗಳು ಮತ್ತು ಹಣ್ಣುಗಳು ಹೆಚ್ಚು ವಿಷಕಾರಿಯಾಗಿರುತ್ತದೆ. ಅವುಗಳು ಕೀಲು ನೋವು, ಊತ ಮತ್ತು ತುರಿಕೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಆದರೆ, ಅವುಗಳನ್ನು ತಿನ್ನುವುದು ಅತ್ಯಂತ ಹಾನಿಕಾರಕವಾಗಿದ್ದು, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು.

ಚೆರ್ರಿ ಲಾರೆಲ್

ಜನರು ತಮ್ಮ ಮನೆಯ ವಾತಾವರಣದಲ್ಲಿ ಚೆರ್ರಿ ಲಾರೆಲ್ ನೆಡಲು ಇಷ್ಟಪಡುತ್ತಾರೆ. ಇದು ನೋಡಲು ಸುಂದರವಾಗಿ ಕಾಣಿಸಿದರೂ, ಮನುಷ್ಯರಿಗೂ ಮತ್ತು ಪ್ರಾಣಿಗಳಿಗೆ ಹಾನಿಕರವಾಗಿದೆ. ನಿಮ್ಮ ಮನೆಯಲ್ಲಿ ಮಕ್ಕಳು ಮತ್ತು ಸಾಕು ಪ್ರಾಣಿಗಳಿದ್ದರೆ, ಇಂದೇ ಈ ಸಸ್ಯವನ್ನು ನೆಡುವುದನ್ನು ಬಿಟ್ಟುಬಿಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net