ಕೇವಲ ಸೌಂದರ್ಯವಲ್ಲ, ಈ ಸಸ್ಯಗಳು ನಿಮ್ಮ ಮನೆಯ ಗಾಳಿಯನ್ನೇ ಬದಲಾಯಿಸುತ್ತವೆ! Indoor Plants

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Indoor Plants: ಅನೇಕ ಒಳಾಂಗಣ ಸಸ್ಯಗಳು ನೈಸರ್ಗಿಕವಾಗಿ ಕೆಲವು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ದೀಕರಿಸಲು ಸಹಾಯ ಮಾಡುತ್ತವೆ. ಇದರ ಜೊತೆಗೆ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ನೀವೇನಾದರೂ, ಮನೆಯ ಆವರಣದಲ್ಲಿ ಗಿಡವನ್ನು ನೆಡಲು ಪ್ರಯತ್ನಿಸುತ್ತಿದ್ದರೆ, ಈ ರೀತಿಯಂತಹ ಗುಣಮಟ್ಟದ ಗಿಡವನ್ನು ಆಯ್ಕೆ ಮಾಡಿಕೊಳ್ಳಿ. ಇದು ಮನೆಯ ಆಕರ್ಷಣೆಯನ್ನು ಹೆಚ್ಚಿಸುವುದರ ಜೊತೆಗೆ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್ ಅನ್ನು ಸ್ಥಿತಿಸ್ಥಾಪಕ ಸಸ್ಯವೆಂದು ಕರೆಯಲಾಗುತ್ತದೆ. ಇದು ಫಾರ್ಮಾಲ್ಡಿಹೈಡ್, ಬೆಂಜೀನ್, ಕ್ಸೈಲೀನ್ ಮತ್ತು ಟೊಲುಯೀನ್​ನಂತಹ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುತ್ತದೆ. ಈ ಸಸ್ಯಕ್ಕೆ ಅಧಿಕ ಬೆಳಕಿನ ಸ್ಥಿತಿ ಬೇಕೆಂಬುದಿಲ್ಲ. ಹಾಗೆಯೇ ಹೆಚ್ಚು ನೀರಿನ ಅವಶ್ಯಕತೆಯು ಇಲ್ಲ. ಇದು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಈ ಸಸ್ಯಕ್ಕೆ ಹೆಚ್ಚಿನ ಆರೈಕೆ ಇಲ್ಲ . ಹಾಗಾಗಿ ನಿಮ್ಮ ಮನೆಯಲ್ಲಿ ಈ ಗಿಡವನ್ನು ಬೆಳಸಬಹುದು.

ಪೀಸ್ ಲಿಲ್ಲಿ ಸಸ್ಯಗಳು

ಪೀಸ್ ಲಿಲಿ ಮನೆಯ ಅತ್ಯಂತ ಜನಪ್ರಿಯ ಒಳಾಂಗಣ ಸಸ್ಯಗಳಲ್ಲಿ ಒಂದಾಗಿದೆ. ಇದು NASA ಕ್ಲೀನ್ ಏರ್ ಸ್ಟಡಿಯಲ್ಲಿ ಗಾಳಿಯನ್ನು ಶುದ್ಧೀಕರಿಸುವ ಟಾಪ್-10 ಸಸ್ಯಗಳ ಪಟ್ಟಿಯಲ್ಲಿದೆ. ಬೆಂಜೀನ್, ಫಾರ್ಮಾಲ್ಡಿಹೈಡ್, ಟ್ರೈಕ್ಲೋರೊಎಥಿಲೀನ್, ಜೈಲೀನ್, ಅಮೋನಿಯಾ ಎಂಬ ವಿಷಕಾರಿ ಅನಿಲಗಳನ್ನು ಹೊರಗೆ ಹಾಕಿ ಮನೆಯ ಒಳಾಂಗಣದಲ್ಲಿ ಗಾಳಿಯನ್ನು ಸುಧಾರಿಸುತ್ತದೆ. ಈ ಸಸ್ಯವು ಕಡಿಮೆ ಬೆಳಕಿನಲ್ಲಿ ಬೆಳೆಯುತ್ತದೆ. ನೀರು ಹಾಕಲು ಮರೆತರೂ 10-15 ದಿನ ಬದುಕುತ್ತದೆ.

ಸ್ಪೈಡರ್ ಪ್ಲಾಂಟ್

ಸ್ಪೈಡರ್ ಪ್ಲಾಂಟ್ ಮನೆಯ ಅತ್ಯುತ್ತಮ ಏರ್ ಪ್ಯೂರಿಫೈಯರ್ ಸಸ್ಯಗಳಲ್ಲಿ ಒಂದಾಗಿದೆ. ಇದು NASA ಕ್ಲೀನ್ ಏರ್ ಸ್ಟಡಿಯಲ್ಲಿ ಇದು ಫಾರ್ಮಾಲ್ಡಿಹೈಡ್, ಜೈಲೀನ್, ಟೊಲ್ಯೂಯೀನ್, ಕಾರ್ಬನ್ ಮಾನಾಕ್ಸೈಡ್, ಬೆಂಜೀನ್ ಎಂಬ ವಿಷಕಾರಿ ಅನಿಲಗಳನ್ನು ಶೇ. 90 ರಷ್ಟು ತೆಗೆದುಹಾಕುತ್ತದೆ. ಇದು 24 ಗಂಟೆಗಳಲ್ಲಿ 200 ಚ.ಮೀಟರ್ ಪ್ರದೇಶದ ಗಾಳಿಯನ್ನು ಶುದ್ಧಗೊಳಿಸುತ್ತದೆ. ಈ ಸಸ್ಯವನ್ನು ಬೆಳೆಸಲು ಅಧಿಕ ಖರ್ಚು ಇರುವುದಿಲ್ಲ. ಕಡಿಮೆ ಬೆಳಕು, ಕಡಿಮೆ ನೀರು ಸಾಕು ಇದ್ದರೂ ಈ ಸಸ್ಯ ಬೆಳವಣಿಗೆಯಾಗುತ್ತದೆ.

ಅಲೋವೆರಾ

ಅಲೋವೆರಾ ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಗಾಳಿಯಲ್ಲಿ ಫಾರ್ಮಾಲ್ಡಿಹೈಡ್ ಮತ್ತು ಬೆಂಜೀನ್‌ನಂತಹ ರಾಸಾಯನಿಕಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಸುಲಭವಾಗಿ ಬೆಳೆಯುತ್ತದೆ ಮತ್ತು ಹೆಚ್ಚು ನೀರಿನ ಅಗತ್ಯವಿರುವುದಿಲ್ಲ. ಇದು ನಿಮ್ಮ ಮನೆಯ ವಾತಾವರಣವನ್ನು ಸುಂದರವಾಗಿರಿಸುತ್ತದೆ.

ಬೋಸ್ಟನ್ ಫರ್ನ್

ಬೋಸ್ಟನ್ ಜರೀಗಿಡಗಳು ಫಾರ್ಮಾಲ್ಡಿಹೈಡ್, ಜೈಲೀನ್, ಟೊಲ್ಯೂಯೀನ್, ಬೆಂಜೀನ್‌ಗಳನ್ನು ತೆಗೆದುಹಾಕುವುದರ ಜೊತೆಗೆ ಗಾಳಿಯಲ್ಲಿ ಅತಿ ಹೆಚ್ಚು ಆರ್ದ್ರತೆ (humidity) ಉತ್ಪಾದಿಸುವ ಸಸ್ಯವಾಗಿದೆ. ಒಣಗಿದ ಒಳಾಂಗಣ ಗಾಳಿಯನ್ನು ನೈಸರ್ಗಿಕ ಹ್ಯೂಮಿಡಿಫೈಯರ್‌ನಂತೆ ತಂಪಾಗಿಸಿ, ಉಸಿರಾಟಕ್ಕೆ ಸುಲಭವಾಗುವಂತೆ ಮಾಡುತ್ತದೆ.ಈ ಸಸ್ಯವು ಕಣ್ಣಿನ ಒಣಗುವಿಕೆ, ಗಂಟಲು ಒಣಗುವಿಕೆ, ಚರ್ಮದ ಒಣತನವನ್ನು ಕಡಿಮೆ ಮಾಡುತ್ತದೆ. ಹ್ಯಾಂಗಿಂಗ್ ಬ್ಯಾಸ್ಕೆಟ್‌ನಲ್ಲಿ ಬೆಳೆಸುವುದರಿಂದ ಮನೆಗೆ ಸುಂದರ ನೋಟವನ್ನು ಉಂಟು ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net